ಕರ್ನಾಟಕದಲ್ಲಿ ಕೊರೋನಾ ಸೋಂಕು ದಿನದಿಂದ ದಿನ ಹೆಚ್ಚುತ್ತಲೆ ಇದೆ. ಇಂದು( ಶುಕ್ರವಾರ ) ಒಂದೇ ದಿನ 248 ಪ್ರಕರಣಗಳು ಚಿಕ್ಕಬಳ್ಳಾಪುರದಲ್ಲಿ ಒಂದು ಸಾವು ವರದಿಯಾಗಿ , ರಾಜ್ಯದಲ್ಲಿ ಕೊರೋಮಾಘಾತವಾಗಿದೆ.
ಬೆಂಗಳೂರು ಮೇ 29 :- ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಸಂಖ್ಯೆ ಏರುತ್ತಲೆ ಇವೆ ಇಂದು ಒಂದೇ ದಿನ 248 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2781 ಏರಿಕೆಯಾಗಿದೆ. ಚಿಕ್ಕಬಳ್ಳಾಪುರದ ನಿವಾಸಿ 50 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.
ಇಂದು ಬೆಳಕಿಗೆ ಬಂದ ಪ್ರಕರಣಗಳಲ್ಲಿ 227 ಜನರು ಅಂತರ್ ರಾಜ್ಯ ಪ್ರಯಾಣದ ಇತಿಹಾಸ ಹೊಂದಿದ್ದಾರೆ ಅದರಲ್ಲೂ ಹೆಚ್ಚು ಮಹಾರಾಷ್ಟ್ರ ದಿಂದ ಬಂದವರಾಗಿದ್ದಾರೆ.ಒಬ್ಬ ವ್ಯಕ್ತಿ ಅಂತಾರಾಷ್ಟ್ರೀಯ ಪ್ರಯಾಣದಿಂದ ಹಿಂದಿರುಗಿದ್ದಾರೆ.
ಇಲ್ಲಿಯವರೆಗೆ ಆಸ್ಪತ್ರೆಯಿಂದ 894 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ, 1837 ಸಕ್ರಿಯ ಪ್ರಕರಣಗಳಿದ್ದರೆ, 48 ಜನರು ಸಾವನ್ನಪ್ಪಿದ್ದಾರೆ. ರಾಯಚೂರು -62, ಯಾದಗಿರಿ- ೬೦, ಕಲಬುರಗಿ 61 ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.