IMG 20230710 WA0099

ಪಾವಗಡ : ತುಮಕೂರು- ರಾಯದುರ್ಗ ರೈಲ್ವೆ ಯೋಜನೆ ಯ ಕಾಮಗಾರಿ ಪರಿಶೀಲನೆ…..!

DISTRICT NEWS ತುಮಕೂರು

ತುಮಕೂರು- ರಾಯದುರ್ಗ ರೈಲ್ವೆ ಯೋಜನೆ ಯ ಕಾಮಗಾರಿ ಪರಿಶೀಲನೆ……!

ಪಾವಗಡ: ತಾಲೂಕಿನ ಜನರ ಬಹುದಿನದ ಕನಸಾಗಿರುವ ರೈಲ್ವೆ ಯೋಜನೆಯನ್ನು ಶೀಘ್ರವೇ ಪೂರ್ಣಗೊಳಿಸುವುದಕ್ಕಾಗಿ ರಾಜವಂತಿ, ಪೆನುಗೊಂಡ ರಸ್ತೆಯಲ್ಲಿ ಪ್ರಗತಿಯಲ್ಲಿರುವ ತುಮಕೂರು- ರಾಯದುರ್ಗ ರೈಲ್ವೆ ಯೋಜನೆ ಕಾಮಗಾರಿಯನ್ನು ಅಧಿಕಾರಿಗಳೊಂದಿಗೆ ಜೊತೆಗೂಡಿ ಕೇಂದ್ರ ಸಚಿವ ಎ ನಾರಾಯಣಸ್ವಾಮಿ, ಶಾಸಕ ಎಚ್ ವಿ ವೆಂಕಟೇಶ್ ಸೋಮವಾರ ಪರಿಶೀಲಿಸಿದರು.

ರೈಲ್ವೆ ಯೋಜನೆಗೆ ಜಮೀನು ನೀಡಿದ ರೈತರಿಗೆ ವರ್ಷಗಳು ಕಳೆದರೂ ಸಹ ಪರಿಹಾರ ನೀಡಿಲ್ಲವೆಂಬ ವಿಷಯವನ್ನು ಅಧಿಕಾರಿಗಳು ಜನಪ್ರತಿನಿಧಿಗಳಿಗೆ ತಿಳಿಸಿದರು.

ರೈಲ್ವೆ ಯೋಜನೆಗೆ ಜಮೀನು ನೀಡಿದ ರೈತರಿಗೆ ಪರಿಹಾರ ನೀಡುವಾಗ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ.

ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಜಮೀನಿಗಿಂತ ಹಿಂದೆ ಇರುವ ಜಮೀನುಗಳಿಗೆ ಹೆಚ್ಚಿನ ಪರಿಹಾರ ನೀಡಲಾಗಿದೆ. ಜಮೀನಿನ ಮಧ್ಯದಲ್ಲಿ ರೈಲ್ವೆ ಟ್ರಾಕ್ ಹಾದು ಹೋಗಿದ್ದು, ಉಳಿಕೆ ಜಮೀನಿಗೆ ಹೋಗಲು ರಸ್ತೆಯಿಲ್ಲದಂತಾಗಿದೆ. ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡರು.

ರೈಲ್ವೆ ಟ್ರಾಕ್ ನಿರ್ಮಿಸುವ ಸಲುವಾಗಿ ನಿರ್ಮಿಸಲಾದ ದಿಬ್ಬದಿಂದ ಮಳೆ ನೀರು ಜಮೀನುಗಳಲ್ಲಿ ನಿಲ್ಲುತ್ತಿದೆ. ಎಂದು ಶೀಘ್ರವೇ ಇದಕ್ಕೆ ಪರಿಹಾರ ಒದಗಿಸಿ ಕೊಡಬೇಕೆಂದು ರೈತರು ಅಧಿಕಾರಿಗಳಿಗೆ ಮನವಿ ಮಾಡಿದರು.

IMG 20230710 WA0096

ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಮಾತನಾಡಿ,
ಹಲವು ತಾಂತ್ರಿಕ ಕಾರಣಗಳಿಂದಾಗಿ ಕಾಮಗಾರಿ ನಿಧಾನವಾಗಿ ಸಾಗುತ್ತಿದೆ ಎಂದರು.

ಶೀಘ್ರವೇ ಭೂಸ್ವಾಧೀನ ಕಾರ್ಯ ಮುಕ್ತಾಯಗೊಳಿಸಿ, ಹರಾಜು ಪ್ರಕ್ರಿಯೆಯಲ್ಲಿ ಉಂಟಾಗಿರುವ ಲೋಪ ದೋಷ ಪರಿಹರಿಸಿ ವೇಗವಾಗಿ ಕಾಮಗಾರಿ ಸಂಪೂರ್ಣ ಗೊಳಿಸುವುದಾಗಿ ಭರವಸೆ ನೀಡಿದರು.

ಶಾಸಕ ಎಚ್ ವಿ ವೆಂಕಟೇಶ್, ಈಗಾಗಲೇ ತಾಲ್ಲೂಕಿನ ಕೆ. ರಾಂಪುರ ವರೆಗೆ ಟ್ರಾಕ್ ಸಿದ್ದವಾಗಿದೆ. ಪ್ರಾಯೋಗಿಕವಾಗಿ ರೈಲು ಸಂಚರಿಸಿದೆ. ಶೀಘ್ರ ತಾಲ್ಲೂಕಿನ ಇತರೆಡೆ ಕಾಮಗಾರಿ ಮುಗಿಸುವಂತೆ ತಿಳಿಸಲಾಗಿದೆ ಎಂದರು.