IMG 20250206 WA0007 scaled

ಪಾವಗಡ : ಪಿ ಎಲ್ ಡಿ ಬ್ಯಾಂಕ್ ನ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ರ ಅವಿರೋಧ ಆಯ್ಕೆ….!

DISTRICT NEWS ತುಮಕೂರು

ಪಿ ಎಲ್ ಡಿ ಬ್ಯಾಂಕ್ ನ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ರ ಅವಿರೋಧ ಆಯ್ಕೆ.

ಪಾವಗಡ : ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು.

ಸಿ.ವೆಂಕಟೇಶ್ ಚುನಾವಣೆ ಅಧಿಕಾರಿ ಯಾಗಿ ಕಾರ್ಯ ನಿರ್ವಹಿಸಿದರು.ಅಧ್ಯಕ್ಷ ಸ್ಥಾನಕ್ಕೆ ಎನ್.ಶೇಷಗಿರಿ,ಉಪಾಧ್ಯಕ್ಷ ಸ್ಥಾನಕ್ಕೆ ಅನಿತಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದು, ಇತರೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ.

ಕಡಮಲಕುಂಟೆ ಗ್ರಾಮದ ಎನ್.ಶೇಷಗಿರಿ ಅದ್ಯಕ್ಷರಾಗಿ ಮತ್ತು ಮಾರಮ್ಮನಹಳ್ಳಿ ಗ್ರಾಮದ ಅನಿತಮ್ಮ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಘೋಷಿಸಿದರು.

ಪಿ.ಎಲ್‌.ಡಿ ಬ್ಯಾಂಕ್ ಒಟ್ಟು ಹದಿನಾಲ್ಕು ಮಂದಿ ನಿರ್ದೇಶಕರನ್ನ ಹೊಂದಿದ್ದು.ಕಸಬಾ ಹೋಬಳಿ ಸಾಲ ಪಡೆದ ಕ್ಷೇತ್ರದಿಂದ ಶೇಷಗಿರಿ, ಸೀತಾರಾಮು, ತಿಪ್ಪಣ್ಣ ಮತ್ತು ನಾಗರಾಜನಾಯಕ,

ವೈ.ಎನ್.ಹೊಸಕೋಟೆ ಸಾಲಪಡೆದವರ ಕ್ಷೇತ್ರದಿಂದ ನಾಗರಾಜು, ವಿಶ್ವನಾಥ, ಅನಿತಮ್ಮ, ನಿಡಗಲ್ ಸಾಲಪಡೆದವರ ಕ್ಷೇತ್ರದಿಂದ ರೇವಣ್ಣ ಸಿದ್ದೇಶ್ವರ, ಚಂದ್ರಶೇಖರ್, ಲಕ್ಷ್ಮಿ,
ನಾಗಲಮಡಿಕೆ ಸಾಲ ಪಡೆದವರ ಕ್ಷೇತ್ರದಿಂದ ವಾಲ್ಯನಾಯ್ಕ, ಪೆದ್ದಾರೆಡ್ಡಿ, ಗೋವಿಂದಪ್ಪ, ಮತ್ತು ನರೇಶ್ ರವರುಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದರು

ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಶೇಷಗಿರಿ ಮಾತನಾಡಿ, ಎರಡನೇ ಬಾರಿ ನನಗೆ ಪಿ ಎಲ್ ಡಿ ಬ್ಯಾಂಕ್ ನ ಅಧ್ಯಕ್ಷನಾಗಲು ಸಹಕರಿಸಿದ ಮಾಜಿ ಸಚಿವ ವೆಂಕಟರಮಣಪ್ಪ ಮತ್ತು ಶಾಸಕ ಎಚ್ ವಿ ವೆಂಕಟೇಶ್ ರವರಿಗೆ ಧನ್ಯವಾದ ತಿಳಿಸಿದರು.

ನನಗೆ ನೀಡಿರುವ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುವ ಎಂದುಜನ ಸೇವೆಗೆ ಒತ್ತು ನೀಡಲಾಗುವುದು ಎಂದರು.ಸರ್ಕಾರದ ಸವಲತ್ತನ್ನು ಅರ್ಹರಗೆ ತಲುಪಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ನರಸಿಂಹಯ್ಯ, ಕೆ ಪಿ ಸಿ ಸಿ ಸದಸ್ಯರಾದ ಕೆ ಎಸ್ ಪಾಪಣ್ಣ,
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೇಶ್ ಬಾಬು,ಪುರಸಭೆ ಅಧ್ಯಕ್ಷರಾದ ಪಿ. ಹೆಚ್ ರಾಜೇಶ್, ಪಿ ಎಲ್ ಡಿ ಬ್ಯಾಂಕ್ ನ ನಿರ್ದೇಶಕರು ಸೇರಿ ಇನ್ನಿತರೇ ಮುಖಂಡರು ಇದ್ದರು..

Leave a Reply

Your email address will not be published. Required fields are marked *