IMG 20220706 WA0001

ಪಾವಗಡ: ಕನ್ನಡ ಭವನಕ್ಕೆ ಉಚಿತವಾಗಿ ನಿವೇಶನ…!

DISTRICT NEWS ತುಮಕೂರು

ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನಕ್ಕೆ ಉಚಿತವಾಗಿ ನಿವೇಶನ . ಶಾಸಕ ವೆಂಕಟರಮಣಪ್ಪ

ಪಾವಗಡ…… ಗಡಿ ಭಾಗವಾದ ಪಾವಗಡ ತಾಲೂಕಿನಲ್ಲಿ ಕನ್ನಡವನ್ನು ಪ್ರೋತ್ಸಾಹ ಮಾಡಲು, ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ, ಕನ್ನಡ ಸಾಹಿತ್ಯ ಪರಿಷತ್ ನ ತಾಲೂಕು ಘಟಕದ ವತಿಯಿಂದ ಮಂಗಳವಾರ 10:30ಕ್ಕೆ 2021- 22 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡದ ಭಾಷಾ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶನ ನೀಡಿದ ಕನ್ನಡ ಶಿಕ್ಷಕರಿಗೆ ಮತ್ತು ಶೇಕಡ 100% ಫಲಿತಾಂಶ ಪಡೆದ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಎಸ್ ಎಸ್ ಕೆ ಸಮುದಾಯ ಭವನದಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಶಾಸಕ ವೆಂಕಟರಮಣಪ್ಪ ಮಾತನಾಡಿದರು.. ಈ ಬಾರಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಉತ್ತಮ ಫಲಿತಾಂಶ ಬಂದಿರುವುದು ಶ್ಲಾಘನೀಯವಾದ ಕಾರ್ಯ ಎಂದರು. ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಶೈಕ್ಷಣಿಕ ಪೂರಕವಾದ ಕಾರ್ಯಕ್ರಮಗಳನ್ನು ನಡೆಸಲಿ ಎಂದು ತಿಳಿಸಿದರು. ಶಿಕ್ಷಕರು ಉತ್ತಮ ರೀತಿಯಲ್ಲಿ ಪಾಠ ಪ್ರವಚನಗಳನ್ನು ಮಾಡಿದಾಗ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎಂದು ತಿಳಿಸಿದರು. ಪಾವಗಡ ತಾಲೂಕಿನ ಎಸ್ ಎಸ್ಎಲ್ ಸಿ ಫಲಿತಾಂಶ ಉತ್ತಮವಾಗಿ ಬಂದಿರುವುದಕ್ಕೆ ಶಿಕ್ಷಣ ಇಲಾಖೆಯನ್ನು ಅಭಿನಂದಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ ಎಸ್ ಸಿದ್ದಲಿಂಗಪ್ಪನವರು ಮಾತನಾಡಿ ಕನ್ನಡ ನಮ್ಮ ಜೀವ ಬಾಷೆ ಕನ್ನಡವನ್ನುಳಿದೆಮಗೆ ಅನ್ಯ ಜೀವನವಿಲ್ಲ. ಗಡಿನಾಡ ಪಾವಗಡ ತೆಲುಗು ಪ್ರಭಾವವಿದ್ದರೂ ಸಹ ಅತಿ ಹೆಚ್ಚು ವಿದ್ಯಾರ್ಥಿಗಳು ಕನ್ನಡದಲ್ಲಿ 125ಕ್ಕೆ 125 ಅಂಕಗಳಿಸಿರುವುದು ಶುಭ ಪರಿಣಾಮ ಎಂದು ತಿಳಿಸಿದರು. 2000 ವರ್ಷಗಳ ಇತಿಹಾಸ ಇರುವ ಪ್ರಾಚೀನ ಭಾಷೆ ಕನ್ನಡ ಎಂದರು. ಎಲ್ಲರ ಮನೆ ಮನಗಳಲ್ಲಿ ಕನ್ನಡ ವಾತಾವರಣ ಉಂಟಾಗಲಿ ಎಂದು ಆಶಿಸಿದರು. ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಅನೇಕ ಕನ್ನಡಪರ ಕಾರ್ಯಕ್ರಮಗಳು ನೆಲ ಜಲ ಸಂಸ್ಕೃತಿ ಯಂತಹ ಅನೇಕ ವಿಚಾರಗಳನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ ಎಂದರು. ಪಾವಗಡದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮ ಹೋಬಳಿ ಮತ್ತು ತಾಲೂಕು ಸಮ್ಮೇಳನಗಳನ್ನು ಸಂಘಟಿಸಲಾಗುವುದು ಎಂದರು. ಪಾವಗಡದಲ್ಲಿ ಕಾರ್ಯಕ್ರಮ ನಡೆಸಿದಲ್ಲಿ ದಾನಿಗಳಿಗೆ ಕೊರತೆ ಇಲ್ಲ ಎಂದು ತಿಳಿಸಿದರು.. ಎಸ್ ಎಸ್ ಕೆ ಸಂಘದ ಅಧ್ಯಕ್ಷರಾದ ಕೆ ವಿ ಶ್ರೀನಿವಾಸರವರು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇಂತಹ ಕಾರ್ಯಕ್ರಮಗಳನ್ನು ನಡೆಸುವುದು ಅತ್ಯುತ್ತಮ ಎಂದರು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಯುವ ಯಾವುದೇ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಎಸ್ ಎಸ್ ಕೆ ಸಂಘ ಸದಾ ಬೆಂಬಲವನ್ನು ನೀಡುತ್ತದೆ ಎಂದು ತಿಳಿಸಿದರು ಉತ್ತಮ ಶಿಕ್ಷಣ ನೀಡದಲ್ಲಿ ಪಾವಗಡ ತಾಲೂಕಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡುತ್ತಾರೆ ಎನ್ನುವುದಕ್ಕೆ ಇಂ ದಿನ ಸಮಾರಂಭದಲ್ಲಿ ಭಾಗಿಯಾದ ವಿದ್ಯಾರ್ಥಿಗಳೇ ಸಾಕ್ಷಿ ಎಂದು ತಿಳಿಸಿದರು
.. ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ಧಾನಿಗಳಾದ ನಾಗರಾಜ್ ವಿ ಮಾಕಂ ಶ್ರೀನಿವಾಸ ಜೂಯಲರ್ಸ್ ತುಮಕೂರು ರವರು ಮಾತನಾಡಿ ಪಾವಗಡ ತಾಲೂಕಿನಲ್ಲಿ ಸೇವೆ ಮಾಡಲು ಸದಾ ಸಿದ್ಧ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಎಲ್ಲರಿಗೂ ಕೊಡುಗೆ ನೀಡಲು ನಮ್ಮ ತಾತನವರು ಮತ್ತು ತಂದೆಯವರೇ ಸ್ಪೂರ್ತಿ ಎಂದು ತಿಳಿಸಿದರು. ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಿದಲ್ಲಿ ಪ್ರತಿವರ್ಷವೂ ಕೊಡುಗೆ ನೀಡಲು ಸಿದ್ದ ಎಂದು ತಿಳಿಸಿದರು. ಪಾವಗಡ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎನ್ ಅಶ್ವಥ್ ನಾರಾಯಣ್ ರವರು ಮಾತನಾಡಿ ಪಾವಗಡ ತಾಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಬಂದಿರುವುದಕ್ಕೆ ಇಲ್ಲಿನ ಶಿಕ್ಷಕರು , ಮುಖ್ಯ ಶಿಕ್ಷಕರು ಹಾಗೂ ಇಲಾಖೆಯ ಎಲ್ಲರೂ ಸ್ಪಂದಿಸಿ ಸರಿಯಾಗಿ ಕೆಲಸ ಮಾಡಿರುವುದು ನಿದರ್ಶನವಾಗಿದೆ ಎಂದು ತಿಳಿಸಿದರು ಮುಂದಿನ ದಿನಗಳಲ್ಲಿಯೂ ಸಹ ಉತ್ತಮ ಶಿಕ್ಷಣ ವಿದ್ಯಾರ್ಥಿಗಳಿಗೆ ನೀಡುವ ನಿಟ್ಟಿನಲ್ಲಿ ಪಾವಗಡ ತಾಲೂಕು ಸದಾ ಮುಂದೆ ಇರುತ್ತದೆ ಎಂದು ತಿಳಿಸಿದರು. ಪಾವಗಡ ತಾಲೂಕು ಪ್ರಥಮ ಸ್ಥಾನ ಬರಲು ಶ್ರಮಿಸಿದ ಇಲಾಖೆಯ ಎಲ್ಲರನ್ನೂ ಮುಖ್ಯಶಿಕ್ಷಕರು ವಿಷಯ ಶಿಕ್ಷಕರನ್ನು ಮತ್ತು ಸಿಬ್ಬಂದಿ ವರ್ಗದವರು. ಎಲ್ಲಾ ಪೋಷಕರನ್ನು ಎಲ್ಲರನ್ನು ಅಭಿನಂದಿಸಿದರು . ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಟ್ಟಾ ನರಸಿಂಹಮೂರ್ತಿ ರವರು ಮಾತನಾಡಿ ತಾಲೂಕಿನ ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ವಿಚಾರಗಳನ್ನು ಎಲ್ಲಾ ಹಳ್ಳಿಗಳಿಗೆ ಶಾಲಾ-ಕಾಲೇಜುಗಳಿಗೆ ತಲುಪಿಸುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಮಾಡುತ್ತಿದೆ ಎಂದು ತಿಳಿಸಿದರು ಕನ್ನಡ ರಾಜ್ಯೋತ್ಸವದ ಒಳಗಾಗಿ ಕನ್ನಡ ಭವನಕ್ಕೆ ನಿವೇಶನ ನೀಡುವಂತೆ ಮಾನ್ಯ ಶಾಸಕರನ್ನು ಕೋರಿದರು. ಕಾರ್ಯಕ್ರಮವನ್ನು ಸಂಘಟಿಸಲು ನೆರವಾದ ಎಲ್ಲ ದಾನಿಗಳನ್ನು ಸ್ಮರಿಸಿದರು. ತಾಲೂಕಿನಲ್ಲಿ ಕನ್ನಡಮಯ ವಾತಾವರಣವನ್ನು ಉಂಟು ಮಾಡಲು ಸಾಹಿತ್ಯ ಪರಿಷತ್ತು ಸದಾ ಶ್ರಮಿಸುತ್ತದೆ ಎಂದು ತಿಳಿಸಿದರು. ಜಿಲ್ಲಾ ಕನ್ನಡ ಪರಿಷತ್ ಸಂಚಾಲಕರಾದ ಮಹದೇವಪ್ಪ ರವರು ಉಪಸ್ಥಿತರಿದ್ದರು. ಕಾರ್ಯದರ್ಶಿಗಳಾದ ಕೆ ರಂಗಪ್ಪ ಸ್ವಾಗತಿಸಿದರು,ಕಾರ್ಯದರ್ಶಿಗಳಾದ ಐಎ ನಾರಾಯಣಪ್ಪ ನಿರೂಪಣೆ ಮಾಡಿದರು, ಎಂ ಎಸ್ ವಿಶ್ವನಾಥ್ ರವರು ಪ್ರಾಸ್ತಾವಿಕ ಭಾಷಣ ಮಾಡಿದರು ಕೋಶಾಧ್ಯಕ್ಷರಾದ ಕೆ ಎಂ ಪ್ರಭಾಕರ್ ಕಾರ್ಯಕಾರಿ ಸಮಿತಿ ಸದಸ್ಯರಾದ ಜಿ ಪಿ ಪ್ರಮೋದ್ ಕುಮಾರ್, ಓ ದನಂಜಯ,ಈ ಜಯರಾಮಪ್ಪ ಶಿವಣ್ಣ ರಾಮಚಂದ್ರಪ್ಪ, ಬ್ಯಾಡ ನೂರು ಚೆನ್ನಬಸಣ್ಣ, ಶ್ರೀಮತಿ ಅಂಬುಜ ರಾಮನಾಥ್, ಕೆ ವೆಂಕಟೇಶಲು, ಹೊಸಕೋಟೆ ಹೋಬಳಿ ಘಟಕದ ಅಧ್ಯಕ್ಷ ಹೊ ಮ. ನಾಗರಾಜ್. ಜ್ಞಾನಭೋದಿನಿ ಶಾಲೆಯ ಬಾಲಸುಬ್ರಮಣ್ಯಂ,ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ 125ಕ್ಕೆ 125 ಅಂಕಗಳನ್ನು ಗಳಿಸಿದ 24 ಜನ ವಿದ್ಯಾರ್ಥಿಗಳನ್ನು ಅವರಿಗೆ ಮಾರ್ಗದರ್ಶನ ನೀಡಿದ ಕನ್ನಡ ಭಾಷಾ ಶಿಕ್ಷಕರನ್ನು ಶೇಕಡ 100 ಫಲಿತಾಂಶ ಬಂದಿರುವ 50 ಪ್ರೌಢಶಾಲೆಗಳ ಮುಖ್ಯ ಶಿಕ್ಷಕರನ್ನು ಹತ್ತು ಜನ ಪಿಯುಸಿಯ ಕಲಾ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಸಾಧಕರನ್ನು ಸನ್ಮಾನಿಸಲಾಯಿತು

ವರದಿ: ಶ್ರೀನಿವಾಸಲು ಎ