IMG 20230304 WA0023

ಒಂದು ವಾರದಲ್ಲಿ ಚಿತ್ರದುರ್ಗ ವೈದ್ಯಕೀಯ ಕಾಲೇಜಿಗೆ ಅನುಮೋದನೆ….!

Genaral STATE

ಒಂದು ವಾರದಲ್ಲಿಚಿತ್ರದುರ್ಗ ವೈದ್ಯಕೀಯ ಕಾಲೇಜಿಗೆ ಅನುಮೋದನೆ:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಚಿತ್ರದುರ್ಗ, ಮಾರ್ಚ್ 04 : ಚಿತ್ರದುರ್ಗದ ಬಹಳ ದಿನಗಳ ಬೇಡಿಕೆಯಾಗಿರುವ ವೈದ್ಯಕೀಯ ಕಾಲೇಜಿಗೆ ಎಲ್ಲಾ ಅನುಮೋದನೆಗಳನ್ನು ಒಂದು ವಾರದಲ್ಲಿ ನೀಡಿ, ಅಡಿಗಲ್ಲು ಹಾಕಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಸರ್ಕಾರಿ ವಿಗ್ಞಾನ ಕಾಲೇಜು ಮೈದಾನದಲ್ಲಿ ಅಐಒಜಿಸಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಫಲಾನುಭವಿಗಳ ಸಮ್ಮೇಳನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಡಬಲ್ ಇಂಜಿನ್ ಸರ್ಕಾರದ ಪ್ರತಿಫಲವಾಗಿ ಜನಪರ ಕಾರ್ಯಕ್ರಮಗಳನ್ನು ನೀಡಿದ್ದೇವೆ. ಜಿಲ್ಲೆಯಲ್ಲಿ 18,357 ಜನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನರಿಗೆ ಮುಟ್ಟಿದೆ. ಕೃಷಿ ಇಲಾಖೆಯಲ್ಲಿ ರೈತ ಶಕ್ತಿ ಯೋಜನೆ 1.62 ಲಕ್ಷ ಜನರಿಗೆ , ವಿವಿಧ ಯೋಜನೆಗಳಡಿ 5.57 ಲಕ್ಷ ಜನರಿಗೆ ಅಕ್ಷರ ದಾಸೋಹದಲ್ಲಿ 1.7 ಲಕ್ಷ ವಿದ್ಯಾರ್ಥಿಗಳಿಗೆ ಬಿಸಿಯೂಟ, ಪ್ರಧಾನಮಂತ್ರಿ ಸಿಂಚಯಿ ಯೋಜನೆ, ಮಾತೃವಂದನಾ, ಸಾಮಾಜಿಕ ಭದ್ರತಾ ಯೋಜನೆಗಳು 2.7 ಲಕ್ಷ ಜನರಿಗೆ ಮಾಶಾಸನ ದೊರೆಯುತ್ತಿದೆ. 2 ಲಕ್ಷ ಪರಿಶಿಷ್ಟ ಜನ ಫಲಾನುಭವಿಗಳಾಗಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯಡಿ ನಮ್ಮ ಪಾಲೂ ಇದ್ದು ಇನ್ನೆರಡು ಮೂರು ದಿನಗಳಲ್ಲಿ 999 ಕೋಟಿ ರೂ.ಗಳನ್ನು 53 ಲಕ್ಷ ಜನರಿಗೆ ನೇರವಾಗಿ ಖಾತೆಗೆ ತಲುಪಲಿದೆ. ಸ್ತ್ರೀ ಸಾಮರ್ಥ್ಯ ಮತ್ತು ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಯಡಿ 500 ಕೋಟಿ ರೂ.ಗಳನ್ನು ನೇರವಾಗಿ ಫಲಾನುಭವಿಗಳಿಗೆ ಮುಟ್ಟಲಿದೆ. 350 ಕೋಟಿ ರೂ.ಗಳು ಕುರಿಗಾಹಿಗಳಿಗೆ 8-9 ದಿನಗಳಲ್ಲಿ ಮುಟ್ಟಲಿದೆ. ಈ ರೀತಿ ಜನಪರ ರಾಜಕಾರಣ ನಾವು ಮಾಡಿದ್ದೇವೆ ಎಂದರು.

ಆದಾಯ ಹೆಚ್ಚಳ
355 ಕೋಟಿ ರೂ.ಗಳ ವೆಚ್ಚದಲ್ಲಿ ಅಮೃತ ಕುರಿಗಾಹಿ ಯೋಜನೆಯನ್ನು ಜಾರಿಗೊಳಿಸಿದ್ದು, ಇದೇ ತಿಂಗಳು 20 ಸಾವಿರ ಸಂಘಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. 4 ಲಕ್ಷ ಕುರಿಗಾಹಿಗಳಿಗೆ ಇದರ ಲಾಭವಾಗಲಿದೆ. ಇದು ಜನರ ಮೇಲೆ ಮಾಡುತ್ತಿರುವ ಬಂಡವಾಳ ಹೂಡಿಕೆ. ಮುಂದಿನ ದಿನಗಳಲ್ಲಿ ಜನರ ದುಡಿಮೆಯಿಂದ ರಾಜ್ಯದ ಆದಾಯ ಹೆಚ್ಚಾಗಲಿದೆ ಎಂದರು.

