ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರ ಹಾಗೂ ನಮ್ಮ ಕಲ್ಯಾಣಿ ಬಳಗ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಹಾಡು ಕವಿತೆ ಮಾತು ಕಾರ್ಯಕ್ರಮವನ್ನು ಚಿಕ್ಕೆರೆ ಬಳಿಯಿರುವ ಕಲ್ಯಾಣಿಯಲ್ಲಿ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಉಪನ್ಯಾಸಕಿ ರುದ್ರಾಣಿ ಉದ್ಘಾಟನೆಯನ್ನು ಮಾಡಿದರು ಮಮತಾ ಯಜಮಾನ್ ಉಷಾ ವಿಜಯಕುಮಾರಿ ನಳಿನಾಕ್ಷಿ ಲತಾ ಸಾವಿತ್ರಿ ಶೋಭಾ ರಾಜಲಕ್ಷ್ಮಿ ನಾಯರ್ ಮಹಾದೇವಿ ಪುರುಷೋತ್ತಮ್ ಕ.ಸಾ.ಪ ಅಧ್ಯಕ್ಷರಾದ ಆದೂರು ಪ್ರಕಾಶ್ ಉಪಸ್ಥಿತರಿದ್ದರು.
ಕರುಳು ಕಿತ್ತುಬರುವ ಸನ್ನಿವೇಶವನ್ನು ಪುರಸಭೆಯ ಪೌರಕಾರ್ಮಿಕ ಮಕ್ಕಳಾದ ಮುಸ್ತನ್ ಮತ್ತು ಸಂಗಡಿಗರು ಹಾಡಿನ ಮೂಲಕ ವಿವರಿಸಿದಾಗ ಒಂದಷ್ಟು ಜನ ಕಂಬನಿ ಮಿಡಿದರು
ಕಾರ್ಯಕ್ರಮದಲ್ಲಿ ಮಾತನಾಡಿದ ಉಪನ್ಯಾಸಕಿ ರುದ್ರಾಣಿ ಸಮಾಜದಲ್ಲಿ ಭರಪೂರವಾದ ಅವಕಾಶಗಳು ನಮ್ಮ ಕಣ್ಮುಂದಿವೆ ಅವುಗಳನ್ನು ತಪ್ಪದೇ ಎಲ್ಲರೂ ಸದುಪಯೊಗಿಸಿಕೊಂಡಾಗ ಮಹಿಳೆಯರು ಸಾಧಕರಾಗಿ ಹೊರಹೊಮ್ಮುತ್ತಾರೆ ಎಂದು ಹೇಳಿದರು.
ಆಶಯ ನುಡಿಗಳನ್ನು ಮಾತನಾಡಿದ ಮಹಿಳಾವಾದಿ ಮಮತಾ ಯಜಮಾನ್ ಹೆಣ್ಣು ಅಡಿಗೆಮನೆಗೆ ಸೀಮಿತವಾಗದೆ ಹೊರಪ್ರಪಂಚಕ್ಕೆ ಕಾಲಿಟ್ಟು ಸಾಧನೆಯ ಕಡೆಗೆ ಸಾಗಿದಾಗ ಸಮಾಜವನ್ನು ಉತ್ತಮವಾಗಿ ಕಟ್ಟಬಹುದು ಎಲ್ಲರೂ ಆಶಿಸುವ ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸಿ ಹೆಣ್ಣುಮಕ್ಕಳಿಗೆ ಅವಕಾಶವನ್ನು ನೀಡಿದಾಗಲೇ ಕಲೆ-ಸಾಹಿತ್ಯ ಮತ್ತು ಸಂಸ್ಕೃತಿ ಉಳಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಂಗೀತ ಶಿಕ್ಷಕಿ ಸಾವಿತ್ರಿ ಮಾತನಾಡಿ ಮಕ್ಕಳ ಮುಂದೆ ಹೇಳುವುದಕ್ಕಿಂತ ಕೃತಿರೂಪದಲ್ಲಿ ಮಾಡಿತೋರಿಸಬೇಕು ಆಗಲೇ ಮಕ್ಕಳು ಬದ್ಧತೆಯಿಂದ ಕಲಿಯಲು ಸಾಧ್ಯವಾಗುತ್ತದೆ ಎಲ್ಲಾ ತಾಯಂದಿರು ಈ ಪ್ರಯೋಗವನ್ನು ತಮ್ಮ ತಮ್ಮ ಮನೆಗಳಲ್ಲಿ ಮಾಡಬೇಕು ಎಂದು ಹೇಳಿದರು
