1705643692571 scaled

ಪಾವಗಡ : ಸರ್ಕಾರದ ಆಸ್ತಿಯ ಭಕ್ಷಕರಿಗೆ – ರಕ್ಷಕರಾದ ತಹಸಿಲ್ದಾರ್‌…!

DISTRICT NEWS Genaral STATE ತುಮಕೂರು
  • ಸರ್ಕಾರದ ಅಧಿಕಾರಿಗಳಿಗೆ ಬೇಡವಾದ ಸರ್ಕಾರದ ಆಸ್ತಿ.
  • ಸರ್ಕಾರದ ಸಂಬಳ ರಿಯಲ್‌ ಎಸ್ಟೇಟ್‌ ಮಾಫಿಯಾ ಗೆ ಕೆಲಸ…?
  • ಸರ್ಕಾರದ ಆಸ್ತಿಯ ಭಕ್ಷಕರಿಗೆ ರಕ್ಷಕರಾದ ತಹಸಿಲ್ದಾರ್‌

ಪಾವಗಡ ತಾಲ್ಲೂಕಿನ ವೈ ಎನ್‌ ಹೊಸಕೋಟೆ ಹೋಬಳಿ ಯ ಸರ್ವೇ ನಂಬರ್‌ 249 ಮತ್ತು 250 ರ  ಕೋಟೇಶ್ವರ ಸ್ವಾಮಿ ದೇವಸ್ಥಾನದ ಜಮೀನು ಕಾನೂನು ಬಾಹಿರವಾಗಿ ರಿಯೆಸ್ಟೇಟ್‌ ಮಾಫಿಯಾ ದ ಟಿ.ವಿ ವೆಂಕಟೇಶ್‌, ಎನ್‌ ಆರ್‌ ಅಶ್ವಥ್‌ ಕುಮಾರ್‌ ಮತ್ತು ಇತರರ ಹೆಸರಿಗೆ ಭೂದಾಖಲೆಗಳನ್ನು ಬದಲಾಯಿಸಿಕೊಂಡಿದ್ದಾರೆ.ಈ ಎರಡು ಸರ್ವೇ ನಂಬರ್‌ ಜಮೀನುಗಳ ಭೂದಾಖಲೆಗಳನ್ನು ದೇವಸ್ಥಾನದ ಹೆಸರಿಗೆ ಅಂದರೆ ಸರ್ಕಾರ ದ ಹೆಸರಿಗೆ ಬದಲಾವಣೆ ಮಾಡಲು 28-02-2024 ರಂದು ತಹಸಿಲ್ದಾರ್, 14-03-2024 ರಂದು ಉಪವಿಭಾಗಾಧಿಕಾರಿಗಳು ಮಧುಗಿರಿ ಮತ್ತು 07-03-2024 ರಂದು ಜಿಲ್ಲಾಧಿಕಾರಿಗಳಿಗೆ ಮನವಿ   ಮನವಿ ಮಾಡಿದರು ಪ್ರಯೋಜನವಾಗಿಲ್ಲ . ಭೂದಾಖಲೆಗಳನ್ನು ಬದಲಾವಣೆ ಮಾಡಬೇಕಾದ ತಹಸಿಲ್ದಾರ್‌ ಮತ್ತು ಉಪವಿಭಾಗಾಧಿಕಾರಿಗಳು ಅವರ ತಂಡ ಕಣ್ನುಮುಚ್ಚಿ ಕುಳಿತುಕೊಳ್ಳುವ ಮೂಲಕ ರಿಯಲ್‌ ಎಸ್ಟೇಟ್‌ ಮಾಫಿಯಾ ಸಹಕಾರಕ್ಕೆ ನಿಂತಿದೆ.IMG 20240110 103543

ಸರ್ಕಾರದ ಸಂಬಳದಿಂದ ಜೀವನ ಸಾಗಿಸುತ್ತಿರುವ ಈ ಅಧಿಕಾರಿಗಳಿಗೆ ಸರ್ಕಾರ ಆಸ್ತಿಗಳನ್ನು ಉಳಿಸಬೇಕು ಎಂಬ ಕನಿಷ್ಠ ಜವಬ್ದಾರಿ ಇಲ್ಲ.

