IMG 20210616 WA0003

ಕರ್ನಾಟಕದಲ್ಲಿ 400-500 ಮಂದಿಯಲ್ಲಿ ಬ್ಲಾಕ್ ಫಂಗಸ್ ಕಾಯಿಲೆ….!

Genaral STATE

ಸಾರ್ಸ್-ಕೋವ್-2ನ ಡೆಲ್ಟಾ ರೂಪಾಂತರವು ಕಪ್ಪು ಶಿಲೀಂಧ್ರದ ಅಪಾಯಕ್ಕೆ ಕಾರಣ
– ಕರ್ನಾಟಕದಲ್ಲಿ 400-500 ಮಂದಿಯಲ್ಲಿ ಕಪ್ಪು ಶಿಲೀಂಧ್ರ ಸೋಂಕು ಪತ್ತೆ
– ಇದೊಂದು ಸಾಂಕ್ರಾಮಿಕ ರೋಗವೆಂದು ಘೋಷಣೆ
– ಕಪ್ಪು ಶಿಲೀಂಧ್ರ ಒಂದು ಅಪರೂಪದ ರೋಗ, ಆದರೆ, ಗಂಭೀರ ಮತ್ತು ಕ್ಷಿಪ್ರವಾಗಿ ಹರಡುವ ರೋಗ
– ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಸಾವಿನ ಪ್ರಮಾಣ ಶೇ.50 ರಷ್ಟು ಸಾಧ್ಯತೆ

ಬೆಂಗಳೂರು, ಜೂನ್ 16, 2021: ಸಾರ್ಸ್-ಕೋವ್-2 ಡೆಲ್ಟಾ ರೂಪಾಂತರವು ಆಲ್ಫಾ ರೂಪಾಂತರಕ್ಕೆ ಹೋಲಿಸಿದರೆ ಶೇ.40 ಕ್ಕಿಂತ ಹೆಚ್ಚಿನ ಪ್ರಸರಣ ದರವನ್ನು ಹೊಂದಿದೆ(ಇದು ವೈರಸ್‍ನ ಮೂಲ ಒತ್ತಡಕ್ಕಿಂತ ಶೇ.50 ಕ್ಕಿಂತ ಹೆಚ್ಚಿನ ಹರಡುವಿಕೆಯನ್ನು ಹೊಂದಿದೆ), ಇದು ಆಲ್ಫಾಗಿಂತ ಹೆಚ್ಚಿನ ತೀವ್ರ ರೀತಿಯಾದ ಕಾಯಿಲೆಗೆ ಕಾರಣವಾಗುತ್ತದೆ. ಇದರ ಪರಿಣಾಮ ಯುವ ಜನರಲ್ಲಿಯೂ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ ಮತ್ತು ಆಸ್ಪತ್ರೆಗೆ ದಾಖಲಾಗುವ ಅಗತ್ಯತೆ ಇರುತ್ತದೆ. ಈ ಡೆಲ್ಟಾ ರೂಪಾಂತರವು ತೀವ್ರ ರೀತಿಯಾದ ಮತ್ತು ತೀವ್ರವಾದ ರೋಗನಿರೋಧಕ ನಿಗ್ರಹ ಹಾಗೂ ತೀವ್ರ ರೀತಿಯ ಹೈಪರ್‍ಗ್ಲೈಸೆಮಿಕ್ ಸ್ಥಿತಿಯನ್ನು ಉಂಟುಮಾಡುತ್ತದೆ, ಇದು ಮ್ಯುಕೋರ್ಮೈಕೋಸಿಸ್ ಅಂದರೆ ಕಪ್ಪು ಶಿಲೀಂಧ್ರದಂತಹ ಅವಕಾಶವಾದಿ ಸೋಂಕಿನ ಅಪಾಯಕ್ಕೆ ತಳ್ಳುತ್ತದೆ ಎಂದು ವಿಕ್ರಂ ಆಸ್ಪತ್ರೆಯ(ಮಣಿಪಾಲ್ ಹಾಸ್ಪಿಟಲ್ಸ್‍ನ ಸಮೂಹ ಸಂಸ್ಥೆ) ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕದಲ್ಲಿ ಸುಮಾರು 400-500 ಮಂದಿ ರೋಗಿಗಳಲ್ಲಿ ಈ ಮ್ಯುಕೋರ್ಮೈಕೋಸಿಸ್ ಗುಣಲಕ್ಷಣವಿರುವುದು ಪತ್ತೆಯಾಗಿದೆ. ಇದರಿಂದಾಗಿ ಇದು ಸಾಂಕ್ರಾಮಿಕ ರೋಗ ಎಂದು ರಾಜ್ಯದಲ್ಲಿ ಘೋಷಿಸಲಾಗಿದೆ.

ವಿಕ್ರಂ ಆಸ್ಪತ್ರೆಯ(ಮಣಿಪಾಲ್ ಹಾಸ್ಪಿಟಲ್ಸ್‍ನ ಸಮೂಹ ಸಂಸ್ಥೆ) ಕನ್ಸಲ್ಟೆಂಟ್ ಇಎನ್‍ಟಿ, ಹೆಡ್ & ನೆಕ್ ಸರ್ಜನ್ ಡಾ.ಶ್ರೀನಿವಾಸ್ ಕೆ. ಅವರು ಮಾತನಾಡಿ, “ಈ ಕಪ್ಪು ಶಿಲೀಂಧ್ರ ಅಥವಾ ಮ್ಯುಕೋರ್ಮೈಕೋಸಿಸ್ ಒಂದು ಅಪರೂಪದ ಮತ್ತು ಕ್ಷಿಪ್ರವಾಗಿ ಹರಡುವ ರೋಗವಾಗಿದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಸಾವಿನ ಪ್ರಮಾಣವನ್ನು ಹೆಚ್ಚು ಮಾಡುತ್ತದೆ. ಚಿಕಿತ್ಸೆ ಪಡೆಯದ ಡಯಾಬಿಟಿಸ್ ಅಥವಾ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದು ಔಷಧಿಗಳನ್ನು ತೆಗೆದುಕೊಳ್ಳುತ್ತಿರುವವರಂತಹ ಜನರಲ್ಲಿ ಈ ರೋಗ ಕಂಡು ಬರುತ್ತದೆ. ಮ್ಯುಕೋರ್ಮೈಸಿಟಿಸ್ ಎಂಬ ಫಂಗಸ್‍ನಿಂದ ಈ ಸೋಂಕು ಹರಡುತ್ತದೆ. ಇದು ನಮ್ಮ ಸುತ್ತಮುತ್ತ ಜೀವಿಸುತ್ತಿರುತ್ತದೆ. ಉಸಿರಾಟದ ಮೂಲಕ, ಬೀಜಕಗಳ ಇನ್ಯಾಕ್ಯುಲೇಶನ್ ಅಥವಾ ಸೇವನೆಯಿಂದ ಈ ಸೋಂಕು ಹರಡುತ್ತದೆ. ಗೋಡೆಗಳಲ್ಲಿ, ನಕಾರಾತ್ಮಕ ಒತ್ತಡ ಇರುವ ಕೊಠಡಿಗಳು, ನೀರು ಸೋರುವಿಕೆ ತಾಣಗಳು, ಕಡಿಮೆ ಅಥವಾ ಕಳಪೆ ಏರ್ ಫಿಲ್ಟ್ರೇಶನ್, ಕಟ್ಟಡ ನಿರ್ಮಾಣ ಚಟುವಟಿಕೆಗಳು ಸೇರಿದಂತೆ ಇತ್ಯಾದಿಗಳಿಂದ ಈ ಫಂಗಸ್ ಹರಡುತ್ತದೆ’’ ಎಂದು ತಿಳಿಸಿದ್ದಾರೆ.

