ಪಾವಗಡ. ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಕ್ಕೆ ಏಳು ವರ್ಷ ಪೂರ್ಣ ಗೊಂಡ ಹಿನ್ನೆಲೆಯಲ್ಲಿ ಸೇವಾ ಕಾರ್ಯಕ್ರಮವನ್ನು ಪಾವಗಡ ದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸೇವೆಯೇ ಸಂಘಟನೆ ಎಂಬ ವಿನೂತನ ಕಾರ್ಯಕ್ರಮ ವನ್ನು ಪಾವಗಡ ಮಂಡಲದ, ಡಾಕ್ಟರ್ ವೆಂಕಟರಾಮಯ್ಯ ಅವರ ಮಾರ್ಗದರ್ಶನದಲ್ಲಿ ನಡೆಯಿತು.
ಮಾಸ್ಕ್ ಸ್ಯಾನಿಟೈಸರ್ ವಿತರಣೆ ಕಾರ್ಯಕ್ರಮವನ್ನು ಈ ಸಂಧರ್ಭದಲ್ಲಿ ಮಾಡಲಾಯಿತು.ಮಂಡಲ ಅಧ್ಯಕ್ಷರಾದ ರವಿಶಂಕರ್ ನಾಯ್ಕ ಹಾಗೂ ಸಮಾಜ ಸೇವಕರಾದ ಕೃಷ್ಣ ನಾಯ್ಕ ಅವರು ಕೋವಿಡ್-19 ಎರಡನೇಯ ಅಲೆ ಬಗ್ಗೆ ಜನಜಾಗೃತಿ ಮೂಡಿಸಿದರು
ಪಟ್ಟಣದ 14 ನೇ ವಾರ್ಡ್ ಹಾಗೂ ಕುಮಾರಸ್ವಾಮಿ ಲೇಔಟ್ ನಲ್ಲಿರುವ ಜನರಿಗೆ ಉಚಿತವಾಗಿ ಮಾಸ್ಕ್ ಸ್ಯಾನಿಟೈಸರ್ ವಿತರಣೆ ಮಾಡಿದರು ನಂತರ ಮಾತನಾಡಿ ಸಮಾಜ ಸೇವಕರಾದ ಕೃಷ್ಣ ನಾಯ್ಕ ಮಾತನಾಡಿ ವಿಶ್ವ ಕಂಡ ಶ್ರೇಷ್ಠ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಹ ಒಬ್ಬರು. ವಿಶ್ವದೆಲ್ಲೆಡೆ ಈ ದೇಶವನ್ನು ಗುರುತಿಸಿವಂತೆ ಮಾಡಿರುವ ಮೋದಿ ಅವರಿಗೆ ದೇಶದ ಪ್ರಗತಿಯೇ ಮುಖ್ಯವಾಗಿದೆ. ಇಂತಹ ಮಹಾನ್ ನಾಯಕನ್ನು ಮತ್ತೂಮ್ಮೆ ಈ ದೇಶದ ಪ್ರಧಾನಿಯಾಗಿಸುವಲ್ಲಿ ಸರ್ವರ ಪಾತ್ರ ಮುಖ್ಯವಾಗಿದೆ
ಕೊರೋನಾ ಮಹಾಮಾರಿ ವಿಶ್ವ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ನಗರಾಧ್ಯಕ್ಷ ಗೋಲ್ಡನ್ ಮಂಜುನಾಥ. ವೆಂಕಟಾಪುರ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಹರೀಶ್ . ಬಜರಂಗದಳ ತಾಲೂಕು ಅಧ್ಯಕ್ಷ.ಸುಮನ್. 14 ನೇ ವಾರ್ಡ್ ಶಕ್ತಿಕೇಂದ್ರ ಅಧ್ಯಕ್ಷ ಶ್ರೀನಿವಾಸ್. ಹಿರಿಯ ಮುಖಂಡ ನಾಗರಾಜಪ್ಪ ಪ್ರವೀಣ್. ಹರೀಶ್. ರವಿ ನವೀನ್ ಶಶಿ. ಪ್ರಸನ್ನಕುಮಾರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು
ಗಿಡ ನೆಟ್ಡ ರೈತ ಮೋರ್ಚಾ
ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀಯುತ ನರೇಂದ್ರ ಮೋದಿ ಜೀ ಅವರ ನೇತೃತ್ವದ ಸರ್ಕಾರ ಏಳು ವರ್ಷ ಸಂಪೂರ್ಣ ಒಳ್ಳೆಯ ಆಡಳಿತ ನೀಡಿದ ಶುಭ ಸಂದರ್ಭದಲ್ಲಿ ಸೇವೆಯೇ ಸಂಘಟನೆ ಎಂಬ ವಿಶೇಷ ಕಾರ್ಯಕ್ರಮದ ಮುಖಾಂತರ ತುಮಕೂರು ಜಿಲ್ಲೆಯ ಪಾವಗಡ ಮಂಡಲದ ರೈತ ಮೋರ್ಚಾ ಅಧ್ಯಕ್ಷರಾದ ಕೋಟೆ ರೆಡ್ಡಿ ಅವರು ಗಿಡ ನೆಡುವ ಮೂಲಕ ಪರಿಸರ ಸ್ನೇಹಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ತಾಲೂಕಿನ ಬ್ಯಾಡ ನೂರು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು ಇದೆ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಕೃಷ್ಣಮೂರ್ತಿ. ಪಾವಗಡ ಮಂಡಲ ಉಪಾಧ್ಯಕ್ಷ ನಾರಾಯಣಪ್ಪ.ಎನ್ ಸಿ ರಾಮಚಂದ್ರಪ್ಪ.ಎನ್ ಹೆಚ್ ಗೋಪಾಲಪ್ಪ ರಾಧಾಕೃಷ್ಣ. ಹನುಮಂತರಾಯಪ್ಪ. ಮಲ್ಲೇಶ್. ನಾಗರಾಜು. ಕನಿಕಲ ಬಂಡೆ ಅಂಜಿನರೆಡ್ಡಿ. ಹಾಗೂ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು ರೈತ ಮುಖಂಡರು ಇನ್ನೂ ಮುಂತಾದವರು ಉಪಸ್ಥಿತರಿದ್ದರು
ವರದಿ- ಬುಲೆಟ್ ವೀರಸೇನಯಾದವ್