ಸಂಪೂರ್ಣ ವಿವರ :

ವೈ ಎನ್‌ ಹೊಸಕೋಟೆ ಗ್ರಾಮ ವ್ಯಾಪ್ತಿಯಲ್ಲಿ ಬರು ಕೋಟೇಶ್ವರ ದೇವಸ್ಥಾನ ದೇವರ ಹೆಸರಿಗೆ  ಸೇರಿದ 249 ಮತ್ತು 250 ಜಮೀನು ಕಾನೂನು ಬಾಹಿರವಾಗಿ ಭೂಮಿ ಯ ಹಕ್ಕು ಇಲ್ಲದಿದ್ದರು ಕೆಲ ವ್ಯಕ್ತಿಗಳು ಉಪ ನೊಂದಾವಣೆ ಕಚೇರಿಯಲ್ಲಿ ಸೇಲ್‌ ಡೀಡ್‌ ( ಪರಭಾರೆಗಳನ್ನು) ಮಾಡಿಕೊಂಡಿದ್ದಾರೆ.

  • ಲೇಟ್‌ ಕರೆ ಹನುಮಂತರಾಯಪ್ಪ ಅವರು ಈ ಎರಡು ಸರ್ವೇ ನಂಬರ್‌ ನ ಭೂಮಿ ಹಕ್ಕು ಪಡೆಯಲು ( ಮ್ಯೂಟೇಷನ್) ‌ ಪಾವಗಡ ಲ್ಯಾಂಡ್‌ ಟ್ರಿಬ್ನಲ್‌ ಮುಂದೆ ಹೋದಾಗ 19-6-1979 ರಂದು ಅವರ ಮನವಿ ಯನ್ನು ತಿರಸ್ಕರಿಸುತ್ತಾರೆ.   ಕೇಸ್‌ ನಂ LRF- 9/ 1974-75 DATED 19-6-1979
  • ಇವರು 1983-1984 ರಲ್ಲಿ ಎರಡನೆ ಬಾರಿ ಪಾವಗಡ ಲ್ಯಾಂಡ್‌ ಟ್ರಿಬ್ನಲ್‌ ಮುಂದೆ ಮನವಿ ಮಾಡಿದಾಗಲು ತಿರಸ್ಕಾರವಾಗುತ್ತದೆ. ಕೇಸ್‌ ನಂಬರ್ INA NO 9/1983-84 ‌
  • ಪಾವಗಡ ಲ್ಯಾಂಡ್‌ ಟ್ರಿಬ್ನಲ್‌ ಆದೇಶ ವನ್ನು ಪ್ರಶ್ನಿಸಿ ಹೈಕೋರ್ಟ್‌ ನಲ್ಲಿ ಕೇಸ್‌ ಹಾಕುತ್ತಾರೆ. ಹೈಕೋರ್ಟ್‌ ಸಹ ಲ್ಯಾಂಡ್‌ ಟ್ರಿಬ್ನಲ್‌ ಆದೇಶ ವನ್ನು ಎತ್ತಿ ಹಿಡಿಯುತ್ತದೆ. ಟ್ರಿಬ್ನಲ್‌ ಆದೇಶ ಕ್ಕೆ ಮಧ್ಯ ಪ್ರವೇಶ ಮಾಡ ಬಯಸುವುದಿಲ್ಲ.ಕೇಸ್‌ ನಂಬರ್‌ W P 24311/1990. ತೀರ್ಪು 23-07-1993 ರಂದು ಪ್ರಕಟಿಸಿದೆ.
  • ಭೂಮಿಯ ಹಕ್ಕು‌ ಸಿಗದ ( ಮ್ಯೂಟೇಷನ್) ಕರೆ ಹನುಮಂತರಾಯಪ್ಪ  ಅವರಿಂದ ಎನ್‌ ಆರ್‌ ಅಶ್ವತ್ಥ ಕುಮಾರ್‌ ಮತ್ತು ಇತರರು ಈ ಎರಡು (249-250) ಸರ್ವೇ ನಂಬರ್‌ ಜಮೀನನ್ನು 11- 5- 1988 ಖರೀದಿ ಮಾಡಿದ್ದಾರೆ. ( ಸೇಲ್‌ ಡೀಡ್‌ ನಂ 252/1987-88)  ಇವರಿಗೆ ತಕ್ಷಣ ಮ್ಯೂಟಿಯೇಷನ್‌ ಮಾಡಿಕೊಟ್ಟಿದ್ದಾರೆ  ನಂ – MR- 7/1987/988
