IMG 20230707 WA0091

ಪಾವಗಡ : ರಾಮಜನ್ಮಭೂಮಿಯಡೆಗೆ ಮಹಾಭಿಯಾನ….!

DISTRICT NEWS ತುಮಕೂರು

 ವೈ.ಎನ್ ಹೊಸಕೋಟೆ:   ಗ್ರಾಮದ ಶ್ರೀ ಕನ್ನಿಕಾಪರಮೆಶ್ವರಿ ದೇವಸ್ಥಾನದಲ್ಲಿ ರಾಮಜನ್ಮಭೂಮಿಯಡೆಗೆ ಮಹಾಭಿಯಾನ ಪೂಜಾ ಕಾರ್ಯಕ್ರಮವನ್ನು  ಶ್ರೀ ರಾಮಾಮೃತ ತರಂಗಿಣಿ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿತ, ಬೆಳಗ್ಗೆ ಗ್ರಾಮಕ್ಕೆ ಆಗಮಿಸಿ ಗಾಂಧಿ ವೃತ್ತದಿಂದ  ಕನ್ನಿಕಾಪರಮೇಶ್ವರಿ ದೇವಸ್ಥಾನದ ವರೆಗೆ  16 ಪ್ರಮುಖ ನದಿಗಳ ಪವಿತ್ರ ನೀರು ಹಾಗೂ ಮರಳನ್ನು ಬಳಸಿ ತಯಾರಿಸಿದ ಮಹಾಪ್ರಸಾದವನ್ನು  ಮೇರವಣಿಗೆ ಮೂಲಕ ದೇವಾಲಯಕ್ಕೆ ತಲುಪಿ   ವಿಶೇಷ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.

IMG 20230707 WA0090

ಈ ಅಭಿಯಾನದ ಸದಸ್ಯರಾದ ಸುರೇಶ್ ರವರು ಮಾತನಾಡಿ ಭಾರತದ 16 ಪುಣ್ಯನದಿಗಳ ತೀರ್ಥ ಮತ್ತು ಮೃತ್ತಿಕೆಯನ್ನು ಒಂದೆಡೆ  ಸೇರಿಸಿ ಮಹಾಸಂಗಮವಾಗಿಸಿ ಮಾಹಾಪ್ರಸಾದವನ್ನು ತಯಾರಿಸಲಾಗಿದೆ .

ಬ್ರಹ್ಮಪುತ್ರ,,ಬೀಮರತಿ,ಗಂಗಾ,ಕಾವೇರಿ,ಪ್ರಣಹಿತ,ಪೂರ್ಣಾ,ಯಮುನಾ,ಕೃಷ್ಣ, ಸಿಂದು,ಸರಯೂ,ನರ್ಮಾದ,ತುಂಗಭದ್ರಾ, ಗಂದಕಿ,ಸರಸ್ವತಿ, ಗೋದಾವರಿ, ತಾಮರಭರಣಿ  ಈ 16 ಪ್ರಮುಖ ನದಿಗಳ ಪವಿತ್ರ ನೀರು ಹಾಗೂ ಮರಳನ್ನು ಬಳಸಿ ತಯಾರಿಸಲಾದ ಮಹಾಪ್ರಸಾದಕ್ಕೆ ತಾವುಗಳು ಖುದ್ದಾಗಿ ಪೂಜಿಸಿ ಸಂಕಲ್ಪ ಸಲ್ಲಿಸಲು ನಿಮ್ಮ ಮನೆಗಳಿಗೆ ಆಹ್ವಾನಿಸಬಹುದು ಎಂದು ತಿಳಿಸಿದ್ದಾರೆ.

ಸ್ಥಳಿಯ ಮುಂಖಂಡರಾದ ಎನ್.ಆರ್.ಅಶ್ವಥ್ ಕುಮಾರ ರವರು ಮಾತನಾಡಿ ದೇಶಾದ್ಯಂತ ಸಂಚರಿಸಿ ಒಂದು ಕೋಟಿಗೂ ಹೆಚ್ಚಿನ ಕುಂಟುಬಗಳಿಂದ ಪೂಜೆ ಸಂಕಲ್ಪಗಳನ್ನು ಸ್ವಿಕರಿಸಿ ಅಯೋಧ್ಯಯಲ್ಲಿ ನಡೆಯಲಿರುವ ಮಹಾಯಾಗದಲ್ಲಿ ಈ ಮಾಹಾಪ್ರಸಾದವನ್ನು ಅರ್ಪಿಸಲಾಗುತ್ತದೆ ಇದರ ಮೂಲಕ ಶ್ರೀರಾಮನ ಆಶಿರ್ವಾದ ದೂರಕುವಂತಾಗಲಿ ಎಂಬುವುದು ಮಹಾಭಿಯಾನದ ಮೂಲ ಸಂಕಲ್ಪ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ನಾಗೇಶ್.ಟಿ.ವಿ, ಭದ್ರಿ, ರಘು, ರಮೇಶ್ ಬಾಬು, ವಲ್ಲಿನಾಥಶರ್ಮ, ಪ್ರಸಾದ್, ಸುಬ್ರಮಣ್ಯ ಶಾಸ್ತ್ರಿ, ಮುಂತಾದವರು ಹಾಜರಿದ್ದರು