IMG 20221124 114621 scaled

ರಾಮಯ್ಯ ಸ್ಮಾರಕ ಆಸ್ಪತ್ರೆ :ಡೋಜಿ ಎಐ-ಆಧಾರಿತ ಸಂಪರ್ಕ ರಹಿತ ವೈಟಲ್ಸ್ ಮಾನಿಟರಿಂಗ್ ತಂತ್ರಜ್ಞಾನ ಅಳವಡಿಕೆ…!

BUSINESS

ರಾಮಯ್ಯ ಸ್ಮಾರಕ ಆಸ್ಪತ್ರೆ ವತಿಯಿಂದ ರೋಗಿಗಳ ವರ್ಧಿತ ಸುರಕ್ಷತೆಗಾಗಿ ಡೋಜಿ ಎಐ-ಆಧಾರಿತ ಸಂಪರ್ಕ ರಹಿತ ವೈಟಲ್ಸ್ ಮಾನಿಟರಿಂಗ್ ತಂತ್ರಜ್ಞಾನ ಅಳವಡಿಕೆ

  • ವಾರ್ಡ್‍ಗಳಲ್ಲಿ ರೋಗಿಗಳ ವರ್ಧಿತ ಸುರಕ್ಷತೆಯನ್ನು ಸಾಧಿಸುವ ಗುರಿಯೊಂದಿಗೆ, ರಾಮಯ್ಯ ಮೆಮೋರಿಯಲ್ ಹಾಸ್ಪಿಟಲ್ ಡೋಜಿಯ ಮೇಡ್-ಇನ್-ಇಂಡಿಯಾ ಕಾಂಟ್ಯಾಕ್ಟ್‍ಲೆಸ್ ರಿಮೋಟ್ ಪೇಷಂಟ್ ಮಾನಿಟರಿಂಗ್ ಮತ್ತು ಅರ್ಲಿ ವಾನಿರ್ಂಗ್ ಸಿಸ್ಟಮ್ (ಇಡಬ್ಲ್ಯುಎಸ್) ಜೊತೆಗೆ ವರ್ಧಿತ ವೈಟಲ್ಸ್ ಮಾನಿಟರಿಂಗ್ ಅನ್ನು ಅಳವಡಿಸಿಕೊಂಡಿದೆ.

ಬೆಂಗಳೂರು, ಭಾರತ, 24 ನವೆಂಬರ್ 2022: ಸೂಪರ್ ಸ್ಪೆಷಾಲಿಟಿ, ಬ್ರಾಡ್ ಸ್ಪೆಷಾಲಿಟಿ ಮತ್ತು ಮಲ್ಟಿಸ್ಪೆಷಾಲಿಟಿ ವಾರ್ಡ್‍ಗಳಲ್ಲಿ ನಿರಂತರ ರೋಗಿಗಳ ಮೇಲ್ವಿಚಾರಣೆಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಕರ್ನಾಟಕದ ಬೆಂಗಳೂರಿನ ರಾಮಯ್ಯ ಸ್ಮಾರಕ ಆಸ್ಪತ್ರೆ ಡೋಝೀ ಜೊತೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ. ರಾಮಯ್ಯ ಸ್ಮಾರಕ ಆಸ್ಪತ್ರೆಯ ವಾರ್ಡ್ ಬೆಡ್‍ಗಳನ್ನು ಈಗ ಸಂಪರ್ಕ ರಹಿತ ನಿರಂತರ ವೈಟಲ್ಸ್ ಮಾನಿಟರಿಂಗ್ ಮತ್ತು ಆರಂಭಿಕ ಎಚ್ಚರಿಕೆಯ ಎಚ್ಚರಿಕೆ ವ್ಯವಸ್ಥೆಯಿಂದ ಚಾಲಿತವಾಗಿರುವ ಡೋಝೀ ಸಂಪರ್ಕಿತ ಹಾಸಿಗೆಗಳಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಡೋಝೀ ಪರಿಹಾರವು ಕ್ಲೌಡ್- ಸಕ್ರಿಯಗೊಳಿಸಲ್ಪಟ್ಟಿದೆ ಮತ್ತು ರೋಗಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಮತ್ತು ರೋಗಿಗಳ ವರ್ಧಿತ ಸುರಕ್ಷತೆ ಮತ್ತು ಕ್ಲಿನಿಕಲ್ ಫಲಿತಾಂಶಗಳಿಗಾಗಿ ಸಮಯೋಚಿತ ವೈದ್ಯಕೀಯ ಮಧ್ಯಸ್ಥಿಕೆಗಳನ್ನು ಒದಗಿಸಲು ಆರೋಗ್ಯ ಪೂರೈಕೆದಾರರನ್ನು ಸಶಕ್ತಗೊಳಿಸುವ ಕೇಂದ್ರ ಮತ್ತು ದೂರಸ್ಥ ರೋಗಿಗಳ ಮೇಲ್ವಿಚಾರಣೆ ಸಾಮಥ್ರ್ಯವನ್ನು ಹೊಂದಿದೆ. ರಾಮಯ್ಯ ಸ್ಮಾರಕ ಆಸ್ಪತ್ರೆಯು ಸ್ಮಾರ್ಟ್ ಆಸ್ಪತ್ರೆಯಾಗುವ ಪಯಣದಲ್ಲಿ ಪ್ರಮುಖ ಡೇಟಾ ಮತ್ತು ಕಾರ್ಯಾಚರಣೆಯ ಪ್ರಕ್ರಿಯೆಗಳ ಆಟೊಮೇಷನ್ ಮತ್ತು ಡಿಜಿಟಲೀಕರಣ ಅತ್ಯಂತ ಮಹತ್ವದ್ದಾಗಿದೆ.