  • ವೈ ಎನ್‌ ಹೊಸಕೋಟೆ ಗ್ರಾಮಸ್ಥರಾದ ದಿವಂಗತ ಬಿ ಎಲ್‌ ಮಲ್ಲಯ್ಯ ಮತ್ತು ಹೆಚ್‌ ಎಸ್‌ ನಾಗಭೂಷಣ್‌ ಇವರು ಅಂದಿನ ಮಧುಗಿರಿ AC (ಉಪವಿಭಾಗಾಧಿಕಾರಿ) ಆಗಿದ್ದ ಸಂದೀಪ್‌ ದವೆ ಅವರಿಗೆ ಮೇಲ್ಕಂಡ ಎರಡು ಸರ್ವೆ ಸಂಬರ್‌ ನ ಅಕ್ರಮ ಪರಬಾರೆ ಬಗ್ಗೆ ದೂರು ನೀಡುತ್ತಾರೆ.
  • ದೂರಿನ ಅನ್ವಯ ತನಿಖೆ ನಡೆಸುವ AC ಅವರು 26-6-1991 ರಂದು ತೀರ್ಪು ನೀಡಿ 249 ಮತ್ತು 250 ಜಮೀನು ಕೋಟೇಶ್ವರ ದೇವರಿಗೆ ಸೇರಿದ್ದು. ಕಾನೂನು ಬಾಹಿರವಾಗಿ ಮ್ಯೂಟೇಶನ್‌ ಆಗಿದೆ ರದ್ದು ಪಡಿಸಿ ದೇವರ ಹೆಸರಿಗೆ ಬದಲಾಯಿಸಲು ಪಾವಗಡ ತಹಸೀಲ್ದಾರ್  ಅವರಿಗೆ ಅದೇಶಿಸಿದ್ದಾರೆ.  ಕೇಸ್‌ ಸಂಖ್ಯೆ. NO AGC. AC.CR(P) NO 35/1990-91.

190630064835416

  • ಮಧುಗಿರಿ ಉಪವಿಭಾಗ ಅಧಿಕಾರಿಗಳ ಆದೇಶದಂತೆ ಕೆಲ ವ್ಯಕ್ತಿಗಳ ಹೆಸರಿನ ಹಕ್ಕುನ್ನು ಕೋಟೇಶ್ವರ ದೇವರ ಹೆಸರಿಗೆ ಬದಲಾವಣೆಯಾಗುತ್ತದೆ. R NO 4/ 91-92 ( M T N 55/91-92 DATE 9-08-91)

 

  • ಮಧುಗಿರಿ ಉಪವಿಭಾಗಾದಿಕಾರಿಗಳ ಆದೇಶ ವನ್ನು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತಾರೆ    ( ಅಫೀಲ್‌ )  ಕೇಸ್‌ ನಂ- 10 /92-93. ಜಿಲ್ಲಾಧಿಕಾರಿಗಳು ಸಹ ಮಧುಗಿರಿ  AC ಅವರ ಆದೇಶವನ್ನು ಎತ್ತಿ ಹಿಡಿಯುತ್ತಾರೆ.

ಡೀಲ್‌ ಆದ ತಹಸಿಲ್ದಾರ್….?

ಕೇಸ್‌ ನಡೆಯುತ್ತಿರುವ ಸಂದರ್ಭದಲ್ಲಿ ಪ್ರತಿವಾದಿಯಾಗಿರುವ ಪಾವಗಡ ತಹಸಿಲ್ದಾರ್‌ ಕಾನೂನು ಬಾಹಿರವಾಗಿ ಭೂಮಿಯ ದಾಖಲೆಗಳನ್ನು ರಿಯಲ್‌ ಎಸ್ಟೇಟ್‌  ನ ಎನ್‌ ಆರ್‌ ಅಶ್ವಥ್‌ ಕುಮಾರ್‌, ಟಿ.ವಿ ವೆಂಕಟೇಶ್‌  ಇತರ ಸಹಚರರ ಹೆಸರಿಗೆ ಬದಲಾವಣೆ ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಕೇಸ್‌ ನಡಯುತ್ತಿರುವ ಸಮಯದಲ್ಲಿ ದಾಖಲೆ ಬದಲಾವಣೆ ಮಾಡಿದ್ದು ಕಾನೂನೂ ಬಾಹಿರ ಅಲ್ಲವಾ….?‌ ಮುಂದೆ Karnataka appellate tribunal ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ AC ಅವರ ಆದೇಶವನ್ನು ಎತ್ತಿಇಡಿಯಲಾಗಿದೆ.

  • ಜಿಲಾಧಿಕಾರಿಗಳ ಆದೇಶವನ್ನು Karnataka appellate tribunal  in appel No- 249/1999 ಇಲ್ಲಿಯೂ ಸಹ ಇವರ ಅಫೀಲ್‌ ಡಿಸ್‌ ಮಿಸ್‌ ಮಾಡಲಾಗುತ್ತದೆ. ಜಮೀನು ದೇವಸ್ಥಾನಕ್ಕೆ ಸೇರಿದೆ ನಂತರ ಹೈಕೋರ್ಟ್‌ ಗೆ ಹೋಗುತ್ತಾರೆ ಅಲ್ಲೂ ಇವರ ಪರ ಆದೇಶ ಬರುವುದಿಲ್ಲ.

ಹೈಕೋರ್ಟ್‌– ಕೇಸ್‌ ನಂ – W P- 9393/2001 & 9731/2001

ಈ ಕೇಸ್‌ ನಲ್ಲಿ ಹೈಕೋರ್ಟ್‌ ಭೂಮಿಯ ಹಕ್ಕು ಇವರಿಗೆ ಬರುವುದಿಲ್ಲ ಮತ್ತು ಇವರ ಬಳಿ ಜಮೀನು ಮಂಜೂರು ಹಾಗಿರುವ ಬಗ್ಗೆ ದಾಖಲೆ ಇಲ್ಲ( GRANT). ಆದ್ದರಿಂದ ಜಮೀನಿನ ಹಕ್ಕು ಬರುವುದಿಲ್ಲ ಎಂಬ ಅಂಶವನ್ನು ತಿಳಿಸಿದೆ. ಜಮೀನಿ ಹಕ್ಕನ್ನು ಸಿವಿಲ್‌ ಕೋರ್ಟ್‌ ನಲ್ಲಿ ಇತ್ಯರ್ಥ ಪಡಿಸಿ ಕೊಳ್ಳುವಂತೆ ತಿಳಿಸಿದೆ. ಅಂತಿಮವಾಗಿ ಈ ಎರಡು ಸರ್ವೇ ನಂಬರ್‌ ಜಮೀನು ಕೋಟೇಶ್ವರ ಸ್ವಾಮಿ ಸೇರುತ್ತದೆ ಎಂಬ ಅಂಶವನ್ನು ಸ್ಪಷ್ಟಪಡಿಸಿದೆ.