ವಿದ್ಯಾರ್ಥಿ ಮಹದೇವಿ ಮಾತನಾಡಿ ಕನ್ನಡನಾಡಿನಲ್ಲಿ ಕನ್ನಡ ಕಣ್ಮರೆಯಾಗುತ್ತಿದೆ ಕನ್ನಡಿಗರೆಲ್ಲರೂ ನೆಲ ಜಲ ಭಾಷೆಗೆ ಟೊಂಕಕಟ್ಟಿ ನಿಲ್ಲಬೇಕು ಇಲ್ಲವಾದರೆ ನಮ್ಮ ತಾಯಿ ಭಾಷೆ ನಶಿಸಿ ಹೋಗುವುದರಲ್ಲಿ ಅನುಮಾನವಿಲ್ಲ ಕನ್ನಡಿಗರಿಗೆ ಕೆಲಸ, ಗೌರವ, ಎಲ್ಲಾ ರಂಗದಲ್ಲೂ ಮನ್ನಣೆ ನೀಡಬೇಕು ಇದು ಪ್ರತಿಯೊಬ್ಬ ಕನ್ನಡಿಗರ ಆಗ್ರಹವೂ ಕೂಡ ಎಂದು ಧ್ವನಿಯೇರಿಸಿ ಮಾತನಾಡಿದರು
ಗಮನ ಮಹಿಳಾ ಸಮೂಹ ನಾಯಕಿಯಾದ ಲತಾ ಮಾತನಾಡಿ ಹೆಣ್ಣು ಮಕ್ಕಳಲ್ಲಿ ಅಗಾಧವಾದ ಕಲೆ ಅಡಕವಾಗಿದೆ ಅವೆಲ್ಲವೂ ಹೊರಬರಬೇಕಾದರೆ ಮಹಿಳೆಗೆ ಸೂಕ್ತವಾದ ವೇದಿಕೆಗಳು ಕಡ್ಡಾಯವಾಗಿ ದೊರೆಯಲೇಬೇಕು ಎಂದು ಹೇಳಿದರು
ಯೋಗಶಿಕ್ಷಕಿ ನಳಿನಾಕ್ಷಿ ಮಾತನಾಡಿ ಹೆಣ್ಣು ಸಮಾಜಸೇವೆಗೆ ನಿಂತಾಗ ಸಮಾಜದ ವಕ್ರದೃಷ್ಟಿ ಅವಳಮೇಲೆ ಬಿಳುತ್ತದೆ ಇದಕ್ಕೆಲ್ಲಾ ಹೆದರಿಕೊಂಡು ಮನೆಯಲ್ಲಿ ಅಡಗಿ ಕೂತರೆ ಹೆಣ್ಣು ಸಾಧಕಳಾಗಿ ಹೊರಹೊಮ್ಮುತ್ತಾಳೆ ಎಂದು ಹೇಳಿದರು
ಗಂಧದನಾಡು ಜನಪರ ವೇದಿಕೆಯ ಅಧ್ಯಕ್ಷರಾದ ವಿಜಯರಾಮ ಮಾತನಾಡಿ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ಕೇವಲ ಸರಕಾರಿ ಕಚೇರಿಗಳಿಗೆ ಹಾಗೂ ಶಾಲೆಗಳಿಗೆ ಸೀಮಿತವಾಗಿತ್ತು ಅದನ್ನ ಹೊರತಂದು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಪರಿಷತ್ತು ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು
ಶಿಕ್ಷಕರ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ಮಾತನಾಡಿ ವಿದ್ಯಾರ್ಥಿಗಳು ಕನಸು ಕಾಣುತ್ತಾ ಸುಮ್ಮನಿರದೆ ಅವುಗಳನ್ನು ನನಸು ಮಾಡಿಕೊಳ್ಳುವಲ್ಲಿ ಶ್ರಮವಹಿಸಬೇಕು ಆಗಲೇ ವಿದ್ಯಾರ್ಥಿಗಳು ಯಶಸ್ಸಿನ ಮೆಟ್ಟಿಲುಗಳು ಏರಲು ಸಾಧ್ಯವಾಗುತ್ತದೆ ಎಂದು ಹೇಳಿದರು
ವಕೀಲ ಪುರುಷೋತ್ತಮ್ ಮಾತನಾಡಿ ಕಲ್ಯಾಣಿ ನಮ್ಮ ಪೂರ್ವಜರ ಪರಿಶ್ರಮ ಇವುಗಳನ್ನೆಲ್ಲಾ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇಂದಿನ ಪೀಳಿಗೆಗಿದೆ ಜಲಮೂಲಗಳು ಈಗಾಗಲೇ ನಾಶವಾಗಿದ್ದು ಅವುಗಳ ಸಂರಕ್ಷಣೆ ಎಲ್ಲಾ ಸಂಘ-ಸಂಸ್ಥೆಗಳು ಸರ್ಕಾರದ ಒಟ್ಟಿಗೆ ಸೇರಿ ಮಾಡಬೇಕಾಗಿದೆ ಎಂದು ಹೇಳಿದರು
