IMG 20230301 WA0019

ಮಧುಗಿರಿ:ತುಮುಲ್ ನಿಂದ ಆರೋಗ್ಯ ಶಿಬಿರ…!

DISTRICT NEWS ತುಮಕೂರು

ಮಧುಗಿರಿ : ಕೊಂಡವಾಡಿ ಚಂದ್ರಶೇಖರ್ ಹಾಗೂ ಮಹಾಲಿಂಗಪ್ಪನವರಿಂದಾಗಿ ಜಿಲ್ಲೆಯಲ್ಲಿನ ತುಮುಲ್ ಒಕ್ಕೂಟವು ಸಧೃಡವಾಗಿದೆ ಎಂದು ಎಲೆರಾಂಪುರದ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಡಾ.ಹನುಮಂತನಾಥಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ಮಿಡಗೇಶಿ ಹೋಬಳಿಯ ಹೊಸಕೆರೆಯ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ತುಮುಲ್ ಹಾಗೂ ವಿವಿಧ ಸಂಘ ಸಂಸ್ಥೆಗಳು ಮತ್ತು ಆಸ್ಪತ್ರೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಬೃಹತ್ ಆರೋಗ್ಯ ಶಿಬಿರದ ದಿವ್ಯ ಸಾನಿದ್ಯವಹಿಸಿ ಮಾತನಾಡಿದ ಅವರು , ರೈತರು ಆರ್ಥಿಕವಾಗಿ ನೆಮ್ಮದಿಯಿಂದ ಜೀವನ ನಡೆಸಲು ಹೈನುಗಾರಿಕೆ ಸಹಕಾರಿಯಾಗಿದೆ. ಕೊಂಡವಾಡಿ ಚಂದ್ರಶೇಖರ್ ನೀಡಿದ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ಜಾರಿ ಮಾಡಲಾಗಿರುವ ಅನೇಕ ಯೋಜನೆಗಳು ಹಾಲು ಉತ್ಪಾದಕರಿಗೆ ಇಂದೂ ಆಸರೆಯಾಗಿವೆ, ಶಾಸಕ ವೀರಭದ್ರಯ್ಯನವರು ತಾಲೂಕಿನಲ್ಲಿ ಅವರ ಅವಧಿಯಲ್ಲಿ ನೂತನ ಡೇರಿ ಕಟ್ಟಡಗಳ ನಿರ್ಮಾಣಕ್ಕೆ ತಲಾ 3 ಲಕ್ಷ ರೂಗಳ ಅನುದಾನ ನೀಡಿ ರೈತಸ್ನೇಹಿ ಯಾಗಿದ್ದಾರೆ ಇಂತಹ ಕಳಂಕ ರಹಿತ ಒಕ್ಕೂಟವನ್ನು ಉಳಿಸಲು ಎಲ್ಲರೂ ಶ್ರಮಿಸಬೇಕು ಎಂದರು.

IMG 20230301 WA0020

ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ಕೊಂಡವಾಡಿ ಚಂದ್ರಶೇಖರ್ ಜಾರಿಗೆ ತಂದ ರೈತ ಕಲ್ಯಾಣ ಟ್ರಸ್ಟ್‌ ನಿಂದ ಹೈನೋದ್ಯಮ ಜಿಲ್ಲೆಯಲ್ಲಿ ಸಧೃಡವಾಗಿ ಬೆಳೆಯತೊಡಗಿದೆ. ತಾಲೂಕಿನಲ್ಲಿ ಭೀಕರ ಬರಗಾಲ ಹಾಗೂ ಕರೋನಾ ಸಂಕಷ್ಟದ ನಡುವೆಯೂ ಕಳೆದ 4.5 ವರ್ಷದಲ್ಲಿ 1200 ಕೋಟಿ ರೂ ಅನುದಾನ ತಂದು ಅಭಿವೃದ್ಧಿಯ ಆಡಳಿತವನ್ನು ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಮಧುಗಿರಿಯನ್ನು ಜಿಲ್ಲಾಕೇಂದ್ರ ಮಾಡುವುದು , ಕೆರೆಗಳಿಗೆ ನೀರು , ನಿರುದ್ಯೋಗ ನಿವಾರಣೆಗಾಗಿ ಕೈಗಾರಿಕೆ , ಬೆಟ್ಟಕ್ಕೆ ರೋಪ್ ವೇ , ಹಾಗೂ ಒಂದು ಹೈಟೆಕ್ ಆಸ್ಪತ್ರೆ ತರುವ ಉದ್ದೇಶ ಹೊಂದಿದ್ದೇನೆ ಮುಂದೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ಖಚಿತವಾಗಿದ್ದು. ಎಲ್ಲರೂ ಅವರ ಕೈ ಬಲಪಡಿಸಲು ಈ ಬಾರಿಯೂ ನನಗೆ ನೀವು ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.