ಜಿಲ್ಲಾಧಿಕಾರಿಗಳ ಆದೇಶ ದಿಕ್ಕರಿಸಿದ ತಹಸಿಲ್ದಾರ್ :

1993-94 ರಲ್ಲಿ  ಮಧುಗಿರಿ ವಿಭಾಗಧಿಕಾರಿಗಳ ಮತ್ತು ಜಿಲ್ಲಾಧಿಕಾರಿಗಳ ಆದೇಶವನ್ನು ದಿಕ್ಕರಿಸಿ  ಪಾವಗಡ ತಹಸೀಲ್ದಾರ್. ಗ್ರಾಮ ಲೆಕ್ಕಿಗರು ಮತ್ತು ಕಂದಾಯ ಅಧಿಕ್ಷಕರು ( ಆರ್‌ ಐ )  ಅವರು ಕೋಟೇಶ್ವರ ದೇವಸ್ಥಾನ ದ ಹೆಸರಿನಲ್ಲಿದ್ದ ಜಮೀನನ್ನು  ಎನ್‌ ಅರ್‌ ಅಶ್ವತ್ಥ್‌ ಕುಮಾರ್‌ ಮತ್ತು ಇತರರ ಹೆಸರಿಗೆ ಹಕ್ಕು ಬದಲಾವಣೆ‌ ( ಮ್ಯೂಟೇಷನ್ ) ಮತ್ತು ಪಹಣಿ ಯನ್ನು ಬದಲಾವಣೆ ಮಾಡಿಕೊಟ್ಟಿದ್ದಾರೆ. ( ಆರ್‌ ಟಿ ಸಿ ಆರ್‌ 854/ 1993-94.Date-11-2-1994 )

ಆರ್‌ ಟಿ ಸಿ ಆರ್‌ 854/ 1993-94 ( Date-11-2-1994)  ಈ ಆದೇಶ ದಂತೆ ಹಕ್ಕು ಬದಲಾವಣೆ ಮಾಡಿದ ನಂತರ  ಜಿಲಾಧಿಕಾರಿಗಳ ನ್ಯಾಯಾಲಯ, Karnataka appellate tribunal  in appel No- 249/1999 ಇಲ್ಲಿ ಇವರ ಅಫೀಲ್‌ ನ್ನು ಡಿಸ್‌ ಮಿಸ್‌ ಮಾಡಲಾಗುತ್ತದೆ. ಮತ್ತು ಹೈಕೋರ್ಟ್‌  ಕೇಸ್‌ ನಂ – W P- 9393/2001 & 9731/2001  :  ಹೈಕೋರ್ಟ್‌ ಸಹ ಇವರಿಗೆ ಭೂಮಿ ಹಕ್ಕು ಬರುವುದಿಲ್ಲ ಎಂದು ಹೇಳಿದೆ. ಆದರೂ ಕೋಟೇಶ್ವರ ದೇವರ ಹೆಸರಿಗೆ ತಾಲ್ಲೂಕು ಆಡಳಿ ಇಲ್ಲಿಯವರೆಗೂ  ಭೂ ದಾಖಲೆಗಳನ್ನು ಸರ್ಕಾರದ( ದೇವಸ್ಥಾನದ) ಹೆಸರಿಗೆ ಬದಲಾವಣೆಮಾಡಿಲ್ಲ