ಕಸಾಪ ಅಧ್ಯಕ್ಷರಾದ ಆದೂರು ಪ್ರಕಾಶ್ ಮಾತನಾಡಿ ಮನುಷ್ಯನ ಬದುಕು ಮುಸುಕು ಮುಸುಕಾಗಿ ಹೋಗಿರುವ ಸಂದರ್ಭದಲ್ಲಿ ಸಾಹಿತ್ಯದ ಕಾರ್ಯಕ್ರಮಗಳು ಗಲ್ಲಿಗಲ್ಲಿಯಲ್ಲೂ ನಡೆಯಬೇಕು ಇದರ ನೆಪದಲ್ಲಿ ಜನರೆಲ್ಲಾ ಒಂದೆಡೆ ಸೇರಿ ನಾಟಕ, ಹಾಡು ಕುಣಿತ ಕಥೆ-ಕವನಗಳನ್ನು ಆಲಿಸಿದಾಗ ದುಗುಡವೆಲ್ಲ ಮಾಯವಾಗಿ ಸಂತೋಷದ ನಗೆ ಮೂಡಿ ಬರಲು ಸಾಧ್ಯವಾಗುತ್ತದೆ ಒಬ್ಬರ ಮೇಲೆ ಇನ್ನೊಬ್ಬರು ಆರೋಪಿಸುತ್ತಾ ಸಾಗುವುದು ಸಮಾಜವನ್ನು ಒಡೆಯಲು ಸಾಧ್ಯವಾಗುತ್ತದೆಯೇ ಹೊರತು ಒಂದುಗೂಡಿಸಲು ಸಾಧ್ಯವಾಗುವುದಿಲ್ಲ ಧೂಳು ತುಂಬಿದ ಕನ್ನಡಿಯನ್ನು ಹಾಗಾಗ ಒರೆಸುತ್ತಾ ತನ್ನ ಮುಖವನ್ನು ನೋಡಿಕೊಳ್ಳುವಂತೆ ಸಮಾಜದ ಶುದ್ದಿಯನ್ನು ಕಾಲಕಾಲಕ್ಕೂ ಮಾಡುತ್ತಾ ಸಾಗಬೇಕು ಎಂದು ಹೇಳಿದರು
ಕಾರ್ಯಕ್ರಮದಲ್ಲಿ ವಿಶೇಷವಾದ ಹಾಡುಗಳನ್ನು ವಿದ್ಯಾರ್ಥಿಗಳಾದ ಮದನ್ ಮಿಥುನ್ ಅನುಶ್ರೀ ಪಲ್ಲವಿ ಶ್ರೀನಿವಾಸ್ ಮುಸ್ತಾನ್ ಅಖಿಲ ಹಾಗೂ ಗಾಯಕರಾದ ರಾಘವೇಂದ್ರ ರಾಮಚಂದ್ರ ಪ್ರಸ್ತುತಪಡಿಸಿದರು
ಕರುಳು ಕಿತ್ತುಬರುವ ಸನ್ನಿವೇಶವನ್ನು ಪುರಸಭೆಯ ಪೌರಕಾರ್ಮಿಕ ಮಕ್ಕಳಾದ ಮುಸ್ತನ್ ಮತ್ತು ಸಂಗಡಿಗರು ಹಾಡಿನ ಮೂಲಕ ವಿವರಿಸಿದಾಗ ಒಂದಷ್ಟು ಜನ ಕಂಬನಿ ಮಿಡಿದರು
ಕಾರ್ಯಕ್ರಮದಲ್ಲಿ ವಿಜಯಕುಮಾರಿ ಉಷಾ ನಾಯರ್ ಸುರೇಖಾ ಶೋಭ ರಾಜಲಕ್ಷ್ಮಿ ನಾಯರ್ ನಳಿನಾಕ್ಷಿ ವಿದ್ಯಾರ್ಥಿಗಳಾದ ಭಾಸ್ಕರ್ ಮಹೇಶ್ ಬಾಬು ಶ್ರೀನಿವಾಸ್ ಮದನ್ ಮಿಥುನ್ ಪಲ್ಲವಿ ಮುಸ್ತನ್ ಸನಾವುಲ್ಲಾ ಅಖಿಲ ಅನುಶ್ರೀ ಮಾದೇವಿ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ
ಎಂ ಗೋವಿಂದರಾಜು ಮಹೇಶ್ ಊಗಿನಹಳ್ಳಿ ಅಪ್ಸರ ಆಲಿ ಖಾನ್ ಚುಟುಕು ಶಂಕರ್ ಟಿ ಎಸ್ ಮುನಿರಾಜು ಮಂಜುಳಾ ಸರ್ಜಾಪುರ ನಾಗರತ್ನ ಕುಮಾರ್ ಅಮರೇಶ್ ಮರಸೂರು ಹಾಗೂ ಅನೇಕ ಗೃಹಿಣಿಯರು ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.
ವರದಿ: ಹರೀಶ್