IMG 20230304 WA0002

ಮಧುಗಿರಿ: ರೈತರು ಆರ್ಥಿಕವಾಗಿ ಸದೃಢವಾಗ ಬೇಕು….!

DISTRICT NEWS ತುಮಕೂರು

ಮಧುಗಿರಿ : ರೈತರು ದೇಶಕ್ಕೆ ಅನ್ನ ಕೊಡುವ ಶಕ್ತಿ ಯಾಗಿದ್ದಾರೆ ಅವರು ಆರ್ಥಿಕವಾಗಿ ಸದೃಢವಾಗಿರಬೇಕು ಎಂಬ ಉದ್ದೇಶದಿಂದ ಡಿ.ಸಿ.ಸಿ .ಬ್ಯಾಂಕ್ ವತಿಯಿಂದ ಸಾಲ ಸೌಲಭ್ಯಗಳನ್ನು ಶೂನ್ಯ ಬಡ್ಡಿದರದಲ್ಲಿ ನೀಡಲಾಗುತ್ತಿದ್ದು.

ಸರಕಾರದ ಯಾವುದೇ ಹಣವನ್ನು ಬಳಸುತ್ತಿಲ್ಲಾ ಎಂದು ಡಿ.ಸಿ.ಸಿ .ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ತಿಳಿಸಿದರು.

ಅವರು ದೊಡ್ಡೇರಿ ಹೋಬಳಿಯ ಸಜ್ಜೇಹೊಸಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಂಗಾರಾವತನಹಳ್ಳಿಯಲ್ಲಿ ನೂತನ ಗೋದಾಮು ಉದ್ಘಾಟನೆ ಹಾಗೂ ಬೃಹತ್ ಬೈಕ್ ಜಾಥದಲ್ಲಿ ಭಾಗವಹಿಸಿ ಮಾತನಾಡಿದರು .

IMG 20230304 WA0003

ಸಜ್ಜೇಹೊಸಹಳ್ಳಿ ಸಹಕಾರ ಸಂಘದ 946 ಜನರಿಗೆ ಸುಮಾರು 7 ಕೋಟಿ ರೂ ಸಾಲ ಸೌಲಭ್ಯ ನೀಡಲಾಗಿದೆ.ಕಳೆದ ಬಾರಿ ತಾಲೂಕಿನ 174 ಕೋಟಿ ರೂ ಸಾಲವನ್ನು ಮನ್ನಾ ಮಾಡಲಾಗಿದೆ.

ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳನ್ನು ಕಾರ್ಯಕರ್ತರು ಹೆಮ್ಮೆಯಿಂದ ಹೇಳಿಕೊಳ್ಳಬೇಕು
2004 , 2013 ರಲ್ಲಿ ಈ ಹೋಬಳಿಯ ಜನರು ಆರ್ಶೀವಾದ ಮಾಡಿದ್ದಾರೆ. ಸಜ್ಜೇಹೊಸಹಳ್ಳಿ ಯಿಂದ ಆಂಧ್ರ ಗಡಿಭಾಗದವರೆಗೆ 4.5 ಕೋಟಿ ರೂಗಳಲ್ಲಿ ರಸ್ತೆ ನಿರ್ಮಾಣವಾಗಿತ್ತು. ಆದರೆ ಈಗ ಆ ರಸ್ತೆಗೆ ಬಿದ್ದಿರುವ ಗುಂಡಿಗಳನ್ನು ಮುಚ್ಚಿಸಲು ಯಾರು ಮುಂದಾಗಿಲ್ಲ.

ಈ ಹಿಂದೆ 16 ಜನ ಲೋಕಸಭೆ ಸದಸ್ಯರಿದ್ದಾಗ ದೇವೆಗೌಡರನ್ನು ದೇಶದ ಪ್ರಧಾನ ಮಂತ್ರಿ ಮಾಡಿದ್ದು ,ರಾಜ್ಯದಲ್ಲಿ ಕುಮಾರ ಸ್ವಾಮಿಯವರನ್ನ ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್ ನವರು ಆದರೆ ಇಂದೂ ಇವರು ಕಾಂಗ್ರೆಸ್ ಪಕ್ಷವನ್ನು ಮುಗಿಸಿಯೇ ಬಿಡುತ್ತೇವೆಂದು ಹೋರಾಡುತ್ತಿರುವುದು ಹಾಸ್ಯಾಸ್ಪದ ಎಂದರು .

