gold 1595590100

Gold : ಇಂದಿನಿಂದ ಚಿನ್ನಾಭರಣಕ್ಕೆ ಹಾಲ್ಮಾರ್ಕಿಂಗ್ ಕಡ್ಡಾಯ…!

BUSINESS

ಚಿನ್ನ ಎಂದರೆ ಭಾರತ ನಾರಿಯರಿಗೆ ಬಲು ಪ್ರಿಯ ಮನೆಗಳಲ್ಲಿ  ಯಾವುದೇ ಸಮಾರಂಭ ನಡೆದರು ತಮ್ಮ ಆರ್ಥಿಕ ಸಾಮರ್ಥ್ಯಾನುಸಾರ ಚಿನ್ನ ಖರಿದಿಸುತ್ತಾರೆ. ಚಿನ್ನ ಖರೀದಿಸುವವರಿಗೆ ಈಗ ಅದರ ಗುಣಮಟ್ಟದ ಬಗ್ಗೆ ಅರಿವು ಇರಬೇಕಿದೆ. ಕೇಂದ್ರಸರ್ಕಾರ ಚಿನ್ನ ಮಾರಟಕ್ಕೆ ಹೊಸ ನಿಯಮ ಜಾರಿಗೆ ತಂದಿದೆ.

ಹಳೆಯ ಚಿನ್ನದ ಆಭರಣಳನ್ನು  ಸಹ ಸಾಧ್ಯವಾದರೆ ಹಾಲ್‌ಮಾರ್ಕ್‌ ಮಾಡಬಹುದು. ಅಥವಾ ಕರಗಿಸಿ ಹೊಸ ಆಭರಣಗಳನ್ನು ಮಾಡಿದ ನಂತರ ಹಾಲ್‌ಮಾರ್ಕ್‌ ಗುರುತು ಮಾಡಬಹುದು.

ಇಂದಿನಿಂದ, ಚಿನ್ನಾಭರಣಗಳಿಗೆ ಹಾಲ್ಮಾರ್ಕಿಂಗ್ ಕಡ್ಡಾಯವಾಗಿರುತ್ತದೆ. ಜೂನ್ 15 ರಿಂದ, ಎಲ್ಲಾ ಆಭರಣ ವ್ಯಾಪಾರಿಗಳು ಬಿಐಎಸ್ ಹಾಲ್ಮಾರ್ಕಿಂಗ್ ಪ್ರಮಾಣೀಕೃತ ಚಿನ್ನಾಭರಣಗಳನ್ನು ಮಾತ್ರ ಮಾರಾಟ ಮಾಡಬೇಕಾಗುತ್ತದೆ. ಇದಕ್ಕಾಗಿ ಕೇಂದ್ರ ಸರ್ಕಾರ  ಒಂದು ವರ್ಷದ ಹಿಂದೆ ನೀಲಿನಕ್ಷೆ ಸಿದ್ಧಪಡಿಸಿತು. ಆದರೆ ಕರೋನಾ  ಸೋಕಿಂದ ದಿನಾಂಕಗಳನ್ನು ಮುಂದೂಡಲಾಗುತ್ತಿತ್ತು

ಇಂದಿನಿಂದ ಹಾಲ್ಮಾರ್ಕಿಂಗ್ ಚಿನ್ನಾಭರಣಗಳು ಕಡ್ಡಾಯ ಎಂದು  ಕೇಂದ್ರ ಸಚಿವ ಪಿಯೂಷ್ ಗೋಯಲ್  ತಿಳಿಸಿದ್ದಾರೆ,  ಚಿನ್ನದ ಆಭರಣಗಳು ಅತ್ಯುತ್ತಮ ಗುಣಮಟ್ಟವನ್ನು ಹೊಂದಿರಬೇಕು ಎಂದು ಹೇಳಿದರು. ಯಾವುದೇ ವಿಳಂಬವಿಲ್ಲದೆ ಹಾಲ್‌ಮಾರ್ಕ್ ಪ್ರಮಾಣೀಕೃತ ಚಿನ್ನಾಭರಣವನ್ನು ದೇಶಾದ್ಯಂತ  ಗ್ರಾಹಕರು ಪಡೆಯಲು  ಕೋರಿದ್ದಾರೆ..

