WhatsApp Image 2024 07 10 at 7.58.06 PM

ಪಾವಗಡ : ಗಾಂಜಾ ಮಾರಾಟ ಯತ್ನ ಬಂಧನ…..!

DISTRICT NEWS ತುಮಕೂರು

ಗಾಂಜಾ ಮಾರಾಟ ಯತ್ನ: ಬಂಧನ

ಪಾವಗಡ : ಪಾವಗಡ ಪಟ್ಟಣದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಮಂಗಳವಾರ ಪಟ್ಟಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಪಟ್ಟಣದ ರೈನ್ ಗೇಜ್ ಬಡಾವಣೆಯಲ್ಲಿ ವಾಸವಿದ್ದ ಗೌಸ್ ಮದ್ದೀನ್ (28) ಮತ್ತು ಪಿ. ರೊಪ್ಪ ಗ್ರಾಮದ ಕುಮಾರ್ (27) ಬಂಧಿತ ಆರೋಪಿಗಳು.

ಪಾವಗಡ ಪೊಲೀಸ್ ಠಾಣೆಯ ಪೇದೆಗಳಾದ ಶ್ರೀಕಾಂತ್ ನಾಯಕ್ ಮತ್ತು ಸಂತೋಷ್ ಕುಮಾರ್ ಗುಪ್ತ ಮಾಹಿತಿ ಸಂಗ್ರಹಣೆ ವಿಚಾರವಾಗಿ ಪಟ್ಟಣದಲ್ಲಿ ಗಸ್ತು ನಿರ್ವಹಿಸುತ್ತಿದ್ದು, ಪಟ್ಟಣದ ಹುಲಿ ಬೆಟ್ಟ ತಾಂಡದ ಬಳಿ ಇರುವ ಬಾಲಾಜಿ ಲೇಔಟ್ ನ ಸಮೀಪದ ಮೋರಿಯ ಬಳಿ ಆಟೋ ಒಂದು ಅನುಮಾನಸ್ಪದ ರೀತಿಯಲ್ಲಿ ನಿಲ್ಲಿಸಿದ್ದು, ಪೊಲೀಸರನ್ನು ಕಂಡ ಕೂಡಲೇ ಆರೋಪಿಯೋಬ್ಬ ನು ಓಡಲು ಪ್ರಯತ್ನಿಸಿದ್ದು, ಪೊಲೀಸರು ಆತನನ್ನು ಹಿಡಿದು ಆಟೋ ಬಳಿ ಕರೆ ತಂದು ಆಟೋ ಪರಿಶೀಲಿಸಿದಾಗ ಆಟೋದ ಹಿಂಬದಿ ಸೀಟಿನಲ್ಲಿ ಗಾಟು ವಾಸನೆ ಬರುತ್ತಿದ್ದ ಚೀಲ ಪತಿಯಾಗಿದ್ದು ಅದನ್ನು ಪರಿಶೀಲಿಸಿದಾಗ ಗಾಂಜಾ ಎಂದು ತಿಳಿದುಬಂದಿದ್ದು, ತೂಕ ಮಾಡಿದಾಗ 850 ಗ್ರಾಂ ಗಾಂಜಾ ಎಂದು ತಿಳಿದು ಬಂದಿದೆ.
ಗಾಂಜಾ ಸಮೇತ ಪೊಲೀಸರು ಇಬ್ಬರು ಆರೋಪಿಗಳನ್ನು ಮತ್ತು ಆಟೋವನ್ನು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ, ಪಿಎಸ್ಐ ಸುರೇಶ್ ಕುಮಾರ್, ವಿಜಯಕುಮಾರ್, ಸಂತೋಷ್ ಕುಮಾರ್, ತಳವಾರ್ ರಾಜ್ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.

ಆರೋಪಿಗಳನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರಪಡಿಸಿ ಮಧುಗಿರಿ ಜೈಲಿಗೆ ರವಾನಿಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

ವರದಿ. ಶ್ರೀನಿವಾಸಲು. A