ಜೆಡಿಎಸ್ ರಾಜ್ಯದಲ್ಲಿ ಕನಿಷ್ಟ 20 ಸ್ಥಾನ ಗೆಲ್ಲಬಹುದಷ್ಟೆ. ಆದರೆ ಕುಮಾರಸ್ವಾಮಿ ನಾನೇ ಸಿಎಂ ಎಂದು ಬೀಗುತ್ತಿದ್ದು, ಯಾರಿಗೂ ಸ್ಪಷ್ಟ ಬಹುಮತ ಬಾರದೆ ತನ್ನನ್ನು ಸಿಎಂ ಮಾಡ್ತಾರೆ ಎಂದು ಕನಸು ಕಾಣ್ತಿದ್ದಾರೆ.ಇಂದು ಕಾಂಗ್ರೆಸ್ ನಿರ್ಣಾಮವಾಗುತ್ತೆ ಎಂದು ಹೇಳುವ ಜೆಡಿಎಸ್ ನಾಯಕರಿಗೆ ಉಪಕಾರ ಸ್ಮರಣೆಯಿಲ್ಲ. ದೇವೇಗೌಡರು 2004 ರಲ್ಲಿ ನನಗೆ ಜೆಡಿಎಸ್‍ನಿಂದ ಬೆಳ್ಳಾವಿ ಟಿಕೆಟ್ ನೀಡಿದ್ದಲ್ಲದೆ 2 ಲಕ್ಷ ರೂ ಹಣವನ್ನು ನೀಡಿ ಗೆಲ್ಲಿಸಿದ್ದರು. ಈ ಬಗ್ಗೆ ನನಗೆ ಅರಿವಿದ್ದು ನನಗೆ ಉಪಕಾರ ಸ್ಮರಣೆಯಿದೆ ಎಂದರು.

IMG 20230304 WA0007

ವಿಕೃತ ಮನಸ್ಸಿನವರಿಂದ ಸಲಾಂ ಆರತಿಯನ್ನು ನಿಲ್ಲಿಸಲು ಹೊರಟಿದ್ದಾರೆ.
ರೇಷ್ಮೆ ತಳಿಯಾದ ಸುಲ್ತಾನ್ ಕಡ್ಡಿಯನ್ನು ಪರಿಚಯಿಸಿದ್ದು ಟಿಪ್ಪು ಸುಲ್ತಾನ್ , ನಂಜುಂಡೇಶ್ವರನಿಗೆ ಹಕೀಮ್ ನಂಜುಂಡ ಎಂದು ಹೆಸರು ನೀಡಿದ್ದು ಟಿಪ್ಪು. ಗೂಡ್ಸೆ ಪ್ರತಿಪಾದಿಸುತ್ತಿದ್ದ ಹಿಂದೂತ್ವ ವನ್ನು ಇಂದೂ ಬಿಜೆಪಿ ಯವರು ಮಾಡುತ್ತಿದ್ದಾರೆ , ಗಾಂಧಿಯವರು ನೀಡಿದ ಹಿಂದುತ್ವವನ್ನು ನಾವು ಪಾಲಿಸಬೇಕು.

ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನವರ ನೇರ ಹಣಾಹಣಿ ಇದೆ .ಜೆಡಿಎಸ್ ಪಕ್ಷ ಜಾತ್ಯತೀತ ಪಕ್ಷವಾಗಿಲ್ಲ ಬಚ್ಚೇಗೌಡ , ಭೈರೆಗೌಡ , ನಂಜೇಗೌಡ , ಮುದ್ದಹನುಮೇಗೌಡ ರವರುಗಳನ್ನು ರಾಜಕೀಯವಾಗಿ ಮುಗಿಸಿದ್ದು ಯಾರು.? ಇದು ಕುಟುಂಬದ ರಾಜಕಾರಣ ಪಕ್ಷವಾಗಿದೆ ಎಂದು ಹೇಳಿದರೆ ತಪ್ಪಿಲ್ಲಾ.