ಹೃದಯ ಬಡಿತ, ಉಸಿರಾಟದ ದರ, ರಕ್ತದೊತ್ತಡ, ಎಸ್‍ಓಪಿ2 ಮಟ್ಟಗಳು, ತಾಪಮಾನ ಮತ್ತು ಇಸಿಜಿಯಂತಹ ರೋಗಿಗಳ ಪ್ರಮುಖ ನಿಯತಾಂಕಗಳನ್ನು ದೂರದಿಂದಲೇ ಮೇಲ್ವಿಚಾರಣೆ ಮಾಡಲು ಡೋಝೀ ಆರೋಗ್ಯ ಕಾರ್ಯಕರ್ತರನ್ನು ಸಶಕ್ತಗೊಳಿಸುತ್ತದೆ. ಡೋಝೀ ಆರಂಭಿಕ ಎಚ್ಚರಿಕೆ ವ್ಯವಸ್ಥೆ (ಇಡಬ್ಲ್ಯುಎಸ್) ಪ್ರಮುಖ ನಿಯತಾಂಕಗಳ ಪ್ರವೃತ್ತಿಗಳನ್ನು ಟ್ರ್ಯಾಕ್ ಮಾಡುತ್ತದೆ ಮತ್ತು ಸಮಯೋಚಿತ ವೈದ್ಯಕೀಯ ಮಧ್ಯಸ್ಥಿಕೆಯನ್ನು ಸಕ್ರಿಯಗೊಳಿಸುವ ಮೂಲಕ ರೋಗಿಗಳ ಆರೋಗ್ಯ ಸ್ಥಿತಿ ಕ್ಷೀಣಿಸುವಿಕೆಯನ್ನು ಮೊದಲೇ ಪತ್ತೆ ಹಚ್ಚಲು ಆರೋಗ್ಯ ಸೇವೆ ಪೂರೈಕೆದಾರರಿಗೆ ಎಚ್ಚರಿಕೆಗಳನ್ನು ನೀಡುತ್ತದೆ. ಸಂಪರ್ಕ ರಹಿತ ವೈಟಲ್ಸ್ ಮೇಲ್ವಿಚಾರಣೆಗಾಗಿ ಡೋಝೀ ಎಐ- ಚಾಲಿತ ಬ್ಯಾಲಿಸ್ಟೋಕಾರ್ಡಿಯೋಗ್ರಫಿ (ಬಿಸಿಜಿ) ಯನ್ನು ಬಳಸುತ್ತದೆ. ಡೋಝೀ ತಂತ್ರಜ್ಞಾನವು ಪೇಟೆಂಟ್ ಹೊಂದಿದ್ದು ಇದು ಭಾರತದಲ್ಲಿ ತಯಾರಿಸಲ್ಪಟ್ಟಿದೆ. ಡೋಝೀ ಯ ನವೀನ ತಂತ್ರಜ್ಞಾನವು ಪ್ರಾಯೋಗಿಕವಾಗಿ 98.4% ನಿಖರತೆಯನ್ನು ಹೊಂದಿದೆ. ನಿರಂತರ ಪ್ರಮುಖ ಮೇಲ್ವಿಚಾರಣೆಯು ರೋಗಿಗಳ ಸುರಕ್ಷತೆ, ವೈದ್ಯಕೀಯ ಫಲಿತಾಂಶ ಮತ್ತು ಕಾರ್ಯಾಚರಣೆಯ ದಕ್ಷತೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಸ್ವತಂತ್ರ ಸಲಹಾ ಸಂಸ್ಥೆ ಸತ್ವ ನಡೆಸಿದ ಸಂಶೋಧನೆಯು ಪ್ರತಿ 100 ಡೋಝೀ ಸಂಪರ್ಕಿತ ಹಾಸಿಗೆಗಳಿಗೆ, ಇದು 144 ಜೀವಗಳನ್ನು ಉಳಿಸುತ್ತದೆ ಮತ್ತು ಶುಶ್ರೂಷಕರಿಂದ ಜೀವಾಧಾರಕ್ಕಾಗಿ ತೆಗೆದುಕೊಳ್ಳುವ ಸಮಯವನ್ನು ಶೇಕಡ 80 ರಷ್ಟು ಉಳಿಸುತ್ತದೆ ಮತ್ತು ಐಸಿಯು ಎಎಲ್‍ಬಿಓಎಸ್ ಅನ್ನು 1.3 ದಿನಗಳವರೆಗೆ ಕಡಿಮೆ ಮಾಡುತ್ತದೆ ಎಂದು ತೋರಿಸುತ್ತದೆ.