ವಿಕ್ರಂ ಆಸ್ಪತ್ರೆಯ(ಮಣಿಪಾಲ್ ಹಾಸ್ಪಿಟಲ್ಸ್‍ನ ಸಮೂಹ ಸಂಸ್ಥೆ) ಕನ್ಸಲ್ಟೆಂಟ್- ಇಂಟರ್ನಲ್ ಮೆಡಿಸಿನ್ ಡಾ.ಪ್ರಮೋದ್ ವಿ.ಸತ್ಯ ಅವರು ಮಾತನಾಡಿ, “ರೋಗಿಗಳು ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಂಡರೆ ಈ ಕಪ್ಪು ಶಿಲೀಂಧ್ರ ರೋಗವನ್ನು ತಡೆಗಟ್ಟಬಹುದಾಗಿದೆ. ಅಂದರೆ, ರೋಗ ಲಕ್ಷಣಗಳು ಕಂಡು ಬಂದ ಆರಂಭಿಕ ಹಂತದಿಂದ ಮೂರು ವಾರಗಳ ಚಿಕಿತ್ಸೆಯನ್ನು ಪಡೆದುಕೊಂಡರೆ ಗುಣಪಡಿಸಬಹುದಾಗಿದೆ. ಈ ಗುಣಲಕ್ಷಣ ಹೊಂದಿದ ರೋಗಿಗಳು ಸಂಪೂರ್ಣವಾಗಿ ಮತ್ತು ಆಗಿಂದಾಗ್ಗೆ ತೊಂದರೆಗೊಳಗಾದ ಜಾಗದಲ್ಲಿರುವ ಸೋಂಕಿತ ಅಂಗಾಂಶವನ್ನು ತೆಗೆದುಹಾಕಲು ಸರ್ಜರಿಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಅದೇ ರೀತಿ, ಆಂಫೋಟೆರಿಸಿನ್-ಬಿ ಮಾದರಿಯಂತ ಫಂಗಸ್ ನಿರೋಧಕ ಔಷಧಿ ಮತ್ತು ಚಿಕಿತ್ಸೆ ಪಡೆದುಕೊಳ್ಳಬೇಕು. ಇದು ಕ್ಷಿಪ್ರವಾಗಿ ಹರಡುವ ರೋಗವಾಗಿದೆ ಮತ್ತು ಮಾರಣಾಂತಿಕವಾಗಿರುವ ಹಿನ್ನೆಲೆಯಲ್ಲಿ ಗುಣಲಕ್ಷಣಗಳು ಕಂಡು ಬಂದ ಆರಂಭಿಕ ಹಂತದಲ್ಲಿಯೇ ತಕ್ಷಣ ಇಎನ್‍ಟಿ ತಜ್ಞ ವೈದ್ಯರನ್ನು ಸಂಪರ್ಕ ಮಾಡಿ ಅವರಿಂದ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ ಎಂಬುದನ್ನು ನಾವು ಸಲಹೆ ಮಾಡುತ್ತೇವೆ. ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆಯುವುರಿಂದ ಉತ್ತಮ ರೀತಿಯಲ್ಲಿ ಗುಣಮುಖರಾಗಬಹುದಾಗಿದೆ’’ ಎಂದರು.IMG 20210616 WA0004

ವಿಕ್ರಂ ಆಸ್ಪತ್ರೆಯ(ಮಣಿಪಾಲ್ ಹಾಸ್ಪಿಟಲ್ಸ್‍ನ ಸಮೂಹ ಸಂಸ್ಥೆ) ನೆಫ್ರೋಲಾಜಿಸ್ಟ್ & ಟ್ರಾನ್ಸ್‍ಪ್ಲಾಂಟ್ ಫಿಸಿಶಿಯನ್ ಡಾ.ಪಾರ್ಥ ಪ್ರದೀಪ್ ಶೆಟ್ಟಿ ಅವರು ಕಪ್ಪು ಶಿಲೀಂಧ್ರ ಸೋಂಕುನಿಂದ ಅಪಾಯದ ಬಗ್ಗೆ ಮಾತನಾಡಿ, “ಒಬ್ಬರ ರೋಗನಿರೋಧಕ ಶಕ್ತಿಯನ್ನು ನಿಗ್ರಹಿಸಲು ಕಾರಣವಾಗುವ ರೋಗಗಳಿಂದ ಬಳಲುತ್ತಿರುವ ವ್ಯಕ್ತಿಗಳು ಕಪ್ಪು ಶಿಲೀಂಧ್ರ ಸೋಂಕಿನ ಅಪಾಯವನ್ನು ಹೊಂದಿರುತ್ತಾರೆ. ಅನಿಯಂತ್ರಿತವಾದ ಮಧುಮೇಹವು ಅಪಾಯಕಾರಿ ಅಂಶಗಳಲ್ಲಿ ಒಂದಾಗಿರುತ್ತದೆ. ಕ್ಯಾನ್ಸರ್ ರೋಗಿಗಳು, ಡಯಾಲಿಸ್‍ಗೆ ಒಳಗಾಗುವ ರೋಗಿಗಳು ಮತ್ತು ಕಾರ್ಟಿಕೊಸ್ಟರಾಯ್ಡ್‍ಗಳೊಂದಿಗೆ ಚಿಕಿತ್ಸೆ ಪಡೆಯುತ್ತಿರುವವರಿಗೂ ಇದು ಹೆಚ್ಚಿನ ಅಪಾಯವನ್ನು ತಂದೊಡ್ಡುತ್ತದೆ. ಇದರ ಅಪಾಯಕಾರಿ ಅಂಶಗಳೆಂದರೆ ಆಘಾತ ಅಥವಾ ಸುಟ್ಟ ಗಾಯಗಳಿಂದ ಬಳಲುತ್ತಿರುವ ರೋಗಿಗಳು ಮತ್ತು ಅಂಗ ಅಥವಾ ಮೂಳೆ ಮಜ್ಜೆಯ ಕಸಿಗೆ ಒಳಗಾದವರು ಹೆಚ್ಚು ಜಾಗರೂಕರಾಗಿರಬೇಕು. ಈ ಹಿಂದೆ ಕೋವಿಡ್-19 ಸೋಂಕನ್ನು ಹೊಂದಿದ್ದರೆ ಮತ್ತು ಸ್ಟಿರಾಯ್ಡ್‍ಗಳು ಅಥವಾ ರೆಮೆಡಿಸಿವರರ್‍ನೊಂದಿಗೆ ಚಿಕಿತ್ಸೆ ಪಡೆದಿದ್ದರೆ ಅಥವಾ ಆಕ್ಸಿಜನ್‍ನೊಂದಿಗೆ ಚಿಕಿತ್ಸೆ ಪಡೆದಿದ್ದ ರೋಗಿಗಳು ವಿಶೇಷವಾಗಿ ಹೆಚ್ಚಿನ ಜಾಗ್ರತೆಯನ್ನು ವಹಿಸಬೇಕಾಗುತ್ತದೆ’’ ಎಂದು ಸಲಹೆ ನೀಡಿದರು.