ಕಾರ್ಯಕ್ರಮಗಳ ಯಶಸ್ಸು

ಮೂರೂವರೆ ವರ್ಷದ ಕಾರ್ಯಕ್ರಮಗಳ ಯಶಸ್ಸು ಇಷ್ಟು ದೊಡ್ಡ ಜನಸಂಖ್ಯೆಯನ್ನು ಇಲ್ಲಿ ಸೇರುವಂತೆ ಮಾಡಿದೆ. ಪರಿಶಿಷ್ಟ ಜನರ ಆತ್ಮವಿಶ್ವಾಸವನ್ನು ಹೆಚ್ಚು ಮಾಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ವರ್ಗದವರ ಮೀಸಲಾತಿಯನ್ನು ನಾವು ಹೆಚ್ಚು ಮಾಡುವ ಇಚ್ಛಾಶಕ್ತಿಯನ್ನು ತೋರಿಸಿದ್ದೇವೆ. ಗಂಗಾಕಲ್ಯಾಣ ಯೋಜನೆಯಡಿ ನೇರವಾಗಿ ಡಿಬಿಟಿ ವ್ಯವಸ್ಥೆಯ ಮೂಲಕ ಬಿಡುಗಡೆ ಮಾಡಲಾಗುತ್ತಿದೆ. 30 ಸಾವಿರ ಜನ ಬಿಸಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಗಳಲ್ಲಿ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ. ಎಲ್ಲಾ ವರ್ಗದ ಶ್ರೇಯೋಭಿವೃದ್ಧಿಗೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅನ್ವಯ ಸರ್ವರಿಗೂ ಸಮಬಾಳು ನೀಡುವ ಸಂಕಲ್ಪ ಮಾಡಿದೆ. ನಮ್ಮ ಸರ್ಕಾರ ರೈತನ ಜೀವನ ಗುಣಮಟ್ಟವನ್ನು ಉತ್ತಮಗೊಳಿಸಿದೆ. ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಟ್ಟಿದೆ., ಯುವಕರ ಭವಿಷ್ಯಕ್ಕೆ ನೆರವಾಗುತ್ತಿದೆ. ಸಾಮಾಜಿಕ ಸಮಾನತೆ, ಅವಕಾಶಗಳನ್ನು ನಮ್ಮ ಸರ್ಕಾರ ನೀಡಿದೆ. ಸಚಿವರು, ಅಧಿಕಾರಿಗಳು ಉತ್ತಮವಾಘಿ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಯೋಜನೆಗಳನ್ನು ನಾವು ಮುಂದುವರೆಸು ಜನ ಆಶೀರ್ವಾದ ಮಾಡಬೇಕು. ನವಕರ್ನಾಟಕದಿಂದ ನವ ಭಾರತ ನಿರ್ಮಾಣ ಮಾಡೋಣ ಎಂದರು.

53.43 ಲಕ್ಷ ರೈತ ಕುಟುಂಬಗಳಿಗೆ ಒಟ್ಟು 16 ಸಾವಿರ ಕೋಟಿ ರೂ.:

ಸರ್ಕಾರವೆಂದರೆ ಕೇವಲ ಆಡಳಿತ ನಡೆಸುವುದಲ್ಲ, ಜನರ ಬದುಕು ರೂಪಿಸುವುದು. ಜನಪರ ಯೋಜನೆಗಳಿಂದ ಸ್ವಾಭಿಮಾನದ ಸ್ವಾವಲಂಬಿ ಬದುಕು ದೊರೆಯುತ್ತಿದೆ. ಪಿಎಂ ಕೃಷಿ ಸಮ್ಮಾನ್ ಯೋಜನೆಯಡಿ 53.43 ಲಕ್ಷ ರೈತ ಕುಟುಂಬಗಳಿಗೆ ಒಟ್ಟು 16 ಸಾವಿರ ಕೋಟಿ ರೂ. ಜಮೆಯಾಗಿದೆ. ಪಿಎಂ ಆವಾಸ್ ಯೋಜನೆಯಡಿ 17 ಲಕ್ಷ ಮನೆಗಳಿಗೆ ಮಂಜೂರಾತಿ ದೊರೆತಿದ್ದು , 5 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. 12 ಲಕ್ಷ ಶೌಚಾಲಯಗಳ ನಿರ್ಮಾಣ, 2.30 ಲಕ್ಷ ಜನರಿಗೆ ವಿದ್ಯುಚ್ಛಕ್ತಿ , 6000 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸೇರಿದಂತೆ ಹಲವು ಕೇಂದ್ರದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.