IMG 20221124 114355 rotated

ರಾಮಯ್ಯ ಸ್ಮಾರಕ ಆಸ್ಪತ್ರೆಯ ಅಧ್ಯಕ್ಷ ಡಾ. ಕೆ.ಸಿ ಗುರುದೇವ್ ಅವರು, ರೋಗಿಗಳ ಸಂಪರ್ಕ ರಹಿತ ದೂರಸ್ಥ ಮೇಲ್ವಿಚಾರಣೆಗಾಗಿ ಈ ಸಂಪರ್ಕಿತ ಆರೈಕೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಆಸ್ಪತ್ರೆಯ ನಿರ್ಣಯದ ಕುರಿತು ವಿವರ ನೀಡಿ, “ಉತ್ತಮ ಜಗತ್ತಿಗೆ ಉತ್ತಮ ಆರೋಗ್ಯ ಎಂಬ ನಮ್ಮ ಧ್ಯೇಯಕ್ಕೆ ಅನುಗುಣವಾಗಿ, ನಾವು ಸಾಧನೆಯ ಹಾದಿಯಲ್ಲಿ ಮುಂದುವರಿಯುತ್ತಿದ್ದೇವೆ. ಡೋಝೀ ಜೊತೆಗಿನ ಈ ಸಹಯೋಗದ ಮೂಲಕ ನಮ್ಮ ರೋಗಿಗಳಿಗೆ ಸಮಗ್ರ ಆರೋಗ್ಯ ಸೇವೆಯನ್ನು ತಲುಪಿಸುವ ಗುರಿ ಹಾಕಿಕೊಂಡಿದ್ದೇವೆ. ತಂತ್ರಜ್ಞಾನದ ಈ ಯುಗದಲ್ಲಿ, ನಾವು ನಮ್ಮ ರೋಗಿಗಳನ್ನು ಉತ್ತಮವಾಗಿ ನೋಡಿಕೊಳ್ಳಲು ಸಾಧ್ಯವಾಗುವಂತಹ ಸಂಪನ್ಮೂಲಗಳು ಮತ್ತು ಸಾಧನಗಳೊಂದಿಗೆ ನಮ್ಮನ್ನು ನಾವು ನವೀಕರಿಸಿಕೊಳ್ಳುವುದು ಮತ್ತು ಸಿದ್ಧಪಡಿಸುವುದು ಕಡ್ಡಾಯವಾಗಿದೆ. ಡೋಝೀ ಮೂಲಕ, ಬಿಕ್ಕಟ್ಟಿನ ಸಂದರ್ಭಗಳನ್ನು ತಪ್ಪಿಸಲು ಮತ್ತು ನಮ್ಮ ರೋಗಿಗಳು ಪಡೆಯುವ ಆರೈಕೆಯ ಗುಣಮಟ್ಟವನ್ನು ಸುಧಾರಿಸಲು ನಮ್ಮ ಹೆಚ್ಚು ನುರಿತ ಆರೋಗ್ಯ ಕಾರ್ಯಪಡೆಗೆ ಸಹಾಯ ಆಗುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ನುಡಿದರು