ಹಾಲ್ಮಾರ್ಕಿಂಗ್ ಕಡ್ಡಾಯವಾಗುವುದರಿಂದ ಚಿನ್ನದ ಮಾರುಕಟ್ಟೆಯಲ್ಲಿ ಏನು ಬದಲಾಗುತ್ತದೆ? ದೇಶದಲ್ಲಿ ಹಾಲ್ಮಾರ್ಕಿಂಗ್‌ಗೆ ಸಂಬಂಧಿಸಿದ ನಿಯಮಗಳು ಏನೆಂದರೆE4ExILrUYAIPCjD Copy

ಹಾಲ್ಮಾರ್ಕಿಂಗ್ ಎಂದರೇನು?

ee359849200bbff025575df8048d429c

ಹಾಲ್ಮಾರ್ಕಿಂಗ್ ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂನಂತಹ ಲೋಹಗಳ ಶುದ್ಧತೆಯನ್ನು ಪರಿಶೀಲಿಸುವ ಒಂದು ಮಾರ್ಗವಾಗಿದೆ. ಇದು ವಿಶ್ವಾಸಾರ್ಹತೆಯನ್ನು ಒದಗಿಸುವ ಸಾಧನವಾಗಿದೆ. ಹಾಲ್ಮಾರ್ಕಿಂಗ್ ಪ್ರಕ್ರಿಯೆಯು ದೇಶಾದ್ಯಂತ ಹಾಲ್ಮಾರ್ಕಿಂಗ್ ಕೇಂದ್ರಗಳಲ್ಲಿ ನಡೆಯುತ್ತದೆ. ಇವುಗಳನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ನೋಡಿಕೊಳ್ಳುತ್ತದೆ..ಆಭರಣವನ್ನು ಹಾಲ್ಮಾರ್ಕ್ ಮಾಡಿದರೆ, ಅದರ ಶುದ್ಧತೆಯನ್ನು ಪರಿಶೀಲಿಸಲಾಗಿದೆ ಎಂದರ್ಥ. ಮೂಲ ಹಾಲ್ಮಾರ್ಕ್ನಲ್ಲಿ ಬಿಐಎಸ್ ಸ್ಟಾಂಪ್, ಗೋಲ್ಡ್ ಕ್ಯಾರೆಟ್ ಮಾಹಿತಿ, ಸೆಂಟರ್ ಲೋಗೊ ಮತ್ತು ಹಾಲ್ಮಾರ್ಕ್ ಮಾಹಿತಿಯೊಂದಿಗೆ ಒಟ್ಟು 4 ಚಿಹ್ನೆಗಳು ಇರಲಿವೆ.E4ExILrUYAIPCjD

ಹಾಲ್ಮಾರ್ಕಿಂಗ್ ಸಾಮರ್ಥ್ಯ ಎಂದರೇನು?

ಪ್ರಸ್ತುತ ಹಾಲ್ಮಾರ್ಕಿಂಗ್ ಕೇಂದ್ರವು ದಿನದಲ್ಲಿ 1500 ಆಭರಣಗಳನ್ನು ಪತ್ತೆ ಮಾಡುತ್ತದೆ. ಈ ಕೇಂದ್ರಗಳ ಅಂದಾಜು ಹಾಲ್ಮಾರ್ಕಿಂಗ್ ಸಾಮರ್ಥ್ಯ. ವರ್ಷಕ್ಕೆ 14 ಕೋಟಿ ಆಭರಣಗಳು (ಪ್ರತಿ ಶಿಫ್ಟ್‌ಗೆ 500 ಆಭರಣಗಳು 300 ಕೆಲಸದ ದಿನಗಳು ಎಂದು ). ವಿಶ್ವ ಚಿನ್ನದ ಮಂಡಳಿಯ ಪ್ರಕಾರ ಭಾರತದಲ್ಲಿ ಸುಮಾರು 4 ಲಕ್ಷ ಆಭರಣಕಾರರಿದ್ದಾರೆ. ಅವರಲ್ಲಿ 35879 ಮಾತ್ರ ಬಿಐಎಸ್ ಪ್ರಮಾಣೀಕೃತರಾಗಿದ್ದಾರೆ.

ಈ ನಿಯಮವನ್ನು ಜಾರಿಗೊಳಿಸುವುದರಿಂದ ಏನು ಪ್ರಯೋಜನ?

ಜೂನ್ 15 ರಿಂದ ಹಾಲ್ಮಾರ್ಕಿಂಗ್ ಕಡ್ಡಾಯವಾದ ನಂತರ ದೇಶದಲ್ಲಿ ಕೇವಲ 22 ಕ್ಯಾರೆಟ್, 18 ಕ್ಯಾರೆಟ್ ಮತ್ತು 14 ಕ್ಯಾರೆಟ್ ಆಭರಣಗಳನ್ನು ಮಾರಾಟ ಮಾಡಬೇಕಾಗುತ್ತದೆ. ಇದು ವಂಚನೆ -ಮೋಸ ಮಾಡುವ ಕೆಲಸಗಳಿಗೆ ಇತಿಶ್ರೀ ಹಾಡಿದಂತಾಗಲಿದೆ.. ಹಾಲ್ಮಾರ್ಕಿಂಗ್ ಬಿಐಎಸ್ ಸ್ಟಾಂಪ್ ಮತ್ತು ಕ್ಯಾರೆಟ್ ಮಾಹಿತಿಯನ್ನು ಒಳಗೊಂಡಿರುತ್ತದೆ ಇದರಿಂದ  ಚಿನ್ನದ ಮಾರುಕಟ್ಟೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಾಗಲಿದೆ.