IMG 20230904 WA0020

ಕಾರ್ನಿಯಾ ಕಸಿ ಪ್ರಕ್ರಿಯೆಯಲ್ಲಿ ಕಣ್ಣಿನ ದಾನಿಗಳದ್ದೇ ಕೊರತೆ….!

BUSINESS

ಕಾರ್ನಿಯಾ ಕಸಿ ಪ್ರಕ್ರಿಯೆಯಲ್ಲಿ ಕಣ್ಣಿನ ದಾನಿಗಳದ್ದೇ ಕೊರತೆ: ನೇತ್ರ ತಜ್ಞರು

ಬೆಂಗಳೂರು, ಸೆಪ್ಟೆಂಬರ್ 4, 2023: ಭಾರತದಲ್ಲಿ ಕಾರ್ನಿಯಾ ಕಸಿ ಪ್ರಕ್ರಿಯೆಯಲ್ಲಿ ಇರುವ ತೊಂದರೆಯ ಬಗ್ಗೆ ನೇತ್ರಶಾಸ್ತ್ರಜ್ಞರು ಗಮನ ಸೆಳೆದಿದ್ದಾರೆ. ಕಸಿ ಪ್ರಕ್ರಿಯೆಯ ಯಶಸ್ವಿಯಾಗುವುದಕ್ಕೆ ಕಣ್ಣು ದಾನಿಗಳು ಅತ್ಯಂತ ಅಗತ್ಯವಾಗಿದ್ದು, ಇವರ ಕೊರತೆಯು ಒಂದು ಸವಾಲಾಗಿ ಪರಿಣಮಿಸಿದೆ. ಇದರಿಂದ ಕಣ್ಣಿನ ಆರೋಗ್ಯ ಸೇವೆ ವಲಯದಲ್ಲಿ ದೊಡ್ಡ ಕೊರತೆ ಎದುರಾಗಿದೆ. ಭಾರತದಲ್ಲಿ ಕಣ್ಣಿನ ಆಸ್ಪತ್ರೆಯ ಪ್ರಮುಖ ಜಾಲವಾಗಿರುವ ಡಾ. ಅಗರ್‍ವಾಲ್ಸ್ ಐ ಹಾಸ್ಪಿಟಲ್ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಜಾಗೃತಿ ವಾಕಥಾನ್‍ನ ಸಂದರ್ಭದಲ್ಲಿ ಪರಿಣಿತರು ಈ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಚಾಲ್ತಿಯಲ್ಲಿರುವ ರಾಷ್ಟ್ರೀಯ ಕಣ್ಣು ದಾನ ಪಾಕ್ಷಿಕ ಅಭಿಯಾನದ ಭಾಗವಾಗಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ತಮ್ಮ ಕಣ್ಣುಗಳನ್ನು ದಾನ ಮಾಡಲು ಪ್ರಮಾಣ ಮಾಡುವಂತೆ ಮತ್ತು ದೃಷ್ಟಿ ಸಮಸ್ಯೆಯಿಂದ ಬಳಲುತ್ತಿರುವವರ ಜೀವನದಲ್ಲಿ ಸುಧಾರಣೆಯನ್ನು ತರುವುದಕ್ಕೆ ಪೆÇ್ರೀತ್ಸಾಹಿಸುವುದು ಈ ಅಭಿಯಾನದ ಧ್ಯೇಯವಾಗಿದೆ.
ಐಪಿಎಸ್ ಸ್ಕೂಲ್ (ಇಂದಿರಾ ಪ್ರಿಯದರ್ಶಿನಿ ಸ್ಕೂಲ್) ನ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ನೂರಾರು ಜನರು ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್‍ನ ಬನ್ನೇರಘಟ್ಟ ಶಾಖೆಯಲ್ಲಿ ವಾಕಥಾನ್‍ಗಾಗಿ ಸೇರಿದ್ದರು. ಕಣ್ಣಿನ ದಾನವನ್ನು ಪೆÇ್ರೀತ್ಸಾಹಿಸುವ ಪ್ಲಕಾರ್ಡ್‍ಗಳನ್ನು ಹಿಡಿದು, ವಾಕಥಾನ್‍ನಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕದ ಆರೋಗ್ಯ ಸಚಿವ ಶ್ರೀ ದಿನೇಶ್ ಗುಂಡೂರಾವ್ ನೆರವೇರಿಸಿದರು. ಕಣ್ಣಿನ ಆರೋಗ್ಯ ಸುಧಾರಣೆ ಮಾಡುವ ನಿಟ್ಟಿನಲ್ಲಿ ವಿಶಿಷ್ಟವಾದ ಒಗ್ಗಟ್ಟು ಮತ್ತು ಜವಾಬ್ದಾರಿ ಹಂಚಿಕೆಯನ್ನು ಪ್ರದರ್ಶಿಸಲಾಯಿತು.
