ಚಿಕ್ಕಬಳ್ಳಾಪುರ ಕಸಬಾ ಹೋಬಳಿಯ ಕತ್ತರಿಗುಪ್ಪೆ ಗ್ರಾಮದ ರೈತ ಎರಡು ಏಕರೆಯಲ್ಲಿ ಬೆಳೆದ ಹೂವಿನ ಬೆಳೆ ಲಾಕ್ ಡೌನ್ ನಿಂದಾಗಿ ಮಾರಾಟವಾಗದೆ ಮನನೊಂದು ಶನಿವಾರ ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೂಂಡಿದ್ದಾರೆ.
ಚಿಕ್ಕಬಳ್ಳಾಪುರ ಮೇ ೧೬ : – ತಾಲೂಕಿನ ಕಸಬಾ ಹೋಬಳಿಯ ಕತ್ತರಿಗುಪ್ಪೆ ಗ್ರಾಮದ ರೈತ (೫೫) ಶನಿವಾರ ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೂಂಡಿದ್ದಾರೆ. ಎರಡು ಏಕರೆಯಲ್ಲಿ ಬೆಳೆದ ಹೂವಿನ ಬೆಳೆ ಲಾಕ್ ಡೌನ್ ನಿಂದಾಗಿ ಮಾರಾಟವಾಗದೆ .ಸಾಲದ ಭಾದೆಯಿಂದ ಮನನೂಂದು ರಾಮಪ್ಪ ಆತ್ಮಹತ್ಯೆ ಮಾಡಿಕೂಂಡಿದ್ದರೆ ಎಂದು ಅವರ ಪತ್ನಿ ನಾರಾಯಣಮ್ಮ ಗ್ರಾಮಾಂತರ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.ತಮ್ಮ ಮೂರು ಎಕರೆ ಜಮೀನಿನ ಪೈಕಿ ರಾಮಪ್ಪ ಎರಡು ಎಕರೆಯಲ್ಲಿ ೧ಲಕ್ಷ ಖರ್ಚು ಮಾಡಿ ಹೂವು ಬೆಳೆದಿದ್ದರು .ಹೂ ಮಾರಾಟವಾಗದೆ ನೊಂದಿದ್ದರು ಎಂದು ದೂರಿನಲ್ಲಿ ತಿಳಿಸಿದರು.ಶನಿವಾರ ಬೆಳಿಗ್ಗೆ 6ರ ಸುಮಾರಿಗೆ ಜಮೀನಿಗೆ ಹೋಗಿ ಮನೆಗೆ ವಾಪಾಸಾಗಿ ವಿಷ ಸೇವಿಸಿದ ರೈತ ರಾಮಪ್ಪರವರನ್ನ ಚಿಕಿತ್ಸೆಗಾಗಿ ಜಿಲ್ಲಾ ಆಸ್ವತ್ರೆ ದಾಖಲಿಸಲಾಗಿತ್ತು.ಬೆಳಿಗ್ಗೆ 11:25ರ ವೇಳೆಗೆ ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟರು.ರೈತ ರಾಮಪ್ಪರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ …