ವಿಜೃಂಭಣೆಯಿಂದ ನಡೆದ ಬೆಳ್ಳಿ ಅಡ್ಡಪಲ್ಲಕಿ ಉತ್ಸವ.
ಪಾವಗಡ : ಜೇಷ್ಠದೇವಿ ಮತ್ತು ಶನೇಶ್ವರ ಸ್ವಾಮಿಯ ಬೆಳ್ಳಿ ಅಡ್ಡ ಪಲ್ಲಕ್ಕಿ ಉತ್ಸವ ಶನಿವಾರ ಸಂಜೆ ಪಟ್ಟಣದಲ್ಲಿ ಅದ್ದೂರಿಯಾಗಿ ನಡೆಯಿತು.
ಪಲ್ಲಕ್ಕಿಯನ್ನು ವಿವಿಧ ಬಗೆಯ ಹೂಗಳಿಂದ ವಿದ್ಯುತ್ ದೀಪಾಲಂಕಾರದಿಂದ ಸಿಂಗಾರ ಗೊಳಿಸಲಾಯಿತು.ಬಾಣ, ಬಿರಸು, ಪಟಾಕಿ ಸಿಡಿಮದ್ದು ಜನರನ್ನು ಆಕರ್ಷಿಸಿದವು.ಸಾವಿರಾರು ಜನರು ಬೆಳ್ಳಿ ಅಡ್ಡ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.