ರಿಚ್ಮಂಡ್ ರಸ್ತೆಯ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್‍ನಲ್ಲಿ ಗರ್ಭಾಶಯ ಫೈಬ್ರಾಯ್ಡ್‍ಗೆ ಇನ್‍ವೇಸಿವ್ ಇಂಟರ್‍ವೆನ್ಷನಲ್ ರೇಡಿಯಾಲಜಿ ಚಿಕಿತ್ಸೆ ಆರಂಭ
• ಗರ್ಭಾಶಯದ ಫೈಬ್ರಾಯ್ಡ್ ಎಂಬೋಲೈಸೇಶನ್, ಗರ್ಭಾಶಯದ ಫೈಬ್ರಾಯ್ಡ್‍ಗಳಿಗೆ ಚಿಕಿತ್ಸೆ ನೀಡಲು ಮತ್ತು ಗರ್ಭಕಂಠವನ್ನು ತಪ್ಪಿಸಲು ಇಂಟರ್‍ವೆನ್ಷನಲ್ ರೇಡಿಯಾಲಜಿ ತಂತ್ರವನ್ನು ಬಳಸಬಹುದು
• ಇಂಟರ್‍ವೆನ್ಷನಲ್ ರೇಡಿಯಾಲಜಿಯನ್ನು ಸಹ ಉಬ್ಬಿರುವ ರಕ್ತನಾಳ, ಬೆನಿನ್ ಪ್ರಾಸ್ಟೇಟ್ ಹಿಗ್ಗುವಿಕೆ, ಲಿವರ್ ಕ್ಯಾನ್ಸರ್ ಮತ್ತು ಥೈರಾಯ್ಡ್ ಗಂಟುಗಳಂತಹ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ
ಬೆಂಗಳೂರು, ಜುಲೈ 6, 2022: ದೃಢವಾದ ಆರೈಕೆ ಮತ್ತು ಅತ್ಯಾಧುನಿಕ ಚಿಕಿತ್ಸೆಗೆ ಹೆಸರುವಾಸಿಯಾಗಿರುವ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್ ಇದೀಗ ವಿವಿಧ ವೈದ್ಯಕೀಯ ಪರಿಸ್ಥಿತಿಗಳ ಕನಿಷ್ಠ ಆಕ್ರಮಣಕಾರಿ ಮತ್ತು ನಿಖರವಾದ ಚಿಕಿತ್ಸೆಗಾಗಿ ಇಂಟರ್‍ವೆನ್ಷನಲ್ ರೇಡಿಯಾಲಜಿ (ಐಆರ್) ಕಾರ್ಯವಿಧಾನಗಳನ್ನು ನೀಡುತ್ತಿದೆ. ಆಸ್ಪತ್ರೆಯು ನಗರದಲ್ಲಿ ತಡೆಗಟ್ಟಬಹುದಾದ ಗರ್ಭಕಂಠಗಳ ಹೆಚ್ಚಳವನ್ನು ಎತ್ತಿ ತೋರಿಸಿದೆ ಮತ್ತು ಗರ್ಭಕಂಠ ಹಾಗೂ ಮಯೋಮೆಕ್ಟಮಿಯಂತಹ ಶಸ್ತ್ರಚಿಕಿತ್ಸೆ ಇಲ್ಲದ ಗರ್ಭಾಶಯ ಫೈಬ್ರಾಯ್ಡ್‍ಗಳಿಗೆ ಚಿಕಿತ್ಸೆ ನೀಡಲು ಐಆರ್ ಅನ್ನು ಹಲವಾರು ಸಂದರ್ಭದಲ್ಲಿ ಬಳಸಬಹುದಾಗಿದೆ ಎಂದು ತಿಳಿಸಿದೆ.
ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲಿರುವ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್‍ನ ಕನ್ಸಲ್ಟೆಂಟ್, ಹೆಡ್ ಇಂಟರ್‍ವೆನ್ಷನಲ್ ರೇಡಿಯಾಲಜಿಸ್ಟ್ ಡಾ.ರೋಹಿತ್ ಮಧುಕರ್ ಅವರು ಮಾತನಾಡಿ, ಗರ್ಭಾಶಯದಲ್ಲಿರುವ ಫೈಬ್ರಾಯ್ಡ್ ಎಂಬೋಲೈಸೇಶನ್ (ಯುಎಫ್‍ಇ) ಗರ್ಭಕಂಠದ ಮೇಲೆ ಅನೇಕ ಪ್ರಯೋಜನಗಳನ್ನು ಹೊಂದಿದೆ. ಮುಖ್ಯವಾಗಿ ಗರ್ಭಾಶಯವನ್ನು ((#sಚಿveಣheuಣeಡಿus) ಹಾಗೂ ಅದರ ಸಾಮಾನ್ಯ ಕಾರ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಡೆಯುವ ಪ್ರಕ್ರಿಯೆಯು ಕೇವಲ ಒಂದು ರಾತ್ರಿಯಲ್ಲಿ ಆಸ್ಪತ್ರೆಯಲ್ಲಿ ಉಳಿಯುವುದು, ವೇಗವಾಗಿ ಚೇತರಿಸಿಕೊಳ್ಳುವುದು, ಯಾವುದೇ ಹೊಲಿಗೆಗಳು ಇಲ್ಲದಿರುವುದು, ಕನಿಷ್ಠ ತೊಡಕುಗಳ ಜೊತೆಗೆ ಗರ್ಭಾಶಯದ ಫೈಬ್ರಾಯ್ಡ್‍ಗಳಿಂದ ಉಂಟಾಗುವ ರೋಗಲಕ್ಷಣಗಳನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಇದು ಹೊಸ, ವೇಗವಾದ, ಸುರಕ್ಷಿತ ಮತ್ತು ಸುಲಭವಾದ ಮಾರ್ಗವಾಗಿದೆ. ಅಲ್ಲದೇ, ಗರ್ಭಕಂಠದ ಕಾರ್ಯವಿಧಾನದ ರೀತಿಯಲ್ಲಿ ಇದು ಒಬ್ಬರ ಜೀವನಕ್ಕೆ ಯಾವುದೇ ಅಡ್ಡಿಯನ್ನು ಉಂಟು ಮಾಡುವುದಿಲ್ಲ. ಈ ಹಿಂದೆ ಅನೇಕ ವೈದ್ಯರು ಫೈಬ್ರಾಯ್ಡ್‍ಗಳಿಗೆ ಗರ್ಭಕಂಠ/ಮಯೋಮೆಕ್ಟಮಿಯನ್ನು ಶಿಫಾರಸು ಮಾಡುತ್ತಿದ್ದರು. ಆದರೆ, ಶಸ್ತ್ರಚಿಕಿತ್ಸೆಯು ಇನ್ನು ಮುಂದೆ ಲಭ್ಯವಿರುವ ಚಿಕಿತ್ಸೆಯಾಗಿ ಉಳಿದಿಲ್ಲ. ಕೆಲವು ರೋಗಿಗಳಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದರೂ, ಇತರರು ಕಡಿಮೆ ಆಕ್ರಮಣಕಾರಿ ವಿಧಾನಗಳನ್ನು ಬಳಸಿಕೊಂಡು ತಮ್ಮ ಫೈಬ್ರಾಯ್ಡ್‍ಗಳಿಗೆ ಚಿಕಿತ್ಸೆ ನೀಡಬಹುದಾಗಿದೆ’’ ಎಂದು ತಿಳಿಸಿದರು. ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನವಾಗಿರುತ್ತಾನೆ. ಆದರೆ, ರೋಗಲಕ್ಷಣಗಳಲ್ಲಿ ಗಮನಾರ್ಹವಾದ ಸುಧಾರಣೆಯನ್ನು ಕಾಣಲು ಇದು ಸಾಮಾನ್ಯವಾಗಿ ಮೂರರಿಂದ ಆರು ವಾರಗಳನ್ನು ತೆಗೆದುಕೊಳ್ಳಲುತ್ತದೆ. ಫೈಬ್ರಾಯ್ಡ್‍ಗಳು ಕಾಲ ಕ್ರಮೇಣ ಕುಗ್ಗುತ್ತಲೇ ಇರುತ್ತವೆ. ರೋಗಲಕ್ಷಣಗಳು ಸಹ ಉತ್ತಮ ಸ್ಥಿತಿಗೆ ತಲುಪುತ್ತವೆ. ಯುಎಫ್‍ಇ ಗರ್ಭಾಶಯದಲ್ಲಿನ ಎಲ್ಲಾ ಫೈಬ್ರಾಯ್ಡ್‍ಗಳನ್ನು ಏಕ ಕಾಲದಲ್ಲಿ ಸಂಪೂರ್ಣವಾಗಿ ಚಿಕಿತ್ಸೆ ಮೂಲಕ ಸರಿಪಡಿಸಬಹುದಾಗಿದೆ ಮತ್ತು ಒಂದರಿಂದ ಮೂರು ತಿಂಗಳಲ್ಲಿ ಸಾಮಾನ್ಯ ಋತುಚಕ್ರವನ್ನು ಮರಳಿ ಪಡೆಯಬಹುದಾಗಿದೆ. ಗರ್ಭಾಶಯದ ಫೈಬ್ರಾಯ್ಡ್‍ಗಳು ಪ್ರಾಥಮಿಕವಾಗಿ 30 ರಿಂದ 50 ವರ್ಷ ವಯಸ್ಸಿನ ಮಹಿಳೆಯ ಗರ್ಭಾಶಯ ಅಥವಾ ಗರ್ಭಾಶಯದ ಮೇಲೆ ಬೆಳೆಯುವ ಕ್ಯಾನ್ಸರ್ ರಹಿತವಾದ ಅಥವಾ ಹಾನಿಕಾರಕವಲ್ಲದ ಗೆಡ್ಡೆಗಳಾಗಿವೆ. ಶೇ.80ರಷ್ಟು ಮಹಿಳೆಯರು ತಮ್ಮ ಜೀವನದಲ್ಲಿ ಒಂದು ಹಂತದಲ್ಲಿ ಗರ್ಭಾಶಯದ ಫೈಬ್ರಾಯ್ಡ್‍ಗಳನ್ನು ಹೊಂದುತ್ತಾರೆ ಎಂಬುದನ್ನು ಅಧ್ಯಯನಗಳು ಅಂದಾಜಿಸಿವೆ. ಅನೇಕ ಮಹಿಳೆಯರು ಯಾವುದೇ ರೋಗಲಕ್ಷಣಗಳನ್ನು ಅನುಭವಿಸದ ಕಾರಣ ಗರ್ಭಾಶಯದ ಫೈಬ್ರಾಯ್ಡ್‍ಗಳ ಸಂಭವನೀಯತೆಯು ಇನ್ನೂ ಹೆಚ್ಚಾಗಿರುತ್ತದೆ. ಭಾರೀ ಮುಟ್ಟಿನ ರಕ್ತಸ್ರಾವ, ರಕ್ತಹೀನತೆ, ಆಗಾಗ್ಗೆ ರಕ್ತಸ್ರಾವ ಉಂಟಾಗುವುದು, ನೋವಿನ ಸಂಭೋಗ, ಹೆಚ್ಚಿದ ಮೂತ್ರ ವಿಸರ್ಜನೆ, ಸೊಂಟ ಅಥವಾ ಕೆಳ ಬೆನ್ನಿನಲ್ಲಿ ಕಾಣಿಸಿಕೊಳ್ಳುವ ನೋವು, ಊತ ಅಥವಾ ಹೊಟ್ಟೆಯ ಹಿಗ್ಗುವಿಕೆ ಗರ್ಭಾಶಯದ ಫೈಬ್ರಾಯ್ಡ್‍ಗಳ ಕೆಲವು