15001

ಪಾವಗಡ:ಕರ್ಫ್ಯೂ ಹಿನ್ನೆಲೆ ಮನೆಗೆ ಸೀಮಿತವಾದ ಸಂಕ್ರಾಂತಿ…

DISTRICT NEWS ತುಮಕೂರು

ಕರ್ಫ್ಯೂ ಹಿನ್ನೆಲೆ ಮನೆಗೆ ಸೀಮಿತವಾದ ಸಂಕ್ರಾಂತಿ……………….

ಪಾವಗಡ:  ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಬೇಕಾದ ಸಂಕ್ರಾಂತಿ ಹಬ್ಬವು ಕೋವಿಡ್ ನಿಂದಾಗಿ    ಶನಿವಾರ ಸರಳವಾಗಿ ಆಚರಿಸಲಾಯಿತು.

 ಈ ಬಾರಿ ಅಕಾಲ ವೃಷ್ಟಿಯಿಂದಾಗಿ   ಗ್ರಾಮೀಣ ಹಬ್ಬವಾದ ಸುಗ್ಗಿ ಹಬ್ಬ ಕಳೆಗುಂದಿತ್ತು. ತಾಲ್ಲೂಕಿನ ಪ್ರಮುಖ ಬೆಳೆ ಶೇಂಗಾ ಕೈಕೊಟ್ಟಿರುವುದರಿಂದ ರೈತರ ಕಣಗಳು ಬರಿದಾಗಿ ಕಂಡು ಬಂದವು.

ಆದರೆ ತಾಲ್ಲೂಕಿನ ವದನಕಲ್ಲು ಸೇರಿದಂತೆ ಹಲವೆಡೆ ಮನೆಗಳಲ್ಲಿ ಸಂಪ್ರದಾಯದಂತೆ ಮಣ್ಣಿನ  ಮಡಿಕೆಗಳಲ್ಲಿ ಅವರೆಕಾಯಿ, ಶೆಂಗಾ, ಸಜ್ಜೆ, ನವಣೆ, ಕಬ್ಬು, ಕುಂಬಳ, ಅಡಿಕೆ ಇತ್ಯಾದಿ ಬೆಳೆಗಳನ್ನು ಇರಿಸಿ ಪೂಜಿಸಲಾಯಿತು.

  ಸಂಕ್ರಾಂತಿಯ ದಿನದ ವಿಶೇಷ ಅಡುಗೆಗಳಾದ ಬೇಯಿಸಿದ ಅವರೆ, ಗೆಣಸುಗಳನ್ನು ಎಳ್ಳು ಬೆಲ್ಲ, ಕಬ್ಬಿನ ತುಂಡುಗಳ  ಜೊತೆಗೆ `ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ’ ಎಂಬ ವಾಕ್ಯದೊಂದಿಗೆ  ವಿನಿಮಯ ಮಾಡಿಕೊಳ್ಳಲಾಯಿತು.

15 0002

  ಪುಟಾಣಿ ಮಕ್ಕಳಿರುವ ಮನೆಗಳಲ್ಲಿ ಮಕ್ಕಳಿಗೆ ಹೊಸ ಬಟ್ಟೆ ಧರಿಸಿ ಎಳ್ಳು, ಬೆಲ್ಲ, ಬಾರೆ ಕಾಯಿ, ಕಬ್ಬು, ಧಾನ್ಯಗಳನ್ನು ಬೀರಲಾಯಿತು. ನಂತರ ಮಕ್ಕಳಿಗೆ ದೃಷ್ಟಿ ತೆಗೆದು ಆರತಿ ಬೆಳಗಿ ಹಿರಿಯರು ಹರಸಿದರು.

ಪಾವಗಡ ಪಟ್ಟಣದಲ್ಲಿ ಮನೆಗೆ ಸೀಮಿತವಾದ ಹಬ್ಬ:  ಕರೋನ ದಿಂದ ಕರ್ಫ್ಯೂ ಹಿನ್ನೆಲೆ ದೇಗುಲಗಳ ಬಾಗಿಲು ಮುಚ್ಚಿದ್ದರಿಂದ ಜನರು ಮನೆಗಳಲ್ಲಿ ಸಂಪ್ರದಾಯದ ಪ್ರಕಾರ ಪೂಜೆ ಮಾಡಿದರು, ಸಂಕ್ರಾಂತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಟ್ಟಣದ ಶನೈಶ್ಚರ ದೇಗುಲಕ್ಕೆ ಭಕ್ತಾದಿಗಳು ಆಗಮಿಸುತ್ತಿದ್ದರು. ಆದರೆ ಕರ್ಫ್ಯೂ ಹಿನ್ನೆಲೆ ಬಾಗಿಲು ಮುಚ್ಚಿದ್ದರಿಂದ ಬೆರಳೆಣಿಕೆಯಷ್ಟು ಭಕ್ತರು ದೇಗುಲದ ಬಾಗಿಲಿಗೆ ಪೂಜೆ ಸಲ್ಲಿಸಿದರು.

ಫೋಟೊ 1 ಪಾವಗಡ ತಾಲ್ಲೂಕು ವದನಕಲ್ಲು ಗ್ರಾಮದ ಮಂಜುನಾಥಶಾಸ್ತ್ರಿ ಅವರ ಮನೆಯಲ್ಲಿ ಶನಿವಾರ ಸುಗ್ಗಿ ಹಬ್ಬ ಸಂಕ್ರಾಂತಿ  ಪ್ರಯುಕ್ತ ದವಸ, ಧಾನ್ಯಗಳನ್ನು ಮಣ್ಣಿನ ಮಡಿಕೆಗಳಲ್ಲಿರಿಸಿ ಪೂಜಿಸಲಾಯಿತು.

ವರದಿ: ಶ್ರೀನಿವಾಸುಲು ಎ