ಸುಪ್ರಿಂಕೋರ್ಟ್‌ ತೀರ್ಪು : ಕೇಸ್‌ ನಂಬರ್ 4850 /2021‌ ರಲ್ಲಿ ಇನಾಮ್‌ ಜಮೀನು ಸಂಬಂದಿಸಿದಂತೆ ತೀರ್ಪುನೀಡಿದ್ದು ಅದರ ಪ್ರಕಾರ ನ್ಯಾಯಿಕ ವ್ಯಕ್ತಿಯಾಗಿ ದೇವರೇ ಭೂಮಿಯ ಮಾಲೀಕನಾಗಿರುವಾಗ ಭೂ ದಾಖಲೆಗಳಲ್ಲಿ ಪೂಜಾರಿ ಅಥವಾ ವ್ಯವಸ್ಥಾಪಕರ ಹೆಸರನ್ನು ಉಲ್ಲೇಖಿಸಲೇಬೇಕು ಎಂಬ ಅಗತ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ದೇವಸ್ಥಾನಕ್ಕೆ ಸೇರಿದ ಭೂಮಿಯ ಮಾಲೀಕತ್ವದ ವಿಚಾರಕ್ಕೆ ಬಂದಾಗ ಭೂ ದಾಖಲೆಗಳಲ್ಲಿ ದೇವಾಲಯದಲ್ಲಿ ಪ್ರತಿಷ್ಠಾಪನೆಗೊಂಡಿರುವ ದೇವರ ಹೆಸರು ಮಾತ್ರ ಉಲ್ಲೇಖಕ್ಕೆ ಅರ್ಹ, ಅರ್ಚಕರು ಪೂಜೆ ಮಾಡಲು ಮಾತ್ರ ಸೀಮಿತವಾಗಿರುತ್ತಾರೆ. ದೇವರ ಆಸ್ತಿಯನ್ನು ನಿರ್ವಹಣೆ ಮಾಡುವ ಖಾತರಿದಾರರಾಗಿ ಮಾತ್ರ ಪೂಜಾರಿ/ಅರ್ಚಕರು ಇರಲಿದ್ದಾರೆ ಎಂದು  ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.

ತೀರ್ಪಿನ ಪ್ರಮುಖ ಅಂಶಗಳು ;

  • ದೇವಸ್ಥಾನಕ್ಕೆ ಸಂಬಂಧಿಸಿದ ಜಾಗಗಳಿಗೆ ದೇವರೇ ಮಾಲೀಕನಾಗಿರುತ್ತಾನೆ
  • ದೇವಾಲಯದ ಆಸ್ತಿ ನಿರ್ವಹಣೆ ಮಾಡುವ ಕೆಲಸ ಮಾತ್ರ ಅರ್ಚಕನದ್ದು
  • ದೇವಾಲಯದ ಪೂಜಾರಿ ಅದರ ಬಾಡಿಗೆದಾರನೂ ಆಗಿರುವುದಿಲ್ಲ
  • ನಿರ್ವಹಣೆಯಲ್ಲಿ ವಿಫಲನಾದರೆ ಅರ್ಚಕನನ್ನು ಕೆಲಸದಿಂದ ತೆಗೆಯಬಹುದು

ಕೋಟೇಶ್ವರ ದೇವಸ್ಥಾನ ದ ಜಮೀನು ಭೂದಾಖಲೆಗಳ ಪ್ರಕಾರ ದೇವರ ಹೆಸರಿನಲ್ಲಿ ಇರುತ್ತದೆ. ಸುಪ್ರಿಂಮ್‌ ಕೋರ್ಟ್‌ ತೀರ್ಪಿನಂತೆ ದೇವರ ಹೆಸರಿಗೆ ಸೇರುತ್ತದೆ.

ಸರ್ಕಾರದ ಆಸ್ತಿ ಕಾಪಾಡಬೇಕಾದ  ಕಂದಾಯ ಇಲಾಖೆಯ ಅಧಿಕಾರಿಗಳು ರಿಯಲ್‌ ಎಸ್ಟೇಟ್‌ ನವರ ರಕ್ಷಕರಾಗಿದ್ದಾರೆ ಇಂತಹ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಮುಂದಿನ ದಿನಗಳಲ್ಲಿ ಕಂದಾಯ ಸಚಿವ ಕೈಷ್ಣಬೈರೇಗೌಡರು,ಲೋಕಾಯುಕ್ತ ನ್ಯಾಯ ಮೂರ್ತಿಗಳು, ಹೈಕೋರ್ಟ್‌ ಇಂತಹ ಅಧಿಕಾರಿಗಳ ವರ್ತನೆಗಳಿಗೆ ಯಾವ ಉತ್ತರ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ…!