IMG 20220722 WA0065

ಮಹಿಳಾ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸಕರ ರಾಷ್ಟ್ರೀಯ ಸಮ್ಮೇಳನ…!

BUSINESS

ಮಹಿಳಾ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸಕರ ರಾಷ್ಟ್ರೀಯ ಸಮ್ಮೇಳನ ಬೆಂಗಳೂರಿನಲ್ಲಿ ಆರಂಭವಾಗಿದೆ

ಬೆಂಗಳೂರು / ಜುಲೈ 22, 2021 – ಏIಂಉಇ ಸಹಯೋಗದೊಂದಿಗೆ ಇಂಡಿಯನ್ ಅಸೋಸಿಯೇಷನ್ ಆಫ್ ಗೈನೆಕೊಲಾಜಿಕಲ್ ಎಂಡೋಸ್ಕೋಪಿಸ್ಟ್‍ಗಳು ಆಯೋಜಿಸಿರುವ ಮಹಿಳಾ ಎಂಡೋಸ್ಕೋಪಿಕ್ ಸರ್ಜನ್‍ಗಳ ಭಾರತದ ಅತಿದೊಡ್ಡ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಆರಂಭಗೊಂಡಿದೆ. ಈವ್ ಎಂಡೋಸ್ಕೋಪಿ ಎಂಬ ಮೂರು ದಿನಗಳ ಕಾರ್ಯಕ್ರಮವು ಜುಲೈ 22, 2022 ರಂದು ಪ್ರಾರಂಭವಾಯಿತು.

ದೇಶಾದ್ಯಂತ 400 ಕ್ಕೂ ಹೆಚ್ಚು ಮಹಿಳಾ ಸ್ತ್ರೀರೋಗತಜ್ಞರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಇನ್ನೂ 500 ಮಂದಿ ಆನ್‍ಲೈನ್‍ನಲ್ಲಿ ಸೆಷನ್‍ಗಳಿಗೆ ಹಾಜರಾಗುತ್ತಿದ್ದಾರೆ. ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ ಎಂಡೋಸ್ಕೋಪಿ ಅಪಾರ ಪ್ರಯೋಜನಗಳನ್ನು ಒಳಗೊಂಡಿದೆ. ಹೀಗಾಗಿ ಇದರಲ್ಲಿ ತರಬೇತಿ ನೀಡಲು ಭಾರತದ ಮಹಿಳಾ ಸ್ತ್ರೀರೋಗತಜ್ಞರನ್ನು ಪೆÇ್ರೀತ್ಸಾಹಿಸುವುದು ಇದರ ಗುರಿಯಾಗಿದೆ.

ಕರ್ನಾಟಕ ಸರಕಾರದ ಎಲೆಕ್ಟ್ರಾನಿಕ್ಸ್, ಐಟಿ – ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಉನ್ನತ ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಮಾನ್ಯ ಡಾ. ಸಿಎನ್ ಅಶ್ವಥ್ ನಾರಾಯಣ್ ಅವರು ಭಾನುವಾರ ಕಾರ್ಯಕ್ರಮ ದಲ್ಲಿ ಭಾಗವಹಿಸುತ್ತಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ಭಾರತೀಯ ಸ್ತ್ರೀರೋಗ ಎಂಡೋಸ್ಕೋಪಿಸ್ಟ್‍ಗಳ ಸಂಘದ ಅಧ್ಯಕ್ಷ ಡಾ. ಭಾಸ್ಕರ್ ಪಾಲ್, “ಈವ್ ಎಂಡೋಸ್ಕೋಪಿ ಸಮ್ಮೇಳನವು ಭಾರತದಲ್ಲಿ ಮಹಿಳಾ ಸ್ತ್ರೀರೋಗತಜ್ಞರಲ್ಲಿ ಎಂಡೋಸ್ಕೋಪಿ ವಿಧಾನವನ್ನು ಜನಪ್ರಿಯಗೊಳಿಸಲು ಹೆಚ್ಚಿನ ಕೊಡುಗೆ ನೀಡುತ್ತಿದೆ. ದೇಶದಲ್ಲಿ ಸುಮಾರು 40,000 ಸ್ತ್ರೀರೋಗ ತಜ್ಞರಿದ್ದಾರೆ, ಆದರೆ ಅವರಲ್ಲಿ ಒಂದು ಭಾಗ ತಜ್ಞರಿಗೆ ಮಾತ್ರ ರೋಗಿಗಳ ಮೇಲೆ ಎಂಡೋಸ್ಕೋಪಿಯನ್ನು ಹೇಗೆ ನಡೆಸಬೇಕೆಂದು ತಿಳಿದಿದೆ. ಕೀಹೋಲ್ ಶಸ್ತ್ರಚಿಕಿತ್ಸೆಗಳು ರೋಗಿಗಳಿಗೆ ಅಪಾರ ಪ್ರಯೋಜನ ನೀಡುತ್ತವೆ. ಈ ಕಾರ್ಯವಿಧಾನದಲ್ಲಿ ಹೆಚ್ಚು ಹೆಚ್ಚು ಮಹಿಳಾ ಸ್ತ್ರೀರೋಗತಜ್ಞರಿಗೆ ಇದರ ತರಬೇತಿ ನೀಡುವುದು ನಮ್ಮ ಉದ್ದೇಶವಾಗಿದೆ” ಎಂದು ಹೇಳಿದರು.

