ನವದೆಹಲಿ: ಮತದಾರರ ಮಾಹಿತಿ ಕಳವು, ಮಾರಾಟ, ನಿರ್ದಿಷ್ಟ ಮತದಾರರ ಹೆಸರು ಅಳಿಸಿ ಹಾಕಿರುವುದು ಸೇರಿದಂತೆ ಕರ್ನಾಟಕದಲ್ಲಿ ನಡೆದಿರುವ ಮತದಾರರ ಪಟ್ಟಿ ಹಗರಣ ಕುರಿತು ನವದೆಹಲಿಯಲ್ಲಿ ಕೇಂದ್ರ ಚುನಾವಣೆ ಆಯೋಗದ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಬುಧವಾರ ಕಾಂಗ್ರೆಸ್ ನಿಯೋಗ ದೂರನ್ನು ನೀಡಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ಸಂವಹನ ಮತ್ತು ಸಾಮಾಜಿಕ ಜಾಲಾತಾಣ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ, ಐಟಿ ವಿಭಾಗದ ಮುಖ್ಯಸ್ಥ ರಘುನಂದನ್ ರಾಮಣ್ಣ, ರಾಜ್ಯಸಭೆ ಸದಸ್ಯ ನಾಸಿರ್ ಹುಸೇನ್, ಎಂಎಲ್ಸಿ ನಜೀರ್ ಅಹ್ಮದ್, ಎಐಸಿಸಿ ಮಾಧ್ಯಮ ಸಮನ್ವಯಕಾರ ಪ್ರಣವ್ ಝಾ, ಎಐಸಿಸಿ ಕಾರ್ಯದರ್ಶಿ ಬೋಸರಾಜ್, ವಿನೀತ್ ಪೂನೀಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಜಯ್ ಮುಳುಗುಂದ್. ಹಾಜರಿದ್ದರು.