ಜನರಿಗೆ ಮುಟ್ಟಿರುವ ಯೋಜನೆಗಳು
ನಮ್ಮ ಸರ್ಕಾರದ ಬಜೆಟ್ ನಲ್ಲಿ ರೈತ ವಿದ್ಯಾನಿಧಿ, 11 ಲಕ್ಷ ರೈತರ ಮಕ್ಕಳಿಗೆ ವಿದ್ಯಾನಿಧಿ ತಲುಪಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 11373 ಮಕ್ಕಳಿಗೆ ರೈತವಿದ್ಯಾನಿಧಿ ನೀಡಲಾಗಿದೆ. 3 ಲಕ್ಷ ಕಾರ್ಮಿಕರ ಮಕ್ಕಳಿಗೆ ವಿದ್ಯಾನಿಧಿ ನೀಡಲಾಗಿದೆ. ರೈತ ಕೂಲಿ ಮಾಡುವ ಹೆಣ್ಣುಮಕ್ಕಳಿಗೆ 1000 ರೂ. ನೀಡುವ ಯೋಜನೆ , ದುಡಿಯುವ ಮಹಿಳೆಯರು ಹಾಗೂ ಹೆಣ್ಣುಮಕ್ಕಳಿಗೆ ಉಚಿತ ಬಸ್ ಪಾಸ್ ಯೋಜನೆ ಹಮ್ಮಿಕೊಳ್ಳಲಾಗಿದೆ. 3 ಲಕ್ಷ ಹೆಣ್ಣುಮಕ್ಕಳಿಗೆ ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಧನಸಹಾಯ, ಉತ್ಪಾದನೆ ಮಾರುಕಟ್ಟೆ ವ್ಯವಸ್ಥೆ, ಅದೇ ರೀತಿ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಡಿ 2 ಯುವಕರ ಸಂಘಕ್ಕೆ ಸ್ವಯಂ ಉದ್ಯೋಗ ನೀಡಲಾಗುತ್ತಿದೆ. ಕಾಯಕ ಯೋಜನೆಯಡಿ ಕುಶಲಕರ್ಮಿಗಳಿಗೆ 50 ಸಾವಿರ ರೂ. ಆರ್ಥಿಕ ಸಹಾಯ ನೀಡಲಾಗುತ್ತಿದೆ ಎಂದರು.

ಹಕ್ಕುಪತ್ರ ವಿತರಣೆ ಯೋಜನೆ

ಪಿಯುಸಿ ಯಿಂದ ಡಿಗ್ರಿವರೆಗೆ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಯುವಕರಿಗಾಗಿ ಐಟಿಐ ತರಬೇತಿ ನೀಡಿ 1,500 ರೂ. ಭತ್ಯೆ ನೀಡುವ ಯೋಜನೆ ರೂಪಿಸಲಾಗಿದೆ. ಭೂಸಿರಿ ಯೋಜನೆಯಡಿ ರೈತರಿಗೆ ಬೀಜಗೊಬ್ಬರ ಖರೀದಿಗಾಗಿ 10 ಸಾವಿರ ರೂ. ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ರೈತರ ಸಾಲದ ಮಿತಿಯನ್ನು 5 ಲಕ್ಷಕ್ಕೆ ಏರಿಸಲಾಗಿದೆ. ಗೊಲ್ಲರಹಟ್ಟಿ ,ಕುರುಬರಹಟ್ಟಿ, ಬಂಜಾರ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ ಮನೆಗಳಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ಇದೇ ತಿಂಗಳಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಗೊಲ್ಲರಹಟ್ಟಿ ,ಕುರುಬರಹಟ್ಟಿ, ಬಂಜಾರ ತಾಂಡಾಗಳ 1 ಲಕ್ಷ ಜನರ ಮನೆಗಳಿಗೆ ಹಕ್ಕುಪತ್ರ ವಿತರಿಸುವ ಯೋಜನೆ ರೂಪಿಸಲಾಗಿದ್ದು. ಇದು ಕ್ರಾಂತಿಕಾರಿ ಕಾರ್ಯಕ್ರಮವಾಗಿದೆ ಎಂದರು.

ರಾಜ್ಯದ ಜನ ಶ್ರೀಮಂತರಾದರೆ, ರಾಜ್ಯವೂ ಶ್ರೀಮಂತವಾಗುತ್ತದೆ. ಆದ್ದರಿಂದ ಎಲ್ಲ ಜನಪರ, ಜನಕಲ್ಯಾಣದ ಯೋಜನೆಗಳನ್ನು ಹಮ್ಮಿಕೊಂಡು ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ದಿ ಸಾಧ್ಯ. ಸರ್ಕಾರದ ಕಾರ್ಯಕ್ರಮಗಳ ಲಾಭ ಪಡೆದು ಜನರ ಜೀವನಮಟ್ಟ ಸುಧಾರಿಸುವುದೇ ಸರ್ಕಾರದ ಗುರಿಯಾಗಿದೆ. ಯೋಜನೆಗಳ ಫಲಾನುಭವಿಗಳಿಗೆ ನೇರವಾಗಿ ಧನಸಹಾಯ ತಲುಪಿಸಲು ಫಲಾನುಭವಿಗಳ ಸಮ್ಮೇಳನವನ್ನು ನಡೆಸಲಾಗಿದೆ. ಇಂತಹ ಸಮ್ಮೇಳನಗಳಿಂದ ಜನರ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದರು.