IMG 20230302 WA0017

Kerla:ಮುಂಚೂಣಿಯ ವೆಡ್ಡಿಂಗ್ ಡೆಸ್ಟಿನೇಷನ್ ಆಗಲು ಕೇರಳ ಸಜ್ಜು…!

BUSINESS


ಮುಂಚೂಣಿಯ ವೆಡ್ಡಿಂಗ್ ಡೆಸ್ಟಿನೇಷನ್ ಆಗಲು ಕೇರಳ ಸಜ್ಜು

ಬೆಂಗಳೂರು, ಮಾರ್ಚ್‌ ೦೨: ಸರಿಸಾಟಿ ಇರದ ತನ್ನ ನೈಸರ್ಗಿಕ ಸೌಂದರ್ಯ, ಆಕರ್ಷಕ ತಾಣಗಳು, ಅತ್ಯುತ್ತಮ ವಸತಿ ಮತ್ತು ಬ್ಯಾಂಕ್ವೆಟ್ ಸೌಲಭ್ಯ ಹಾಗೂ ಕನೆಕ್ಟಿವಿಟಿಯಿಂದ ಕೇರಳ ಅತ್ಯುತ್ತಮ ವಿವಾಹದ ತಾಣವಾಗುವತ್ತ ದಾಪುಗಾಲು ಹಾಕುತ್ತಿದೆ. ಇದಕ್ಕೆ ಸಾಕ್ಷಿಯಂತೆ ಹೆಚ್ಚಿನ ಸಂಖ್ಯೆಯ ಡೆಸ್ಟಿನೇಷನ್ ವೆಡ್ಡಿಂಗ್‌ ಕಾರ್ಯಕ್ರಮಗಳು ಕೇರಳದಲ್ಲಿ ಆಯೋಜನೆಯಾಗುತ್ತಿವೆ.

ಅದು ತಾಳೆಮರಗಳ ಹಿಂದಿರುವ ಹಿನ್ನೀರಿನ ಪ್ರಶಾಂತ ವಾತಾವರಣವಿರಲಿ, ಆಕರ್ಷಕ ಸಮುದ್ರ ತೀರಗಳಿರಲ್ಲಿ ಅಥವಾ ವಿಸ್ತಾರವಾದ ಚಹಾ ತೋಟಗಳನ್ನು ಒಳಗೊಂಡ ಗಿರಿಧಾಮಗಳಿರಲಿ ಈ ರಾಜ್ಯವು ಜೀವನದ ಹೊಸ ಪ್ರಾರಂಭಕ್ಕೆ ಅಣಿಯಾಗಲು ಅತ್ಯುತ್ತಮ ತಾಣವಾಗಿದೆ.

ಜಾಗತಿಕ ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ಪಡೆದಿರುವ ಕೇರಳ ಪ್ರವಾಸೋದ್ಯಮವು ರಾಜ್ಯವನ್ನು ಎಲ್ಲ ಋತುಗಳ ತಾಣವಾಗಿಸಲು ಹೊಸ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸಿದೆ ಮತ್ತು ಹೊಸ ತಲೆಮಾರಿನ ಪ್ರವಾಸಿಗರನ್ನು ವಿರಾಮ, ನವೋತ್ಸಾಹ ನೀಡುವ ಮತ್ತು ಕಲಿಕೆಯ ಅನುಭವ ಅವರಿಗೆ ಎದುರಾಗುವಂತೆ ಮತ್ತು ಅವರು ಗ್ರಾಮೀಣ ಪ್ರದೇಶದ ಮತ್ತು ಕಡಿಮೆ ತಿಳಿದ ಪ್ರದೇಶಗಳನ್ನು ಅನಾವರಣಗೊಳಿಸಲು ನೆರವಾಗುತ್ತವೆ.