ನಿರ್ದೇಶಕ ಕೊಂಡವಾಡಿಚಂದ್ರಶೇಖರ್ ಮಾತನಾಡಿ ಟ್ರಸ್ಟ್ ನನ್ನ ಕನಸಿನ ಕೂಸಾಗಿದ್ದು ಇದರಿಂದ ಹಾಲು ಉತ್ಪಾದಕರ ಕುಟುಂಬಕ್ಕೆ ನೆರವು ದೊರೆಯುತ್ತಿದೆ, ಮಕ್ಕಳ ಶೈಕ್ಷಣಿಕ , ಕುಟುಂಬದ ಆರೋಗ್ಯ , ಹೈನೋದ್ಯಮಕ್ಕೆ ನೆರವು ಹಾಗೂ ಪರಿಹಾರ ಒದಗಿಸಲಾಗುತ್ತಿದೆ. ನಾನು ಕಾಂಗ್ರೇಸ್ ನವನಾದರೂ ಎಂದೂ ದ್ವೇಷದ ಕಾರಣ ಮಾಡಿಲ್ಲ. ನಾನೂ ಕೂಡ ಕಾಂಗ್ರೆಸ್‍ನಲ್ಲಿ ಟಿಕೆಟ್ ಕೇಳಿದ್ದು ದ್ವೇಷದ ರಾಜಕಾರಣ ಮಾಡುವವರನ್ನು ತಿರಸ್ಕರಿಸಿ. ಇದೇ ವೇಳೆ ಅನ್ನಭಾಗ್ಯ ಕಾರ್ಯಕ್ರಮ ಟೀಕಿಸಿದ್ದ ಸಂಸದ ಬಸವರಾಜು ವಿರುದ್ಧ ಕಿಡಿಕಾರಿದ ಅವರು ಬಡವರ ಕಷ್ಟ ತಿಳಿಯದ ಸಂಸದ ಎಂದರು.

ಜಿ.ಪಂ. ಮಾಜಿ ಸದಸ್ಯ ಕೆಂಚಮಾರಯ್ಯ ಮಾತನಾಡಿ, ಕೊಂಡವಾಡಿಯವರು ಜಿಲ್ಲೆಯ ಹೈನೋದ್ಯಮಕ್ಕೆ ಶಕ್ತಿ ತುಂಬಿದ್ದಾರೆ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸುತ್ತಾ ಬಡವರ ಆರೋಗ್ಯದ ಬಗ್ಗೆ ಕಾಳಜಿವಹಿಸುತ್ತಿದ್ದಾರೆ ರವರಿಗೆ ಮುಂದೆ ರಾಜಕೀಯ ಭವಿಷ್ಯವಿದೆ. ವಿಕೃತ ಮನಸ್ಸಿನ ಸಂಸದ ಬಸವರಾಜು ಅನ್ನಭಾಗ್ಯದ ಬಗ್ಗೆ ಜನ ಸೋಮಾರಿಗಳಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಇವರಿಗೆ ಅನ್ನದ ಮಹತ್ವ ತಿಳಿದಿಲ್ಲ. ಇವರು ಆಯ್ಕೆಯಾಗಲು ಜಿಲ್ಲೆಯಲ್ಲಿ ಸಹಕರಿಸಿದ ನಾಯಕರನ್ನು ಸಂಸದರ ಜೊತೆ ಪ್ರಶ್ನಿಸಬೇಕು. ಇಂತಹ ಬಡವರ ವೈರಿಗಳಾಗಿರುವ ರಾಜಕಾರಣಿಗಳ ಮಧ್ಯೆ ವೀರಭದ್ರಯ್ಯನವರಂತ ಸಭ್ಯ ರಾಜಕಾರಣಿಯಿದ್ದು ಮುಂದೆ ಅವರಿಗೆ ಒಳಿತಾಗಲಿದೆ ಎಂದರು.

ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆ ಮುಖ್ಯಸ್ಥ ಲಕ್ಷ್ಮೀನಾರಾಯಣ್ ಮಾತನಾಡಿ ನಮ್ಮ ಆಸ್ಪತ್ರೆಯು ಸದಾ ಬಡವರ ಪರವಾಗಿ ಸೇವೆ ನೀಡುತ್ತಿದೆ ಇದರ ಮಾಲೀಕರು ಮಧುಗಿರಿಯವರೇ ಆಗಿದ್ದಾರೆ. ಶಿಬಿರದಲ್ಲಿ ತಪಾಸಣೆ ನಡೆಸಿ ಹೆಚ್ಚಿನ ಚಿಕಿತ್ಸೆ ಬೇಕಿದ್ದರೆ ಶೇ.70 ರಷ್ಟು ವಿನಾಯಿತಿಯೊಂದಿಗೆ ಜನರಿಗೆ ಆರೋಗ್ಯ ಸೇವೆ ನೀಡುತ್ತೇವೆ. ನೊಂದವರು ಇಂತಹ ಶಿಬಿರದ ಅನುಕೂಲ ಪಡೆಯಬೇಕು ಎಂದರು.

ಈ ಸಂದರ್ಭದಲ್ಲಿ ತುಮುಲ್ ಅಧ್ಯಕ್ಷ ಮಹಾಲಿಂಗಪ್ಪ , ವ್ಯವಸ್ಥಾಪಕ ಸುರೇಶ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ತಾ.ಪಂ. ಮಾಜಿ ಅಧ್ಯಕ್ಷೆ ಸುನಂದ ಸಿದ್ದಪ್ಪ, ಮಾಜಿ ಸದಸ್ಯ ದೊಡ್ಡಯ್ಯ, ನಾಗಭೂಷಣ್, ಪುರಸಭೆ ಸದಸ್ಯ ಜಗನ್ನಾಥ್ , ಮುಖಂಡರಾದ ಬಿಜವರ ಶ್ರೀನಿವಾಸ್ , ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸುಮುಖ್ ಚಂದ್ರಶೇಖರ್, ಆರ್.ಕೆ.ರೆಡ್ಡಿ, ಚೆನ್ನಲಿಂಗಪ್ಪ, ಉಮೇಶ್, ತಾಲೂಕು ವಿಸ್ತರಣಾಧಿಕಾರಿಗಳಾದ ಶಂಕರ್ ನಾಗ್, ಗಿರೀಶ್, ದರ್ಶನ್, ಧರ್ಮವೀರ್, ಮಾರೇಗೌಡ, ಮಹಾಲಕ್ಷ್ಮೀ, ಡೇರಿ ಆಡಳಿತ ಮಂಡಳಿ ಸದಸ್ಯರು, ಹಾಲು ಉತ್ಪಾದಕರು ಹಾಗೂ ಸಾವಿರಾರು ಸಾರ್ವಜನಿಕರು ಭಾಗವಹಿಸಿದ್ದರು.

ವರದಿ. ಲಕ್ಷ್ಮಿಪತಿ ದೊಡ್ಡ ಯ ಲ್ಕೂರು.