ಈ ಅತ್ಯಂತ ಮುಖ್ಯ ಉಪಕ್ರಮದ ಬಗ್ಗೆ ಮಾತನಾಡಿದ ಕರ್ನಾಟಕದ ಆರೋಗ್ಯ ಸಚಿವ ಶ್ರೀ ದಿನೇಶ್ ಗುಂಡೂರಾವ್ “ಕಣ್ಣಿನ ದಾನದ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಇದರ ತುರ್ತು ಅಗತ್ಯವನ್ನು ತಿಳಿಸುವುದು ಮತ್ತು ಕಣ್ಣಿನ ದೃಷ್ಟಿ ಸಮಸ್ಯೆ ಸುಧಾರಣೆಗಾಗಿ ಇನ್ನಷ್ಟು ಜನರು ದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಪೆÇ್ರೀತ್ಸಾಹಿಸುವುದಕ್ಕೆ ಇಂತಹ ಕಾರ್ಯಕ್ರಮಗಳ ಆಯೋಜನೆ ಅತ್ಯಂತ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸಮುದಾಯದಲ್ಲಿ ಅರಿವು ಮೂಡಿಸುವುದಕ್ಕೆ ಅತ್ಯಂತ ಮಹತ್ವದ ಹೆಜ್ಜೆಯನ್ನು ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ ತೆಗೆದುಕೊಂಡಿದೆ. ನಮ್ಮ ಕಣ್ಣುಗಳನ್ನು ದಾನ ಮಾಡುವ ಪ್ರಮಾಣ ಮಾಡುವ ಮೂಲಕ ಅಗತ್ಯವಿರುವವರ ದೃಷ್ಟಿಗೆ ಮರು ಜೀವ ನೀಡಬಹುದು ಮತ್ತು ಅವರ ಜೀವನಕ್ಕೆ ಬೆಳಕಾಗಬಹುದು.”
ಕಣ್ಣಿನ ದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಲಯವಾರು ಚಟುವಟಿಕೆಗಳನ್ನು ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ ಸಕ್ರಿಯವಾಗಿ ನಡೆಸುತ್ತಿದೆ. ಸೈಕಲ್‍ಥಾನ್, ವಾಕಥಾನ್, ಮಾನವ ಸರಪಳಿ ನಿರ್ಮಾಣ ಮತ್ತು ಮಾಹಿತಿ ನೀಡುವ ಚರ್ಚೆಗಳನ್ನು ಬೆಂಗಳೂರು, ಮೈಸೂರು, ಬೆಳಗಾವಿ, ದಾವಣಗೆರೆ ಮತ್ತು ಹುಬ್ಬಳ್ಳಿ ಧಾರವಾಡ ವಲಯಗಳಲ್ಲಿ ನಡೆಸುತ್ತಿದೆ. ಇದರಲ್ಲಿ ಜನಪ್ರಿಯ ವ್ಯಕ್ತಿಗಳು, ಗಣ್ಯರು ಭಾಗವಹಿಸಿ ಈ ಉದ್ದೇಶದ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಾರೆ.
ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ ಬೆಂಗಳೂರು ಪ್ರಾದೇಶಿಕ ಕ್ಲಿನಿಕಲ್ ಸೇವೆಗಳ ಮುಖ್ಯಸ್ಥ ಡಾ. ರವಿ ದೊರೈರಾಜ್ ಹೇಳುವಂತೆ “ಅಂಧತ್ವ ಮತ್ತು ದೃಷ್ಟಿ ಸಮಸ್ಯೆಗಳಾದ ಕ್ಯಾಟರ್ಯಾಕ್ಟ್, ರಿಫ್ರಾಕ್ಟಿವ್ ದೋಷಗಳು, ರೆಟಿನಾ ಸಮಸ್ಯೆಗಳು, ಕಾರ್ನಿಯಾ ರೋಗಗಳು ಮತ್ತು ಗ್ಲಾಕೋಮಾದಂತಹ ಸಮಸ್ಯೆಯಿಂದಾಗಿ ಕಣ್ಣಿನ ದಾನ ಅಗತ್ಯವಾಗಿದೆ. ಕಾರ್ನಿಯಾ ಅಂಧತ್ವ ಹೊಂದಿರುವವರಿಗೆ ಕಾರ್ನಿಯಾ ಕಸಿ ಮಾಡಿ ಅವರ ದೃಷ್ಟಿ ಸಮಸ್ಯೆ ನಿವಾರಣೆ ಮಾಡುವುದು ಒಂದು ಭರವಸೆದಾಯಕ ಪರಿಹಾರವಾಗಿದೆ. ಆದರೆ, ಕಣ್ಣಿನ ದೃಷ್ಟಿ ದಾನ ಮಾಡುವವರ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಯಾಗಿರುವುದರಿಂದಾಗಿ, ಪ್ರತಿ ವರ್ಷ ಕಾರ್ನಿಯಾ ಕಸಿ ಸಂಖ್ಯೆಯೂ ಕಡಿಮೆಯಾಗಿದೆ ಎಂದಿದ್ದಾರೆ.
ಕಣ್ಣಿನ ದಾನವನ್ನು ಪೆÇ್ರೀತ್ಸಾಹಿಸುವ ಮೂಲಕ ಈ ಕೊರತೆಯನ್ನು ನಿವಾರಣೆ ಮಾಡುವ ಗುರಿಯನ್ನು ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ ಹಾಕಿಕೊಂಡಿದೆ. ಆದರೆ, ಈ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಬೇಕಿದೆ. ತಿಳಿವಳಿಕೆ ಕೊರತೆ, ಸಾಮಾಜಿಕ ಕಾರ್ಯಕರ್ತರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯಂತಹ ಅಗತ್ಯ ಪಾಲುದಾರರು ತೊಡಗಿಸಿಕೊಳ್ಳುವಿಕೆ ಕೊರತೆ ಮತ್ತು ನಿಯಂತ್ರಕ ನಿಯಮಾವಳಿಗಳು ಇದನ್ನು ಇನ್ನಷ್ಟು ಸವಾಲಾಗಿಸಿವೆ. ಧಾರ್ಮಿಕ ನಂಬಿಕೆಗಳು ಮತ್ತು ತಪ್ಪು ಕಲ್ಪನೆಗಳು ಕೂಡಾ ದಾನ ಪ್ರಮಾಣವನ್ನು ಕಡಿಮೆ ಮಾಡುವುದಕ್ಕೆ ಪ್ರಭಾವ ಬೀರುತ್ತಿವೆ.

ಕಣ್ಣಿನ ದಾನದ ಬಗ್ಗೆ ಮತ್ತು ಅದನ್ನು ಸರಿಯಾದ ರೀತಿಯಲ್ಲಿ ಮಾಡುವ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸುವುದಕ್ಕೆ ಆಸ್ಪತ್ರೆ ಪ್ರಾಮುಖ್ಯತೆ ನೀಡುತ್ತಿದೆ. ಶಿಕ್ಷಣ ಪಠ್ಯಕ್ರಮದಲ್ಲಿ ಕಣ್ಣಿನ ದಾನಕ್ಕೆ ಸಂಬಂಧಿಸಿದ ಜಾಗೃತಿಯನ್ನು ಸೇರಿಸಿಕೊಳ್ಳುವುದು, ಆರೋಗ್ಯಸೇವೆ ಕಾರ್ಯಕರ್ತರ ಜೊತೆಗೆ ಸಹಭಾಗಿತ್ವ ಸಾಧಿಸುವುದು, ಅರೆವೈದ್ಯಕೀಯ ಸಿಬ್ಬಂದಿ, ಸಾಮಾಜಿಕ ಕಾರ್ಯಕರ್ತರು ಮತ್ತು ವಿವಿಧ ಸಾಮಾಜಿಕ ವಿಭಾಗಗಳನ್ನು ತೊಡಗಿಸಿಕೊಳ್ಳುವುದು ಈ ನಿಟ್ಟಿನಲ್ಲಿ ಧನಾತ್ಮಕ ಬದಲಾವಣೆಯನ್ನು ತರುವುದಕ್ಕೆ ಅಗತ್ಯದ್ದಾಗಿದೆ.