ಲಕ್ಷಣಗಳಾಗಿವೆ. ಒಂದು ಅಥವಾ ಹೆಚ್ಚಿನ ರೋಗಲಕ್ಷಣಗಳು ನಿರಂತರವಾಗಿದ್ದರೆ, ಅಂತಹ ಮಹಿಳೆಯರು ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು. ಅಲ್ಟ್ರಾಸೌಂಡ್ ಪೆಲ್ವಿಸ್ ಗರ್ಭಾಶಯದ ಫೈಬ್ರಾಯ್ಡ್‍ಗಳಿಗೆ ಉತ್ತಮ ಸ್ಕ್ರೀನಿಂಗ್ ಸಾಧನವಾಗಿದೆ. ಇಂಟರ್‍ವೆನ್ಷನಲ್ ರೇಡಿಯಾಲಜಿಸ್ಟ್(ಐಆರ್) ಸಾಧ್ಯವಾದಷ್ಟು ಕಡಿಮೆ ಇನ್‍ಟ್ರೂಸಿವ್ ತಂತ್ರಗಳನ್ನು ಬಳಸುತ್ತಾರೆ. ವಿಶಿಷ್ಟ ಕಾರ್ಯಾಚರಣೆಗಳಿಗೆ ವ್ಯತಿರಿಕ್ತವಾಗಿ ಈ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಲು ಮೈಕ್ರೋ ಪಂಕ್ಚರ್ ಸೂಜಿಗಳು, ಸಣ್ಣ ಲೀನಿಯರ್ ಟ್ಯೂಬ್‍ಗಳು(ಕ್ಯಾಥೆಟರ್ಸ್) ಮತ್ತು ಮೈಕ್ರೋ ವೈರ್‍ಗಳಂತಹ ಕನಿಷ್ಠ ಆಕ್ರಮಣಕಾರಿ ಸಾಧನಗಳೊಂದಿಗೆ ದೇಹಕ್ಕೆ
ಪಿನ್ಹೋಲ್ ಪ್ರವೇಶ’’ ಮಾಡುವ ಅಗತ್ಯವಿರುತ್ತದೆ. ಸೂಕ್ತವಾದ ಪ್ರದೇಶ ಮತ್ತು ಚಿಕಿತ್ಸೆಯನ್ನು ಈ ವಿಧಾನದಲ್ಲಿ ಬಳಸಲಾಗುತ್ತದೆ. ಈ ಮೂಲಕ ಈ ಎಲ್ಲಾ ವಿಧಾನಗಳನ್ನು ರೋಗಿ-ಸ್ನೇಹಿಯಾಗಿ ಮಾಡಲಾಗುತ್ತದೆ. ಹೀಗಾಗಿ ಇದು ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತದೆ. ಅಂದರೆ, ಕ್ಷಿಪ್ರಗತಿಯಲ್ಲಿ ಚೇತರಿಕೆ, ಕನಿಷ್ಠ ಪ್ರಮಾಣದ ನೋವು, ಕೇವಲ ಒಂದು ದಿನ ಆರೈಕೆ ಮತ್ತು ಗಾಯದ ಗುರುತು ಕಡಿಮೆ ಇರುವುದರಿಂದ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಬಹುದಾಗಿದೆ. ಇದಲ್ಲದೇ, ಇದು ಸೋಂಕು ಮತ್ತು ಅನಾರೋಗ್ಯದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
ಯುಎಫ್‍ಇ ಯ ಹೊರತಾಗಿ ಇಂಟರ್‍ವೆನ್ಷನಲ್ ರೇಡಿಯಾಲಜಿಸ್ಟ್‍ಗಳು ಉಬ್ಬಿರುವ ರಕ್ತನಾಳಗಳು, ಬೆನಿನ್ ಪ್ರಾಸ್ಟೇಟ್ ಹಿಗ್ಗುವಿಕೆ, ಥೈರಾಯ್ಡ್ ಗಂಟುಗಳು, ಸೆರೆಬ್ರಲ್ ಸ್ಟ್ರೋಕ್, ಲಿವರ್ ಸಿರೋಸಿಸ್/ಟ2ಯೂಮರ್‍ಗಳು ಮತ್ತು ಇನ್ನಿತರೆ ಪರಿಸ್ಥಿತಿಗಳಂತಹ ವಿವಿಧ ಸಾಮಾನ್ಯ ಆರೋಗ್ಯ ಕಾಳಜಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಇದು ಲೇಸರ್, ಮೈಕ್ರೋವೇರ್/ಕ್ರೈಯೋ ಅಬ್ಲೇಶನ್‍ನಂತಹ ಸುಧಾರಿತ ತಂತ್ರಜ್ಞಾನದ ಬಳಕೆಯನ್ನು ಒಳಗೊಂಡಿರುತ್ತದೆ. ಇದು ಜೀವವನ್ನು ಉಳಿಸುವ ಬ್ಲೀಡರ್ ಎಂಬೋಲೈಸೇಶನ್, ಆಂಜಿಯೋಪ್ಲಾಸ್ಟಿ ಮತ್ತು ಸ್ಟೆಂಟಿಂಗ್, ಥ್ರಂಬೆಕ್ಟಮಿ ಮತ್ತು ಥ್ರಂಬೋಲಿಸಿಸ್ ನಂತಹ ಕಟ್ಟಿಂಗ್ ಹೆಡ್ಜ್ ತಂತ್ರಜ್ಞಾನವಾಗಿದೆ.
ಬೆಂಗಳೂರಿನ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ ಕ್ಲಸ್ಟರ್ ಸಿಒಒ ಬಿಜು ನಾಯರ್ ಅವರು ಮಾತನಾಡಿ, “ನಮ್ಮ ರಿಚ್ಮಂಡ್ ರಸ್ತೆ ಆಸ್ಪತ್ರೆಯಲ್ಲಿ ಇಂಟರ್‍ವೆನ್ಷನಲ್ ರೇಡಿಯಾಲಜಿ ಸೇವೆಗಳನ್ನು ಆರಂಭಿಸಲು ನಮಗೆ ಸಂತೋಷವೆನಿಸುತ್ತಿದೆ. ಈ ಚಿಕಿತ್ಸೆಯನ್ನು ಆಸ್ಪತ್ರೆಯ ನೆರೆಹೊರೆಯಲ್ಲಿರುವ ರೋಗಿಗಳಿಗೆ ಲಭ್ಯವಾಗುವಂತೆ ಮಾಡುತ್ತಿದ್ದೇವೆ. ಈ ಸೌಲಭ್ಯವನ್ನು ಒದಗಿಸುತ್ತಿರುವ ಐಆರ್‍ಗೆ ನಾನು ಅಭಿನಂದನೆ ಸಲ್ಲಿಸುತ್ತಿದ್ದೇನೆ. ಗರ್ಭಾಶಯವನ್ನು ಉಳಿಸುವ ಮತ್ತು ಗರ್ಭಾಶಯದ ಫೈಬ್ರಾಯ್ಡ್‍ಗಳನ್ನು ಹೊಂದಿರುವ ಮಹಿಳೆಯರ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಚಿಕಿತ್ಸಾ ಆಯ್ಕೆಗಳ ಬಗ್ಗೆ ಜಾಗೃತಿಯನ್ನು ಉಂಟು ಮಾಡುವಲ್ಲಿ ನಮ್ಮ ತಂಡ ನಿರಂತರ ಪ್ರಯತ್ನಗಳನ್ನು ನಡೆಸುತ್ತಿದೆ’’ ಎಂದು ಹೇಳಿದರು.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