ಮೂಗಿನ ಸುತ್ತ ಇರುವ ಮೂಳೆಗಳಲ್ಲಿನ ಸಣ್ಣ ಟೊಳ್ಳಾದ ಭಾಗಗಳು(ಪ್ಯಾರಾನಾಸಲ್ ಸೈನಸ್‍ಗಳು), ನಾಸಲ್ ಕ್ಯಾವಿಟಿ, ಅಂಗುಳ, ಸ್ಕಲ್ ಬೇಸ್ ಮತ್ತು ಗಂಟಲಿನ ಹಿಂಭಾಗ ಸೇರಿದಂತೆ ಇನ್ನಿತರೆ ಭಾಗಗಳಲ್ಲಿ ಈ ಕಪ್ಪು ಶಿಲೀಂಧ್ರ ಸೋಂಕು ಸುಲಭವಾಗಿ ಹರಡುತ್ತದೆ. ಕ್ರಮೇಣ ಕಣ್ಣುಗಳು ಮತ್ತು ಮೆದುಳನ್ನೂ ಆವರಿಸಿಕೊಳ್ಳಬಹುದು. ಈ ಸೋಂಕು ಆವರಿಸಿಕೊಳ್ಳುವ ಇತರೆ ಭಾಗಗಳೆಂದರೆ ಚರ್ಮ, ಶ್ವಾಸಕೋಶಗಳು ಮತ್ತು ಜೀರ್ಣಾಂಗವ್ಯೂಹಗಳು. ಮುಖದಲ್ಲಿ ನೋವು ಕಾಣಿಸಿಕೊಳ್ಳುವುದು, ಪಫಿನೆಸ್ ಅಥವಾ ಊತ, ಕಣ್ಣಿನ ನೋವು, ಕಣ್ಣುಗಳ ಸುತ್ತಲೂ ಪಫಿನೆಸ್, ದೃಷ್ಟಿ ಮಸುಕಾಗುವುದು ಅಥವಾ ಮೂಗು ಕಟ್ಟಿಕೊಳ್ಳುವುದರೊಂದಿಗೆ ತಲೆನೋವು, ಹಲ್ಲುನೋವು, ಅಂಗುಳಲ್ಲಿ ಊತ ಕಾಣಿಸಿಕೊಳ್ಳುವುದು ಸೇರಿದಂತೆ ಇನ್ನಿತರೆ ಭಾಗಗಳಿಗೆ ಹರಡುವ ಸಾಧ್ಯತೆಗಳಿವೆ’’ ಎಂದು ವಿವರಿಸಿದರು.