IMG 20230304 WA0009

ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ಎಸ್ ಸಿ. ಎಸ್ ಟಿ .ಸಮುದಾಯಗಳ ಜತೆಗೆ ಇತರೆ ಸಮುದಾಯದವರಿಗೆ ಸಾವಿರಾರು ಕೊಳವೆ ಬಾವಿಗಳನ್ನು ಕೊರೆಸಿದ್ದೇನೆ. ವಿದ್ಯಾರ್ಥಿಗಳ ಅನೂಕೂಲಕ್ಕಾಗಿ ಅಂದು ಗ್ರಾಮಕ್ಕೆ ಬಸ್ ವ್ಯವಸ್ಥೆ ಮಾಡಲಾಗಿತ್ತು. ಇಂದೂ ಜನರು ಸರಕಾರದಿಂದ ಸಿಗುವ ಸೌಲಭ್ಯಗಳಿಗಾಗಿ ಸಾರಥಿ ಸಾಲಿನಲ್ಲಿ ನಿಂತು ಪಡೆಯ ಬೇಕಾಗಿದೆ ನನ್ನ ಅವಧಿಯಲ್ಲಿ ಅಧಿಕಾರಿಗಳು ನಿಮ್ಮ ಮನೆಯ ಬಾಗಿಲಿಗೆ ಬಂದು ಕೆಲಸ ಕಾರ್ಯಗಳನ್ನು ಮಾಡುವಂತಹ ವ್ಯವಸ್ಥೆ ಬೇಕಾದರೆ ಮತ್ತೊಮ್ಮೆ ನನಗೆ ಆರ್ಶೀವದಿಸಿ ಎಂದರು.

54 ಕೆರೆಗಳಿಗೆ ನೀರು , ಹುಣಸೆ ಬೆಳೆ ಹೆಚ್ಚಾಗಿದ್ದು ಹುಣಸೆ ರಕ್ಷಣೆಗಾಗಿ ಕೋಲ್ಡ್ ಸ್ಟೋರೇಜ್ ನಿರ್ಮಾಣ , ಬಡವನಹಳ್ಳಿಯ ಹೂ ತಮಿಳುನಾಡು , ಮಹಾರಾಷ್ಟ್ರ ಕ್ಕೆ ಹೋಗುತ್ತಿದ್ದು ಸುಸಜ್ಜಿತವಾದ ಮಾರುಕಟ್ಟೆ ನಿರ್ಮಾಣ , ಎ.ಎಂ ಕಾವಲ್ ಸ.ನಂ ಜಮೀನುಗಳನ್ನು ಹೂಳುವವನಿಗೆ ಸಾಗುವಳಿ ನೀಡಲಾಗುವುದು ಹಾಗೂ ಹೋಬಳಿಯ ಸಮೀಪ ವಿಮಾನ ನಿಲ್ದಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ , ಜಿ.ಜೆ.ರಾಜಣ್ಣ , ಚಿಕ್ಕೀರಪ್ಪ , ರಾಮಣ್ಣ , ನಾಗೇಶ್ ಬಾಬು , ಜಿ.ಎನ್ ಮೂರ್ತಿ , ಹನುಮಾನ್ , ನಾಗರಾಜು , ಲಕ್ಷ್ಮೀಕಾಂತ್ , ಮಲ್ಲಿಕಾರ್ಜುನಯ್ಯ , ಸಣ್ಣರಾಮಯ್ಯ , ಚಿನ್ನಪ್ಪ , ಪ್ರಸನ್ನ ಕುಮಾರ್ , ಸಿದ್ದಾಪುರ ರಂಗಶ್ಯಾಮಣ್ಣ , ಸಿದ್ದಗಂಗಪ್ಪ , ಮರಿರಾಜು , ತಾರಾನಾಥ್ , ತಿಪ್ಪೇಸ್ವಾಮಿ , ಜಯಲಕ್ಷ್ಮಿ , ಶಾರದಮ್ಮ , ಅನಸೂಯಾ , ರಾಧ ,ಡಿ.ಬಿ.ಆಶಾ , ಮಹೇಶ್ ಹಿದಾಯತ್ , ಇಂತಿಯಾಜ್ , ಚಿಕ್ಕಣ್ಣ , ಕಾರ್ಯದರ್ಶಿ ಪರಮೇಶ್ ಹಾಗೂ ಸಾವಿರಾರು ಜನ ಕಾರ್ಯಕರ್ತರು ಹಾಜರಿದ್ದರು.

ವರದಿ ಲಕ್ಷ್ಮಿಪತಿ ದೊಡ್ಡ ಯ ಲ್ಕೂರ್.