2022-2023 ರ ಅವಧಿಯಲ್ಲಿ ಡಾ. ಅಗರ್ವಾಲ್ಸ್ ಐ ಬ್ಯಾಂಕ್‍ನಲ್ಲಿ ಕರ್ನಾಟಕದಲ್ಲಿ ಒಟ್ಟು 5521 ಕಣ್ಣುಗಳನ್ನು ದಾನ ಮಾಡಲಾಗಿದೆ. ಈ ಪೈಕಿ 1821 ಕಾರ್ನಿಯಾಗಳನ್ನು ಯಶಸ್ವಿಯಾಗಿ ಕಸಿಗೆ ಬಳಸಲಾಗಿದೆ. ಆದರೆ, ವಿವಿಧ ಕಾರಣಗಳಿಗಾಗಿ ಸಂಗ್ರಹಿಸಿದ ಒಟ್ಟು ಕಾರ್ನಿಯಾಗಳ ಪೈಕಿ ಅರ್ಧದಷ್ಟನ್ನು ಮಾತ್ರ ಕಸಿಗೆ ಬಳಸಬಹುದಾಗಿತ್ತು. ಜಾಗೃತಿ ಮೂಡಿಸುವುದು ಮತ್ತು ಮಿಥ್ಯಗಳನ್ನು ನಿವಾರರಣೆ ಮಾಡುವ ಮೂಲಕ ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ ದಾನದ ಸಂಖ್ಯೆಯನ್ನು ಹೆಚ್ಚಿಸುವುದು ಮತ್ತು ದಾನ ಮಾಡಿದ ಕಾರ್ನಿಯಾಗಳ ಯಶಸ್ವಿ ಬಳಕೆಯನ್ನು ಹೆಚ್ಚಿಸುವ ಗುರಿಯನ್ನು ಹಾಕಿಕೊಂಡಿದೆ ಎಂದು ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ ಕ್ಲಿನಿಕಲ್ ಸೇವೆಗಳ ಪ್ರಾದೇಶಿಕ ಮುಖ್ಯಸ್ಥ ಡಾ. ರವಿ ದೊರೈರಾಜ್ ಹೇಳಿದ್ದಾರೆ.
ಪಿಡಿಇಕೆ ಮತ್ತು ಸಿಎಐಆರ್‍ಎಸ್‍ನಂತಹ ತಾಂತ್ರಿಕ ಸುಧಾರಣೆಗಳು ಕಾರ್ನಿಯಾ ಕಸಿಗೆ ಹೊಸ ಆಯಾಮಗಳನ್ನು ನೀಡಿದ್ದು, ರೋಗಿಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತಿವೆ. ಈ ಅನ್ವೇಷಣೆಗಳಲ್ಲಿ ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ ಮುಂಚೂಣಿಯಲ್ಲಿದೆ ಎಂದು ಡಾ. ರವಿ ಹೇಳಿದ್ದಾರೆ.
ಕಣ್ಣಿನ ದಾನ ಮಾಡುವ ಮೂಲಕ ದೃಷ್ಟಿ ವಂಚಿತರಿಗೆ ಬೆಳಕಾಗಬಹುದು. ತಮ್ಮ ಕಣ್ಣಿನ ದಾನ ಪ್ರಮಾಣ ಮಾಡುವಂತೆ ಪ್ರತಿಯೊಬ್ಬರಲ್ಲೂ ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ ಕೇಳಿಕೊಳ್ಳುತ್ತದೆ ಮತ್ತು ಈ ಮಹತ್ವದ ಉದ್ದೇಶದ ಬಗ್ಗೆ ಜಾಗೃತಿ ಮೂಡಿಸಿ ಎಂದು ಕೇಳಿಕೊಳ್ಳುತ್ತಿದೆ.