ಮಕ್ಕಳ ಜನನ ಪ್ರಮಾಣ ಪತ್ರ ನೀಡುವಲ್ಲಿ ವಿಫಲವಾದ ಮಂಗಳವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು.
ಪಾವಗಡ : ತಾಲೂಕಿನ ನಿಡಗಲ್ ಹೋಬಳಿಯ ಮಂಗಳವಾಡ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು ಮಕ್ಕಳ ಜನನ ಪ್ರಮಾಣ ಪತ್ರವನ್ನು
ನೀಡುತ್ತಿಲ್ಲವೆಂದು ಆರೂಪಿಸಿ ಮಂಗಳವಾಡದ ಅಂಬೇಡ್ಕರ್ ಯುವಕ ಸಂಘದ ಸದಸ್ಯರು ತಹಶೀಲ್ದಾರ್ ಸುಜಾತ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮಂಗಳವಾಡ ಪ್ರಾರ್ಥಮಿಕ ಆರೋಗ್ಯ ಕೇಂದ್ರದಲ್ಲಿ 2019 ರಿಂದ 2023ರ ವರೆಗೆ ಜನಿಸಿದ 60ಕ್ಕೂ ಹೆಚ್ಚು ಮಕ್ಕಳಿಗೆ
ಜನನ ಪ್ರಮಾಣ ಪತ್ರವನ್ನು ನೀಡದೆ ಸತಾಯಿಸುತ್ತಿದ್ದಾರೆ ಎಂದು ಅಂಬೇಡ್ಕರ್ ಯುವಕ ಸಂಘದ ಸದಸ್ಯರು ಆರೋಪಿಸಿದ್ದಾರೆ.
ಜನನ ಪ್ರಮಾಣ ಪತ್ರವನ್ನು ಕೇಳಿದಾಗ ಡಾಕ್ಟರ್ ಇಲ್ಲವೆಂದು, ಕಂಪ್ಯೂಟರ್ ಸರಿ ಇಲ್ಲವೆಂದು ಕಾರಣ ನೀಡಿ ಪೋಷಕರನ್ನು ಅಲೆಸುತ್ತಿದ್ದಾರೆ ಎಂದು. ಆರೂಪಿಸಿದರು.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮದ ಜರುಗಿಸಿ ಪೋಷಕರಿಗೆ ತಮ್ಮ ಮಕ್ಕಳ ಜನನ ಪ್ರಮಾಣ ಪತ್ರ ಕೂಡಿಸಬೇಕೆಂದು ಆಗ್ರಹಿಸಿದರು.
ಸಮಸ್ಯೆ ಬಗ್ಗೆ ತಾಲೂಕು ಆರೋಗ್ಯ ಅಧಿಕಾರಿಯಾದ ತಿರುಪತಯ್ಯ ಪ್ರತಿಕ್ರಿಯ ನೀಡಿ.
ಕೆಲ ಡ್ರಾಯಿಂಗ್ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಮಸ್ಯೆ ಉಂಟಾಗಿದೆ ಎಂದು, ಸೋಮವಾರ ತಹಶೀಲ್ದಾರ್ ಮತ್ತು ಪಟ್ಟಣ ನ್ಯಾಯಾಲಯದ ನ್ಯಾಯಾಧೀಶರ ಬಳಿ ಚರ್ಚಿಸಿ
ಜನನ ಪ್ರಮಾಣ ಪತ್ರವನ್ನು ಪೋಷಕರಿಗೆ ಓದಿಸುವುದು ಕೆಲಸ ಶೀಘ್ರವೇ ಮಾಡಲಾಗುವುದು ಎಂದು ಭರವಸೆ ನೀಡಿದರು.