EZK9F3AUMAgYdt8

ಮಂಡ್ಯ ಮೈಶುಗರ್ ಸಕ್ಕರೆ ಕಾರ್ಖಾನೆ ಪುನಶ್ಚೇತನ: ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ತೀರ್ಮಾನ – ಬಿಎಸ್ ವೈ

DISTRICT NEWS ಮಂಡ್ಯ

ಮೈ ಶುಗರ್ ಸಕ್ಕರೆ ಕಾರ್ಖಾನೆಯನ್ನು ಪುಶ್ಚೇತನಗೊಳಿಸಲು ಸರ್ಕಾರ ಬದ್ಧವಾಗಿದ್ದು,  ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಹಾಗೂ ಸರ್ಕಾರವೇ ಕಾರ್ಖಾನೆಯ ಸಂಪೂರ್ಣ ನಿರ್ವಹಣೆ ಮಾಡುವುದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ.

ಸರ್ಕಾರವೇ ಕಾರ್ಖಾನೆಯ ಸಂಪೂರ್ಣ ನಿರ್ವಹಣೆ ಮಾಡುವುದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ.

ಬೆಂಗಳೂರು, ಮೇ 29:  ಮಂಡ್ಯ ಜಿಲ್ಲೆಯ ಸಂಸದರು ಹಾಗೂ ಶಾಸಕರು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಅವರನ್ನು ಭೇಟಿಯಾಗಿ ಚರ್ಚಿಸಿದರು.

EZK9Gm3UcAE5OFG

 

ಐತಿಹಾಸಿಕ ಮಹತ್ವವುಳ್ಳ ಮಂಡ್ಯದ ಮೈ ಶುಗುರ್ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಯಬೇಕು ಹಾಗೂ   ಜಿಲ್ಲೆಯ ರೈತರನ್ನು ಕಾಪಾಡಬೇಕು ಎಂದು  ನಿಯೋಗವು ಮುಖ್ಯಮಂತ್ರಿಗಳಿಗೆ ಮನವಿ ಮಾಡಿತು.

ಮೈ ಶುಗರ್ ಸಕ್ಕರೆ ಕಾರ್ಖಾನೆಯನ್ನು ಪುಶ್ಚೇತನಗೊಳಿಸಲು ಸರ್ಕಾರ ಬದ್ಧವಾಗಿದ್ದು,  ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಹಾಗೂ ಸರ್ಕಾರವೇ ಕಾರ್ಖಾನೆಯ ಸಂಪೂರ್ಣ ನಿರ್ವಹಣೆ ಮಾಡುವುದರ ಸಾಧಕ ಬಾಧಕಗಳ ಬಗ್ಗೆ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ  ಚರ್ಚಿಸಿ ತೀರ್ಮಾನಕ್ಕೆ ಬರುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

EZLVYAHXkAA1Upj

 

ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್,  ತೋಟಗಾರಿಕೆ ಸಚಿವ ನಾರಾಯಣಗೌಡ, ಮಾಜಿ ಸಚಿವರಾದ  ಸಿ.ಎಸ್. ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಶಾಸಕರಾದ ಅನ್ನದಾನಿ, ಕೆ.ಟಿ. ಶ್ರೀಕಂಠೇಗೌಡ, ರವೀಂದ್ರ ಶ್ರೀಕಂಠಯ್ಯ , ರೈತ ನಾಯಕಿ  ಸುನಂದಾ ಜಯರಾಂ ಉಪಸ್ಥಿತರಿದ್ದರು.