ಪ್ರಯಾಗ್ ರಾಜ್ ನ ಮಹಾಕುಂಭದಲ್ಲಿ ಪಾಲ್ಗೊಂಡು ಧನ್ಯನಾದೆ : ಪ್ರಧಾನಮಂತ್ರಿ
ಸಂಗಮದಲ್ಲಿನ ಸ್ನಾನವು ದೈವಿಕ ಸಂಪರ್ಕದ ಕ್ಷಣ : ಪ್ರಧಾನಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರಯಾಗ್ ರಾಜ್ ನ ಮಹಾಕುಂಭ ಮೇಳಕ್ಕೆ ಭೇಟಿ ನೀಡಿ ಅಲ್ಲಿನ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು.
ಎಕ್ಸ್ ನಲ್ಲಿ ಪ್ರತ್ಯೇಕ ಪೋಸ್ಟ್ ನಲ್ಲಿ ಅವರು ಹೀಗೆ ಬರೆದಿದ್ದಾರೆ:
“ಪ್ರಯಾಗ್ ರಾಜ್‌ನ ಮಹಾಕುಂಭದಲ್ಲಿ ಭಾಗಿಯಾಗಿ ಧನ್ಯನಾದೆ. ಸಂಗಮದಲ್ಲಿನ ಪುಣ್ಯ ಸ್ನಾನವು ದೈವಿಕ ಸಂಪರ್ಕದ ಕ್ಷಣವಾಗಿದೆ. ಈ ಪವಿತ್ರ ಸ್ನಾನ ಮಾಡಿ ಪುನೀತರಾದ ಕೋಟ್ಯಂತರ ಜನರಂತೆ, ನನ್ನಲ್ಲೂ ಸಹ ಭಕ್ತಿಭಾವ ತುಂಬಿದೆ.
ಗಂಗಾ ಮಾತೆಯು ಎಲ್ಲರಿಗೂ ಶಾಂತಿ, ಜ್ಞಾನ, ಉತ್ತಮ ಆರೋಗ್ಯ ಮತ್ತು ಸಾಮರಸ್ಯ ಭಾವವನ್ನು ದಯಪಾಲಿಸಲಿ.”
“ಪ್ರಯಾಗ್‌ರಾಜ್ ಮಹಾಕುಂಭದಲ್ಲಿ ಇಂದು ಪವಿತ್ರ ಸಂಗಮದಲ್ಲಿ ಸ್ನಾನ ಮಾಡಿದ ನಂತರ ಪೂಜೆ ಸಲ್ಲಿಸುವ ಮಹತ್ತರವಾದ ಸೌಭಾಗ್ಯ ನನಗೆ ದೊರೆಯಿತು. ಗಂಗಾಮಾತೆಯ ಆಶೀರ್ವಾದ ಪಡೆದು ಮನಸ್ಸಿಗೆ ಅಪಾರವಾದ ಶಾಂತಿ ಮತ್ತು ತೃಪ್ತಿ ಸಿಕ್ಕಿದೆ. ಮಾತೆ ಎಲ್ಲಾ ದೇಶವಾಸಿಗಳಿಗೆ ಸಂತೋಷ, ಸಮೃದ್ಧಿ, ಆರೋಗ್ಯ ಮತ್ತು ಕಲ್ಯಾಣವನ್ನು ಉಂಟುಮಾಡಲಿ ಎಂದು ಪ್ರಾರ್ಥಿಸುತ್ತೇನೆ. ಹರ್ ಹರ್ ಗಂಗೆ!”
“ಪ್ರಯಾಗ್‌ರಾಜ್‌ನ ದಿವ್ಯ-ಮಹಾಕುಂಭದಲ್ಲಿ ನಂಬಿಕೆ, ಭಕ್ತಿ ಮತ್ತು ಆಧ್ಯಾತ್ಮಿಕತೆಯ ಸಂಗಮವು ಎಲ್ಲರನ್ನೂ ಆವರಿಸಿದೆ. ಪವಿತ್ರ ಕುಂಭದಲ್ಲಿ ಪುಣ್ಯ ಸ್ನಾನದ ಕೆಲವು ಚಿತ್ರಗಳು….”