ಆನೇಕಲ್: ಅತ್ತಿಬೆಲೆಯ ಗಡಿಯಲ್ಲಿರುವ ಕರ್ನಾಟಕದ ಗಡಿ ಗೋಪುರ ಕಟ್ಟಡಕ್ಕೆ ಗುರುವಾರ ರಾತ್ರಿ ತಮಿಳುನಾಡಿನ ಹೊಸೂರು ಕಡೆಯಿಂದ ರಾಜ್ಯಕ್ಕೆ ಬರುತ್ತಿದ್ದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಗಡಿ ಗೋಪುರ ಹಾನಿಗೊಳಗಾಗಿದೆ.
ಲಾರಿ ಚಾಲಕನ ಬೇಜವಾಬ್ದಾರಿಯಿಂದ ಗೋಪುರಕ್ಕೆ ಡಿಕ್ಕಿ ಯಾಗಿದೆ ಗಡಿ ಗೋಪುರದ ಒಂದು ಭಾಗದ ಕಟ್ಟಡ ಕೆಳಗೆ ಬಿದ್ದಿದೆ.
ಶಿಥಿಲಗೊಂಡಿರುವ ಕರ್ನಾಟಕದ ಗಡಿ ಗೋಪುರದ ಕಟ್ಟಡವನ್ನು ಸರಿಪಡಿಸುವಂತೆ ಆಗ್ರಹಿಸುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಇಂದು ಗಡಿಗೋಪುರದ ಮುಂಭಾಗ ಪ್ರತಿಭಟನೆಯನ್ನು ನಡೆಸಿದರು.
ರಾಷ್ಠೀಯ ಹೆದ್ದಾರಿ ಪ್ರಾದಿಕಾರದವರು ಮತ್ತು ರಾಜ್ಯ ಸರ್ಕಾರ ಕೂಡಲೇ ಸರಿಪಡಿಸಿ ಕೊಡಬೇಕು ಹಾಗೂ ಗೋಪುದ ಸುತ್ತಲೂ ತಡೆ ಗೋಡೆ ನಿರ್ಮಿಸಿ ಹಾಗೂ ಸುಸಜ್ಜಿತವಾದ ಉದ್ಯಾನವನ್ನು ನಿರ್ಮಿಸಿ ಕೊಡಬೇಕು ಎಂದು ಆಗ್ರಹಿಸಿದರು.
ಕನ್ನಡ ಜಾಗೃತಿ ವೇದಿಕೆ ಮತ್ತು ಗಡಿನಾಡು ಕನ್ನಡ ಯುವ ಸೇನೆ ಪದಾದಿಕಾರಿಗಳು ಅತ್ತಿಬೆಲೆ ಗಡಿ ಗೋಪುರದ ಬಳಿ ಪ್ರತಿಭಟನೆ ನಡೆಸಿದರು.
ಪೋಲಿಸ್ ಇಲಾಖೆಯಿಂದ ಬಿಗಿ ಬಂದೋ ಬಸ್ತು ಮಾಡಲಾಗಿತ್ತು. ಸ್ಥಳಕ್ಕೆ ಅಡಿಷನಲ್ ಎಸ್ಪಿ ಪುರುಷೋತ್ತಮ್ ರವರು ಆಗಮಿಸಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಷ್ಠೀಯ ಹೆದ್ದಾರಿ ಪ್ರಾದಿಕಾರದ ಅಧಿಕಾರಿಗಳನ್ನು ಮತ್ತು ಹೋರಾಟಗಾರರನ್ನು ಒಂದು ವಾರದ ಒಳಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಮಂಜುನಾಥ್ ದೇವು, ಗಡಿನಾಡು ಕನ್ನಡ ಯುವ ಸೇನೆಯ ರಾಜ್ಯಾಧ್ಯಕ್ಷ ನಾಗರಾಜ್ ಸೋನಿ, ಮುಖಂಡರಾದ ಅತ್ತಿಬೆಲೆ ಪಟಾಪಟ್ ರವಿ,ಕೆ.ನಾಗರಾಜ್, ಮಾಜಿ ರವಿ, ಶ್ರೀನಿವಾಸ್, ಮುನಿರಾಜು ಹಾಗೂ ಕನ್ನಡ ಜಾಗೃತಿ ವೇದಿಕೆ ಮತ್ತು ಗಡಿನಾಡು ಕನ್ನಡ ಯುವ ಸೇನೆಯ ಪದಾದಿಕಾರಿಗಳು, ಅತ್ತಿಬೆಲೆ ಇನ್ಸ್ ಪೆಕ್ಟರ್ ವಿಶ್ವನಾಥ್ ಮತ್ತು ಪೋಲಿಸರು ಭಾಗವಹಿಸಿದ್ದರು.