IMG 20220611 WA0026

ಪಾವಗಡ:ನಿರಂತರ ಶ್ರಮ, ಆಳವಾದ ಧ್ಯಾನ ಅಧ್ಯಯನದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧ್ಯ…!

DISTRICT NEWS ತುಮಕೂರು

ನಿರಂತರ ಶ್ರಮ, ಆಳವಾದ ಧ್ಯಾನ ಅಧ್ಯಯನದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬಹುದು ಯು. ಪಿ .ಎಸ್ ‌.ಸಿ ಪರೀಕ್ಷೆಯಲ್ಲಿ 308 ನೇ ರಾಂಕ್ ಪಡೆದ ವಿಜೇತೆ ಎಂ. ಅರುಣ

ಪಾವಗಡ: ಕನ್ನಡ ಮಾಧ್ಯಮ ಯು ಪಿ ಎಸ್ ಸಿ ಪರೀಕ್ಷೆಗೆ ಅಡ್ಡಿಯಾಗುವುದಿಲ್ಲ ಎಂದು ಯು ಪಿ ಎಸ್ ಸಿ ಪರೀಕ್ಷೆಯಲ್ಲಿ 308 ನೇ ರಾಂಕ್ ಪಡೆದಿರುವ ಎಂ. ಅರುಣ ತಿಳಿಸಿದರು.
ತಾಲ್ಲೂಕಿನ ಮಂಗಳವಾಡ ಗ್ರಾಮದ ತಿರುಮಲ ರಾಘವೇಂದ್ರ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದಿದ್ದೇವೆ, ಸ್ಪರ್ದಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಕಷ್ಟ ಎಂಬ ಮನೋಭಾವವನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬಿಡಬೇಕು. ಶ್ರಮ, ನಿರಂತರ ಅಧ್ಯಯನದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬಹುದು ಎಂದರು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಯು ಪಿ ಎಸ್ ಸಿ ಪರೀಕ್ಷೆ ತೆಗೆದುಕೊಂಡಲ್ಲಿ ಅರುಣ ಐ ಎ ಎಸ್ ಅಕಾಡೆಮಿಯಿಂದ ಅಗತ್ಯ ಮಾರ್ಗದರ್ಶನ ನೀಡಲಾಗುವುದು ಎಂದರು.
ಮುಖ್ಯ ಶಿಕ್ಷಕ ಎನ್.ಮಂಜುನಾಥ್, 1 ರಿಂದ 10 ನೇ ತರಗತಿ ವರೆಗೆ ಮಂಗಳವಾಡ ಗ್ರಾಮದಲ್ಲಿ ಶಿಕ್ಷಣ ಪಡೆದಿರುವ ಅರುಣ ಅವರು ಕನ್ನಡ ಸಾಹಿತ್ಯವನ್ನು ಐಚ್ಚಿಕವಾಗಿ ತೆಗೆದುಕೊಂಡು ಯು ಪಿ ಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವುದು ಹೆಮ್ಮೆಯ ವಿಚಾರ. ಗ್ರಾಮೀಣ ಭಾಗದವರಿಗಾಗಿ ಸಹಪಾಠಿಗಳೊಂದಿಗೆ ತರಬೇತಿ ಅಕಾಡೆಮಿ ಆರಂಭಿಸಿರುವುದು ಶ್ಲಾಘನೀಯ ಎಂದರು.
ಇಂತಹ ಸಾಧಕರನ್ನು ಮಾಧರಿಯನ್ನಾಗಿರಿಸಿಕೊಂಡು ಹಳ್ಳಿಯ ಮಕ್ಕಳು ಸ್ಪರ್ಧಾತ್ಮ ಪರೀಕ್ಷೆಗಳಿಗೆ ಸಿದ್ದತೆ ನಡೆಸಬೇಕು ಎಂದರು.

ಶಿಕ್ಷಕ ಎಸ್ ಆರ್ ಓಬಣ್ಣ, ಕೆ.ಎಸ್ ಗೋವಿಂದಪ್ಪ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಲಕ್ಷ್ಮಿನರಸಿಂಹಯ್ಯ, ಕಾರ್ಯದರ್ಶಿ ನಂಜುಡಯ್ಯ ಶೆಟ್ಟಿ, ಸದಸ್ಯರಾದ ಮೂಡಲಗಿರಿಯಪ್ಪ, ವಕೀಲ ಲಕ್ಷ್ಮಿಕಾಂತ್, ಧನಂಜಯ, ಲಕ್ಷ್ಮಿನರಸಿಂಹಮೂರ್ತಿ, ಹಿರಿಯ ವಿದ್ಯಾರ್ಥಿಗಳಾದ ಕಾಂತರಾಜು, ಸ್ವಾರಣ್ಣ, ವಿಜಯಲಕ್ಷ್ಮಿ ಉಪಸ್ಥಿತರಿದ್ದರು.