Screenshot 2023 03 01 13 15 25 850 com.google.android.apps .nbu .files

Karnataka: ರಾಜ್ಯ ಸರ್ಕಾರಿ ನೌಕರರ ಮುಷ್ಕರ ಅಂತ್ಯ….!

Genaral STATE

ಸರ್ಕಾರಿ ನೌಕರರಿಗೆ ಶೇ 17 ರಷ್ಟು ವೇತನ ಹೆಚ್ಚಳಕ್ಕೆ ತೀರ್ಮಾನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಮಾರ್ಚ್ 01: ರಾಜ್ಯ ಸರ್ಕಾರಿ ನೌಕರರಿಗೆ ಮಧ್ಯಂತರ ಪರಿಹಾರವಾಗಿ ಶೇ 17 ರಷ್ಟು ವೇತನ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

ಮುಖ್ಯಮಂತ್ತಿಗಳ ವತನ

ಅವರು ಇಂದು ತಮ್ಮ ರೇಸ್ ಕೋರ್ಸ್ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.

Adobe Scan 01 Mar 2023 1
NPS ಆದೇಶ ಪ್ರತಿ

ಸಮಿತಿ ರಚನೆ
ಈ ಕುರಿತು ತಕ್ಷಣವೇ ಆದೇಶ ಹೊರಬೀಳಲಿದೆ. ಎನ್.ಪಿ.ಎಸ್ ಕುರಿತು ಇತರೆ ರಾಜ್ಯಗಳಲ್ಲಿ ಯಾವ ರೀತಿ ಇದೆ, ಅದರ ಆರ್ಥಿಕ ಪರಿಣಾಮ ಇವುಗಳ ಕುರಿತು ಅಧ್ಯಯನ ಕೈಗೊಂಡು ವರದಿ ನೀಡಲು ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುವುದು ಎಂದರು.

IMG 20230301 120444 1

ಸರ್ಕಾರಿ ನೌಕರರು ಮುಷ್ಕರವನ್ನು ಕೈಬಿಡಬೇಕೆಂದು ಮುಖ್ಯಮಂತ್ರಿಗಳು ತಿಳಿಸಿದರು.

ಸರ್ಕಾರಿ ನೌಕರ ರ ಸಂಘದ ಪ್ರತಿಕ್ರಿಯೆ…

ಶೇ.17ರಷ್ಟು ವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿರುವುದನ್ನು ಒಪ್ಪಿಕೊಂಡಿರುವ ಸರ್ಕಾರಿ ನೌಕರರು ಅಂತಿಮವಾಗಿ ಮುಷ್ಕರವನ್ನು ಬುಧವಾರ ವಾಪಸ್ ಪಡೆದುಕೊಂಡಿದ್ದಾರೆ.

ಶೇ.17ರಷ್ಟು ವೇತನ ಹೆಚ್ಚಳ ಮಾಡಿರುವುದಾಗಿ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ, ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರು ವಿಧಾನಸೌಧದಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿದ ಆದೇಶವನ್ನು ಪಡೆದುಕೊಂಡರು.

ನಂತರ ಕಬ್ಬನ್ ಪಾರ್ಕ್ ನಲ್ಲಿರುವ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಮತಾನಾಡಿದ ಅವರು, ಮುಷ್ಕರವನ್ನು ವಾಪಸ್ ಪಡೆದುಕೊಳ್ಳುವುದಾಗಿ ತಿಳಿಸಿದರು.

ಹೊಸ ವೇತನ ಶ್ರೇಣಿ ವಿವರ