Visit to Honble Minister BC Nagesh 1

ಪಾವಗಡ:ಶತಮಾನ ಕಂಡ ಶಾಲೆಗಳ ಜೀರ್ಣೋದ್ಧಾರ…!

Genaral STATE

ಪಾವಗಡ: ಶತಮಾನ ಕಂಡ ಶಾಲೆಯ ಜೀರ್ಣೋದ್ಧಾರ ಕಾರ್ಯ – ಶ್ರೀರಾಮಕೃಷ್ಣ ಸೇವಾಶ್ರಮ, ಪಾವಗಡ ರವರಿಂದ

ಶ್ರೀರಾಮಕೃಷ್ಣ ಸೇವಾಶ್ರಮ ಈಗಾಗಲೇ ಶತಮಾನವನ್ನು ಕಂಡ ಸರ್ಕಾರಿ ಮಾದರಿ ಹಿರಿಯ ಬಾಲಕರ ಪ್ರಾಥಮಿಕ ಪಾಠಶಾಲೆಯ ಕೊಠಡಿಗಳ ಜೀರ್ಣೋದ್ಧಾರ ಕಾರ್ಯಗಳನ್ನು ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದ್ದು ಶಾಲಾ ಮಕ್ಕಳಿಗೆ ಸುಭದ್ರವಾದ ನಾಲ್ಕು ಕೊಠಡಿಗಳು ಹಾಗೂ ಶುದ್ಧವಾದ ಕುಡಿಯುವ ನೀರು ದೊರಕುವಂತೆ ಪೂಜ್ಯ ಸ್ವಾಮಿ ಜಪಾನಂದಜೀ ರವರು ಆಶ್ರಮದ ವತಿಯಿಂದ ಏರ್ಪಾಡು ಮಾಡಿದ್ದಾರೆ.

ಶಾಲೆಗೆ ಸಮೀಪವಾಗಿ 800 ಅಡಿಗಳ ದೂರದಿಂದ ನೀರಿನ ವ್ಯವಸ್ಥೆಯನ್ನು ಶ್ರೀರಾಮಕೃಷ್ಣ ಸೇವಾಶ್ರಮದ ಮೂಲಕ ಪೈಪ್‍ಲೈನ್ ಅಳವಡಿಸಿ ನೀರಿನ ಸೌಲಭ್ಯ ದೊರಕುವಂತೆ ಮಾಡಲಾಗಿದೆ. ಸದರಿ ಶಾಲೆಯು ಒಂದು ಶುಚಿತ್ವದಿಂದ ಕೂಡಿರುವ ಹಾಗೂ ಅನುಕೂಲಕರವಾದ ಅಡುಗೆಮನೆಯನ್ನು ಹೊಂದಿಲ್ಲದೆ ವಿಪರೀತ ತೊಂದರೆಯನ್ನು ಅನುಭವಿಸುತ್ತಿರುವುದನ್ನು ಪದೇ ಪದೇ ಪೂಜ್ಯ ಸ್ವಾಮೀಜಿಯವರು ಗಮನಿಸಿರುತ್ತಾರೆ. ಈ ನಿಟ್ಟಿನಲ್ಲಿ ಒಂದು ನೂತನ ಅಡುಗೆ ಮನೆಯನ್ನು ಸಂಪೂರ್ಣವಾಗಿ ಆಧುನಿಕತೆಯ ಹಿನ್ನೆಲೆಯಲ್ಲಿ ನಿರ್ಮಿಸಲು ಮುಂದಾಗಿರುತ್ತಾರೆ.

ಶ್ರೀರಾಮಕೃಷ್ಣ ಸೇವಾಶ್ರಮದ ಸಂಯೋಜಕರು ಹಾಗೂ ಕಟ್ಟಡ ನಿರ್ಮಾಣ ಮಾಡುವವರೂ ಆದ ಶ್ರೀ ಲೋಕೇಶ್ ದೇವರಾಜ್ ರವರು ಈ ಯೋಜನೆಗಳನ್ನು ಅನುಷ್ಠಾನ ಮಾಡಿರುತ್ತಾರೆ. ಈಗ ನೂತನ ಅಡುಗೆಮನೆಯ ನಿರ್ಮಿಸುವಿಕೆ ಹಾಗೂ ಅದರ ಇತರ ವ್ಯವಸ್ಥೆಗಳಿಗೆ ಸನ್ಮಾನ್ಯ ಸಚಿವರಾದ ಶ್ರೀ ಬಿ.ಸಿ.ನಾಗೇಶ್ ರವರಿಗೆ ಈ ವಿಚಾರ ತಿಳಿದುಬಂದಿದ್ದು, ಇತ್ತೀಚೆಗೆ ಪೂಜ್ಯ ಸ್ವಾಮೀಜಿರವರನ್ನು ತಮ್ಮಲ್ಲಿಗೆ ಆಹ್ವಾನಿಸಿ ಎಲ್ಲ ವಿವರಗಳನ್ನು ಪಡೆದಿರುತ್ತಾರೆ.

ಮಾನ್ಯ ಸಚಿವರು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಪೂಜ್ಯ ಸ್ವಾಮಿ ಜಪಾನಂದಜೀ ರವರಿಗೆ ಭರವಸೆ ನೀಡಿದ್ದು ಅದರ ಪೂರ್ವಬಾವಿಯಾಗಿ ಆಶ್ರಮದ ಸಂಯೋಜಕರಾದ ಶ್ರೀ ಲೋಕೇಶ್ ದೇವರಾಜ್ ರವರು ಇಂದು ಮಾನ್ಯ ಸಚಿವರನ್ನು ಭೇಟಿಯಾಗಿ ಸ್ವಾಮೀಜಿಯವರ ಪರವಾಗಿ ಎಲ್ಲ ವಿಚಾರವನ್ನು ತಿಳಿಸಿರುತ್ತಾರೆ. ಸದ್ಯದಲ್ಲಿಯೇ ಅಡುಗೆಮನೆಯ ನಿರ್ಮಾಣ ಆರಂಭವಾಗುತ್ತಲಿದ್ದು, ಮುಂದಿನ ಶೈಕ್ಷಣಿಕ ವರ್ಷಕ್ಕೆ ಆಧುನಿಕತೆಯ ವ್ಯವಸ್ಥೆಯಲ್ಲಿ ಅಡುಗೆಮನೆಯನ್ನು ನಿರ್ಮಿಸಲು ಪೂಜ್ಯ ಸ್ವಾಮಿ ಜಪಾನಂದಜೀ ಕಾರ್ಯರೂಪಕ್ಕೆ ತರಲು ಅಣಿಯಾಗಿದ್ದಾರೆ.ಎಂದು ಆಶ್ರಮ ಮಾಧ್ಯಮ‌ ಪ್ರಕಟಣೆಯಲ್ಲಿ ತಿಳಿಸಿದೆ.