ಪಾವಗಡ. ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರಾದ ಹೆಚ್. ವಿ ವೆಂಕಟೇಶ್ ರವರ 45 ನೇ ಹುಟ್ಟು ಹಬ್ಬದ ಪ್ರಯುಕ್ತ ಇಂದು
ಪಟ್ಟಣದ ಶ್ರೀ ಸಾಯಿ ವೃದ್ಧಾಶ್ರಮ ಹಾಗೂ ಅನಾಥಾಶ್ರಮದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಹಾಗೂ ಯೂತ್ ಕಾಂಗ್ರೆಸ್ ವತಿಯಿಂದ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ ವಿ ವೆಂಕಟೇಶ್ ಅವರ ಅಭಿಮಾನಿಗಳ ಬಳಗ ಎಲ್ಲಾರೂ ಸೇರಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಹೆಚ್ ವಿ ವೆಂಕಟೇಶ್ ಅವರ 45 ನೇ ಹುಟ್ಟು ಹಬ್ಬವನ್ನು ಆಚರಿಸಿದರು
ಅನ್ನದಾನ ಕಾರ್ಯಕ್ರಮ ಆಶ್ರಮಕ್ಕೆ 250 ಕೆ ಜಿ ಬುಲೆಟ್ ರೈಸ್ ಹಾಗೂ ಹಾಲು ಬನ್ ಹಣ್ಣು ಹಂಪಲು ಸಿಹಿ ವಿತರಣೆ ಮಾಡಲಾಯಿತು. ನಂತರ ಪಟ್ಟಣದಲ್ಲಿ ಪ್ರಮುಖ ರಸ್ತೆಗಳಲ್ಲಿ ಅನ್ನದಾನ ಕಾರ್ಯಕ್ರಮ ಹಾಗೂ ಆಸ್ಪತ್ರೆಯ ಒಳ ಮತ್ತು ಹೊರ ರೋಗಿಗಳಿಗೆ ಹಣ್ಣು ಹಂಪಲು ಸಿಹಿ ವಿತರಿಸಿ ಮಾತನಾಡಿದ ಪುರಸಭೆ ಸದಸ್ಯರಾದ ಸುದೇಶ್ ಬಾಬು ಮಾತನಾಡಿ ಸಾರ್ವಜನಿಕರ ಕಷ್ಟ ಸುಖಗಳಿಗೆ ಸ್ಪಂದಿಸುವ ಮೂಲಕ ಜನನಾಯಕರಾಗಿ ಸೇವೆ ಸಲ್ಲಿಸುತ್ತಿರುವ ಹೆಚ್ ವಿ ವೆಂಕಟೇಶ್ ಅವರಿಗೆ ಇನ್ನು ಹೆಚ್ಚಿನ ಆಯಸ್ಸು , ಆರೋಗ್ಯ ಹಾಗೂ ರಾಜಕೀಯ ರಂಗದಲ್ಲಿ ಉನ್ನತ ಸ್ಥಾನಗಳಿಸಲು ಭಗವಂತ ಕರುಣಿಸಲಿ ಎಂದು ಹುಟ್ಟು ಹಬ್ಬದ ಶುಭಾಶಯ ಕೋರಿದರು. ನಂತರ ಮಾತನಾಡಿ ಪುರಸಭೆ ಸದಸ್ಯರಾದ ರಾಜೇಶ್ ಮಾತನಾಡಿ ಸಮಾಜ ಸೇವಾ ಕಾರ್ಯಗಳಲ್ಲಿ ಸದಾ ಮಂಚೂಣಿಯಲ್ಲಿರುವ ಹೆಚ್ ವಿ ವೆಂಕಟೇಶ್ ಅವರು ಬಡವರಿಗೆ ಹಾಗೂ ನಿರ್ಗತಿಕರಿಗೆ ಅನೇಕ ದಿನಗಳಿಂದ ಮಧ್ಯಾಹ್ನ ಊಟದ ವ್ಯವಸ್ಥೆ ಅನ್ನದಾನದಲ್ಲಿ ಸದಾ ಮುಂದು. ‘ಕೊರೊನಾ ಲಾಕ್‌ಡೌನ್‌ನಲ್ಲಿ ಹೋಟೆಲ್ ಗಳು ಇಲ್ಲದೆ ಬಡವರು, ನಿರ್ಗತಿಕರು ಅಲ್ಲದೇ ಕೊರೊನಾ ವಾರಿಯರ್ಸ್ ಗಳಿಗೆ ಕೈಲಾದ ಸಹಾಯ ಮಾಡುತ್ತಾ ಬಂದಿದ್ದಾರೆ
ಜನನಾಯಕರಾಗಿ ಸೇವೆ ಸಲ್ಲಿಸುತ್ತಿರುವ ಜಿಲ್ಲಾ ಪಂಚಾಯಿತಿ ಸದಸ್ಯರಾದ ಹೆಚ್ ವಿ ವೆಂಕಟೇಶ್ ಅವರಿಗೆ ಇನ್ನು ಹೆಚ್ಚಿನ ಆಯಸ್ಸು , ಆರೋಗ್ಯ ಹಾಗೂ ರಾಜಕೀಯ ರಂಗದಲ್ಲಿ ಉನ್ನತ ಸ್ಥಾನಗಳಿಸಲು ಭಗವಂತ ಕರುಣಿಸಲಿ ಎಂದು ಹುಟ್ಟು ಹಬ್ಬದ ಶುಭಾಶಯ ಕೋರಿದರು ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಶಂಕರ್ ರೆಡ್ಡಿ ಪುರಸಭೆ ಅಧ್ಯಕ್ಷ ರಾಮಾಂಜಿನಪ್ಪ. ಪುರಸಭೆ ಸದಸ್ಯರಾದ ರವಿ ರಾಜೇಶ್ ವೆಂಕಟರವಣಪ್ಪ ಸುಬ್ರಹ್ಮಣ್ಯಂ ಮಹ್ಮಮದ್ ಇಮ್ರಾನ್. ವೇಲು ರಾಜ್.ವಿಜಿ ಕುಮಾರ್. ಮುಖಂಡರಾದ ಪ್ರಮೋದ್ ಕುಮಾರ್ ಕೋಳಿ ಬಾಲಾಜಿ.ಗಜಿ. ಶ್ರೀನಿವಾಸ್. ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಶ್. ಗ್ರಾಮಾಂತರ ಅಧ್ಯಕ್ಷ ಸುಜಿತ್ ಕುಮಾರ್. ಗ್ರಾಮ ಪಂಚಾಯಿತಿ ಸದಸ್ಯ ಅನಿಲ್ ಕುಮಾರ್. ಸ್ಟುಡಿಯೋ ಅಮರ್. ಪಿ ಎಲ್ ಮಣಿ. ಪಾಪಣ್ಣ. ಹನುಮೇಶ್ ರಘು. ಹಾಗೂ ಇನ್ನೂ ಮುಂತಾದವರು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ ವಿ ವೆಂಕಟೇಶ್ ಅವರ ಅಭಿಮಾನಿಗಳು ಹಾಜರಿದ್ದರು
ವರದಿ: ಬುಲೆಟ್ ವೀರಸೇನಯಾದವ್