IMG 20230302 WA0016

ಕೇರಳ ಪ್ರವಾಸೋದ್ಯಮಕ್ಕೆ ೨೦೨೨ ನೇ ವರ್ಷ ಗಮನಾರ್ಹ ಸಾಧನೆಗಳ ಹಾಗೂ ಜಾಗತಿಕ ಮತ್ತು ರಾಷ್ಟ್ರೀಯ ಗೌರವಗಳನ್ನು ತಂದುಕೊಟ್ಟಂತಹ ವರ್ಷವಾಗಿದೆ.
ಟೈಮ್ ಪತ್ರಿಕೆಯು ಕೇರಳವನ್ನು ೨೦೨೨ರಲ್ಲಿ ಆವಿಷ್ಕರಿಸಲು ೫೦ ಅಸಾಧಾರಣ ತಾಣಗಳು’ ಪಟ್ಟಿಯಲ್ಲಿ ಒಂದಾಗಿ ಗುರುತಿಸಿದೆ. ಕೊಂಡೆ ನಾಸ್ಟ್ ಟ್ರಾವೆಲ್ಲರ್ ಕೇರಳದಅಯ್ಮನಮ್ ಗ್ರಾಮ’ ವನ್ನು ೨೦೨೨ರಲ್ಲಿ ಭೇಟಿ ನೀಡಬೇಕಾದ ಅತ್ಯುತ್ತಮ ೩೦ ತಾಣಗಳಲ್ಲಿ ಒಂದು ಎಂದು ಗುರುತಿಸಿದೆ, ರಾಜ್ಯವು ಟ್ರಾವೆಲ್ ಅಂಡ್ ಲೀಷರ್ ಪತ್ರಿಕೆಯಿಂದ ಗ್ಲೋಬಲ್ ವಿಷನ್ ಅವಾರ್ಡ್’ಗೆ ಆಯ್ಕೆಯಾಗಿದೆ. ರಾಜ್ಯವು ಟ್ರಾವೆಲ್ ಪ್ಲಸ್ ಲೀಷರ್ ಓದುಗರಿಂದಬೆಸ್ಟ್ ವೆಡ್ಡಿಂಗ್ ಡೆಸ್ಟಿನೇಷನ್’ ಎಂದು ಆಯ್ಕೆಯಾಗಿದೆ.
ಈ ಮಾರ್ಕೆಟಿಂಗ್ ಅಭಿಯಾನಗಳ ಕುರಿತು ಪ್ರವಾಸೋದ್ಯಮ ಸಚಿವ ಶ್ರೀ ಪಿ.ಎ.ಮೊಹಮದ್ ರಿಯಾಸ್, “ಈಗ ನಮ್ಮ ಗಮನವು ಕೇವಲ ಸಮುದ್ರತೀರಗಳು, ಹಿನ್ನೀರು ಮತ್ತು ಗಿರಿಧಾಮಗಳಿಗೆ ಸೀಮಿತವಾಗಿಲ್ಲ” ಎಂದರು. “ನಾವು ಈಗ ಇಡೀ ಕೇರಳವನ್ನು ಪರಸ್ಪರ ಸಂಪರ್ಕಿತ ಪ್ರವಾಸೋದ್ಯಮ ಸ್ವರ್ಗವಾಗಿಸಲು ಬಯಸಿದ್ದು ಸಂದರ್ಶಕರಿಗೆ ಅಸಂಖ್ಯ ಆಯ್ಕೆಗಳು ಮತ್ತು ವಿಸ್ತಾರ ಅನುಭವಗಳು ದೊರೆಯುತ್ತವೆ. ಈ ಎಲ್ಲವೂ ವೈವಿಧ್ಯಮಯ ಅನುಭವ ನಿರೀಕ್ಷಿಸುವ ಕೇರಳ ಪ್ರವಾಸವನ್ನು ಅದು ದೋಣಿಮನೆ ಅಥವಾ ಕಾರಾವಾನ್ ವಾಸವಾಗಿರಲಿ, ಪಾರಿಸರಿಕ ಜವಾಬ್ದಾರಿಯುತ ಸಾಹಸ ಚಟುವಟಿಕೆಗಳಾಗಲಿ ಅಥವಾ ಪರಂಪರೆ ಹಾಗೂ ಸಾಂಸ್ಕೃತಿಕ ಕೇಂದ್ರಗಳ ಭೇಟಿಯಾಗಿರಲಿ ಅದನ್ನು ಸಮಗ್ರ ಅನುಭವವಾಗಿಸುತ್ತವೆ” ಎಂದರು.

“ಕೇರಳಕ್ಕೆ ಆದರ್ಶ ವಿವಾಹದ ತಾಣವಾಗಿ ವಿಕಾಸಗೊಳ್ಳುವ ಅಪಾರ ಸಾಮರ್ಥ್ಯವಿದೆ ಮತ್ತು ನಮ್ಮ ಪ್ರವಾಸೋದ್ಯಮದಲ್ಲಿ ಅದು ಪ್ರಮುಖ ವಲಯವಾಗಲಿದೆ. ಕೇರಳವನ್ನು ಜಾಗತಿಕ ವಿವಾಹದ ತಾಣವನ್ನಾಗಿಸಲು ಮತ್ತು ಹನಿಮೂನರ್‌ಗಳ ಸ್ವರ್ಗವಾಗಿಸಲು ಸರಣಿ ಮಾರ್ಕೆಟಿಂಗ್ ಚಟುವಟಿಕೆಗಳನ್ನು ಯೋಜಿಸಲಾಗಿದೆ” ಎಂದರು.

ಕೇರಳ ಪ್ರವಾಸೋದ್ಯಮದ ಮಾಹಿತಿ ಅಧಿಕಾರಿ ಸಜೀವ್‌ ಮಾತನಾಡಿ, ಕಳೆದ ವರ್ಷವು ರಾಜ್ಯದ ಪ್ರವಾಸೋದ್ಯಮಕ್ಕೆ ಅದರಲ್ಲಿಯೂ ಮುಖ್ಯವಾಗಿ ಕೋವಿಡ್-೧೯ ಸಾಂಕ್ರಾಮಿಕದಿಂದ ಸಂಕಷ್ಟಕ್ಕೆ ಸಿಲುಕಿದ್ದ ಗಳಿಕೆ ಮತ್ತು ಸಾಧನೆಗಳ ವರ್ಷವಾಗಿದೆ. “ಕೇರಳದ ದೋಣಿಮನೆಗಳು, ಕಾರವಾನ್ ವಾಸಗಳು, ಜಂಗಲ್ ಲಾಡ್ಜ್ಗಳು, ಪ್ಲಾಂಟೇಷನ್ ಭೇಟಿಗಳು, ಹೋಮ್‌ಸ್ಟೇಗಳು, ಆಯುರ್ವೇದ-ಆಧರಿತ ಸ್ವಾಸ್ಥ್ಯ ಪರಿಹಾರಗಳು, ಹಳ್ಳಿ ಪ್ರದೇಶದ ನಡೆದಾಟ ಮತ್ತು ಬೆಟ್ಟಗಳ ಚಾರಣದ ಸಾಹಸ ಚಟುವಟಿಕೆಗಳು ಸಂದರ್ಶಕರಿಗೆ ವಿಶಿಷ್ಟ ಅನುಭವ ನೀಡುತ್ತವೆ” ಎಂದರು.
“ನಮ್ಮ ಪ್ರಯತ್ನಗಳು ಪ್ರವಾಸಿಗರಿಗೆ ನಮ್ಮ ಸುಂದರ ರಾಜ್ಯದ ಆವಿಷ್ಕಾರಗೊಳ್ಳದ ಸ್ಥಳಗಳಿಗೆ ಕೊಂಡೊಯ್ಯುವ ಉದ್ದೇಶ ಹೊಂದಿವೆ” ಎಂದರು.

IMG 20230302 WA0018

“ಕೇರಳದ ಹೊಸ ಯೋಜನೆಗಳಾದ ಕಾರವಾನ್ ಟೂರಿಸಂನ “ಕೆರವಾನ್ ಕೇರಳ” ಪ್ರದರ್ಶಿಸಲು ಮತ್ತು ಅದರ ಪ್ರಮುಖ ಸಂಪತ್ತಾದ ಸಮುದ್ರತೀರಗಳು, ಗಿರಿಧಾಮಗಳು, ದೋಣಿಮನೆಗಳು ಮತ್ತು ಹಿನ್ನೀರಿನ ವಲಯವು ಸಂದರ್ಶಕರ ಅನುಭವದ ಸಂಪೂರ್ಣತೆಯನ್ನು ಎತ್ತರಿಸಲು ಹೆಚ್ಚು ಒತ್ತು ನೀಡುವ ವಿಸ್ತಾರ ಯೋಜನೆಗಳನ್ನು ರೂಪಿಸಿದ್ದೇವೆ” ಎಂದರು.

“ಪ್ರವಾಸೋದ್ಯಮ ಉತ್ತೇಜಿಸಲು ನಮ್ಮ ಹೊಸ ಉಪಕ್ರಮಗಳು ಪರಿಸರಕ್ಕೆ ಪೂರಕ ಮತ್ತು ಸುಸ್ಥಿರತೆಗೆ ಬದ್ಧವಾಗಿವೆ” ಎಂದರು.