ಡಾ.ಶ್ರೀನಿವಾಸ್ ಕೆ, ಅವರು ಮಾತನಾಡಿ, “ಸೈನಸ್‍ಗಳು, ಮೆದುಳು, ಅಂಗಳ ಅಥವಾ ಕಣ್ಣುಗಳಿಗೆ ಈ ಕಪ್ಪು ಶಿಲೀಂಧ್ರ ಸೋಂಕು ಹರಡಿರುವ ರೋಗಿಗಳಿಗೆ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ಇಲ್ಲಿಗೆ ಬೇಗನೇ ಬರುವ ರೋಗಿಗಳಲ್ಲಿ ಬಹುತೇಕ ಮಂದಿ ಮೂಗಿನ ಮತ್ತು ಅದಕ್ಕೆ ಸಂಬಂಧಿತ ತಲೆನೋವಿನ ಲಕ್ಷಣಗಳನ್ನು ಹೊಂದಿದವರಾಗಿದ್ದಾರೆ. ಅಂತಹವರಿಗೆ ಸಕಾಲದಲ್ಲಿ ಸರ್ಜಿಕಲ್ ಮತ್ತು ಮೆಡಿಕಲ್ ನಿರ್ವಹಣೆ ಮಾಡಲಾಗುತ್ತಿದೆ. ಅವರ ಕಣ್ಣು, ಮೆದುಳು ಅಥವಾ ಅಂಗುಳಿಗೆ ರೋಗವು ಹರಡಿದಾಗ ಕೆಲವು ರೋಗಿಗಳು ತಡವಾಗಿ ಚಿಕಿತ್ಸೆಗಾಗಿ ಬರುತ್ತಾರೆ. ಹೀಗಾಗಿ ಅವರು ಹೆಚ್ಚು ಕಾಲ ಆಸ್ಪತ್ರೆಗೆ ದಾಖಲಾಗಿ ತೀವ್ರ ರೀತಿಯ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಾಗುತ್ತದೆ. ನಾವು ಇಲ್ಲಿಗೆ ಬರುವ ರೋಗಿಗಳಲ್ಲಿ ಏಕ ಶಿಲೀಂಧ್ರ ಮತ್ತು ಬಹುಶಿಲೀಂಧ್ರ ಆವರಿಸಿಕೊಂಡಿರುವುದನ್ನು ನೋಡುತ್ತಿದ್ದೇವೆ. ರೋಗಿಗಳಲ್ಲಿ ನಾವು ನೋಡುತ್ತಿರುವ ಕಪ್ಪು ಶಿಲೀಂಧ್ರವನ್ನು ಹೊರತುಪಡಿಸಿದರೆ ಇತರೆ ಶಿಲೀಂಧ್ರಗಳಾದ ಕ್ಯಾಂಡಿಡಾ ಅಲ್ಬಿಕ್ಯಾನ್ಸ್, ಆಸ್ಪರ್ಜಿಲಸ್ ನೈಜರ್ ಮತ್ತು ಆಸ್ಪರ್ಜಿಲಸ್ ಫ್ಯೂಮಿಗೇಟ್‍ಗಳನ್ನೂ ಸಹ ಕಾಣುತ್ತಿದ್ದೇವೆ’’ ಎಂದರು.

ಈ ಕಪ್ಪು ಶಿಲೀಂಧ್ರ ರೋಗ ಹೊಂದಿರುವ ರೋಗಿಗಳು ಸಾಧ್ಯವಾದ ಸಂದರ್ಭಗಳಲ್ಲೆಲ್ಲಾ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಸೂಕ್ತ ಎಂಬುದನ್ನು ವಿಕ್ರಂ ಆಸ್ಪತ್ರೆಯ ವೈದ್ಯರು ಶಿಫಾರಸು ಮಾಡುತ್ತಾರೆ.

ಈ ಬಗ್ಗೆ ಮಾತನಾಡಿದ ಡಾ.ಶ್ರೀನಿವಾಸ್ ಕೆ. ಅವರು, “ತೆರೆದ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆಯಿಂದ ಅನೇಕ ಪ್ರಯೋಜನಗಳಿವೆ. ಇದು ಕನಿಷ್ಠ ಆಕ್ರಮಣಶೀಲವಾಗಿದೆ, ಅಂಗಗಳನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ರೋಗಕ್ಕೆ ಕಾರಣವಾದ ಸೋಂಕನ್ನು ಸಂಪೂರ್ಣವಾಗಿ ತೆರವುಗೊಳಿಸುವುದಕ್ಕೆ ಸಹಕಾರಿಯಾಗಿದೆ. ಇದು ಮುಖದ ಯಾವುದೇ ವಿರೂಪ ಅಥವಾ ಕ್ರಿಯಾತ್ಮಕ ಕೊರತೆಗೆ ಕಾರಣವಾಗುವುದಿಲ್ಲ’’ ಎಂದು ತಿಳಿಸಿದ್ದಾರೆ.