ರೋಗಿಗಳ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲು, ಕ್ಲಿನಿಕಲ್ ಫಲಿತಾಂಶಗಳು ಮತ್ತು ಶುಶ್ರೂಷಾ ದಕ್ಷತೆಯನ್ನು ಸುಧಾರಿಸಲು ನಾವು ತಂತ್ರಜ್ಞಾನವನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿರುವುದರಿಂದ ರಾಮಯ್ಯ ಸ್ಮಾರಕ ಆಸ್ಪತ್ರೆಯಂತಹ ಪ್ರತಿಷ್ಠಿತ ಸಂಸ್ಥೆಯೊಂದಿಗೆ ಕೈಜೋಡಿಸುವುದು ನಮಗೆ ಸಂತಸವಾಗಿದೆ. ನಿರಂತರ ವಾರ್ಡ್ ಮಾನಿಟರಿಂಗ್ ಮತ್ತು ಅರ್ಲಿ ವಾನಿರ್ಂಗ್ ಸಿಸ್ಟಮ್‍ಗಳನ್ನು ಅಳವಡಿಸಿಕೊಳ್ಳುವುದು ಗುಣಮಟ್ಟದ ಆರೋಗ್ಯ ಸೇವೆಯನ್ನು ದೊಡ್ಡ ಪ್ರಮಾಣದಲ್ಲಿ ಒದಗಿಸುವುದು ಪ್ರಮುಖವಾಗಿದೆ ಎಂದು ಡೋಝೀ ಸಿಇಒ ಮತ್ತು ಸಹ ಸಂಸ್ಥಾಪಕರಾದ ಮುದಿತ್ ದಂಡ್ವಾಟೆ ಹೇಳಿದ್ದಾರೆ.

ಬೆಂಗಳೂರಿನ ಉದ್ಯಾನನಗರಿಯಲ್ಲಿರುವ ರಾಮಯ್ಯ ಸ್ಮಾರಕ ಆಸ್ಪತ್ರೆಯು ಕೈಗೆಟಕುವ ವೆಚ್ಚದಲ್ಲಿ ರೋಗಿಗಳಿಗೆ ಗುಣಮಟ್ಟದ ಆರೈಕೆಯನ್ನು ನೀಡುವ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾಗಿದೆ. ಇದನ್ನು ದಾರ್ಶನಿಕ ಮತ್ತು ಲೋಕೋಪಕಾರಿ ದಿವಂಗತ ಡಾ.ಎಂ.ಎಸ್. ರಾಮಯ್ಯ ಅವರು ಸ್ಥಾಪಿಸಿದರು. ಪ್ರಸ್ತುತ ಗೋಕುಲ ಶಿಕ್ಷಣ ಪ್ರತಿಷ್ಠಾನದಿಂದ ನಿರ್ವಹಿಸಲ್ಪಡುತ್ತಿರುವ ಆಸ್ಪತ್ರೆಯನ್ನು ಸಮಾಜಕ್ಕೆ ಮರಳಿ ನೀಡುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ಇದು ತನ್ನ ರೋಗಿಗಳಿಗೆ ಸೂಕ್ತ ಆರೋಗ್ಯ ಪರಿಹಾರಗಳನ್ನು ಒದಗಿಸುವ ಮೂಲಕ ನಿರಂತರವಾಗಿ ಈ ಸೇವೆ ಮುಂದುವರಿಸಿಕೊಂಡು ಹೋಗಲು ಪ್ರಯತ್ನಿಸುತ್ತಿದೆ.

.