ಕೇರಳ ಕಳೆದ ವರ್ಷ ಸ್ಥಳೀಯ ಪ್ರವಾಸಿಗರ ಸಮಖ್ಯೆಯಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಈ ರಾಜ್ಯವು ಈ ವರ್ಷದ ಮೊದಲ ಮೂರು ತ್ರೈಮಾಸಿಕದಲ್ಲಿ ೧.೩೩ ಕೋಟಿ ಪ್ರವಾಸಿಗರಿಗೆ ಆತಿಥ್ಯ ನೀಡಿದೆ. ಈ ಸಂಖ್ಯೆಯು ಸಾಂಕ್ರಾಮಿಕ ಪೂರ್ವ ವರ್ಷದಲ್ಲಿ ಶೇ.೧.೯೪ರಷ್ಟು ಹೆಚ್ಚಾಗಿತ್ತು.

ಕಳೆದ ವರ್ಷ ರಾಜ್ಯದ ಜವಾಬ್ದಾರಿಯುತ ಪ್ರವಾಸೋದ್ಯಮ ಉಪಕ್ರಮ STREET project ಪ್ರಾಜೆಕ್ಟ್ ಅನ್ವಯ ವರ್ಲ್ಡ್ ಟ್ರಾವೆಲ್ ಮಾರ್ಕೆಟ್ World Travel Market (WTM), ಲಂಡನ್‌ನ ಜಾಗತಿಕ ಪ್ರಶಸ್ತಿ ಪಡೆದಿದೆ. ಅಲ್ಲದೆ ಇಂಡಿಯಾ ಟುಡೇ `ಬಿಗ್ ಸ್ಟೇಟ್ಸ್’ ವಿಭಾಗದಲ್ಲಿ ಕೇರಳವನ್ನು ಅತ್ಯಂತ ಮುಂಚೂಣಿಯ ಪರ್ಫಾರ್ಮರ್ ಎಂದು ಆಯ್ಕೆ ಮಾಡಿದೆ. ಡಿಸೆಂಬರ್ ೨೦೨೨-ಏಪ್ರಿಲ್ ೨೦೨೩ರ ಪ್ರಸ್ತುತ ಕೊಚ್ಚಿ-ಮುಜಿರಿಸ್ ಬೈಯೆನ್ನೇಲ್ ಕಲಾ ಪ್ರೇಮಿಗಳಿಂದ ಹಾಗೂ ವಿಶ್ವದ ಪ್ರವಾಸಿಗರಿಂದ ಅಭೂತಪೂರ್ವ ಪ್ರತಿಕ್ರಿಯೆ ಪಡೆಯುತ್ತಿದೆ.

ಬಿ೨ಬಿ ಸಹಯೋಗದ ಮೊದಲ ಹಂತವು ಜನವರಿಯಲ್ಲಿ ದೆಹಲಿ, ಚಂಡೀಗಢ, ಜೈಪುರ ಮತ್ತು ಲಖನೌಗಳಲ್ಲಿ ನಡೆಯಿತು ಮತ್ತು ಎರಡನೇ ಹಂತ ಅಹಮದಾಬಾದ್, ಚೆನ್ನೈ ಮತ್ತು ಹೈದರಾಬಾದ್‌ಗಳಲ್ಲಿ ಫೆಬ್ರವರಿಯಲ್ಲಿ ನಡೆದಿದ್ದು ಉದ್ಯಮದಿಂದ ಅಭೂತಪೂರ್ವ ಪ್ರತಿಕ್ರಿಯೆ ಪಡೆಯಿತು.

ಕೇರಳ ಪ್ರವಾಸೋದ್ಯಮವು ಭವ್ಯವಾದ ಉಪಸ್ಥಿತಿ ಇದ್ದು ಇತ್ತೀಚೆಗೆ ಪೂರೈಸಲಾದ ಒಟಿಎಂ (Outbound Travel Market) ಮುಂಬೈ ಮತ್ತು ದಕ್ಷಿಣ ಏಷ್ಯನ್ ಟ್ರಾವೆಲ್ ಅಂಡ್ ಟೂರಿಸಂ ಎಕ್ಸ್ಚೇಂಜ್ South Asian Travel and Tourism Exchange (SATTE), ಇದ್ದು ರಾಜ್ಯದ ವಿಶಿಷ್ಟ ಪ್ರವಾಸಿ ವಿಶೇಷತೆಗಳನ್ನು ಪ್ರದರ್ಶಿಸಿತು.