ಬೆಂಗಳೂರಿನ ಈವ್ ಎಂಡೋಸ್ಕೋಪಿಯ ಸಂಘಟನಾ ಅಧ್ಯಕ್ಷೆ ಮತ್ತು ರಾಧಾಕೃಷ್ಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ.ವಿದ್ಯಾ ವಿ ಭಟ್, “ಭಾರತದಾದ್ಯಂತದ 60 ಕ್ಕೂ ಹೆಚ್ಚು ಮಹಿಳಾ ಎಂಡೋಸ್ಕೋಪಿ ಶಸ್ತ್ರಚಿಕಿತ್ಸಕರು ಭಾಗವಹಿಸುವವರ ಅನುಕೂಲಕ್ಕಾಗಿ ಸಮಾವೇಶದಲ್ಲಿ ವಿವಿಧ ರೀತಿಯ ಶಸ್ತ್ರಚಿಕಿತ್ಸೆಗಳನ್ನು ನಡೆಸಲಿದ್ದಾರೆ. ಇದು ನೇರ ಪ್ರಸಾರವೂ ಆಗುತ್ತದೆ. ಎಂಡೋಸ್ಕೋಪಿ ದೀರ್ಘ ಕಲಿಕೆಯ ವ್ಯಾಪ್ತಿಯನ್ನು ಹೊಂದಿದೆ ಮತ್ತು ಈ ತಂತ್ರವನ್ನು ಕರಗತ ಮಾಡಿಕೊಳ್ಳಲು ಹೆಚ್ಚು ಸಮಯ ಬೇಕಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು, ಸಮ್ಮೇಳನವು ಎಲ್ಲಾ ಮೂರು ದಿನಗಳಲ್ಲಿ ಕೌಶಲ್ಯ ವರ್ಧನೆಯ ಸೆಷನ್ ಗಳನ್ನು ನಡೆಸುತ್ತದೆ. ನಮ್ಮ ಉದ್ದೇಶವು ಭಾರತದಲ್ಲಿ ಹೆಚ್ಚು ಹೆಚ್ಚು ಮಹಿಳಾ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸಕರನ್ನು ಪೆÇ್ರೀತ್ಸಾಹಿಸುವುದು ಮತ್ತು ಉತ್ತೇಜಿಸುವುದಾಗಿದೆ, ಏಕೆಂದರೆ ದೇಶದಲ್ಲಿ ಹೆಚ್ಚಿನ ಸ್ತ್ರೀರೋಗತಜ್ಞರು ಮಹಿಳೆಯರಾಗಿದ್ದಾರೆ” ಎಂದರು.

ಡಾ. ವಿದ್ಯಾ ವಿ ಭಟ್, “ಸಮ್ಮೇಳನವು ಸರ್ಜರಿಯ ಭವಿಷ್ಯವಾದ ಎಂಡೋಸ್ಕೋಪಿಕ್ ಅಥವಾ ಕನಿಷ್ಠ ಗಾಯದ ಕಾರ್ಯವಿಧಾನಗಳನ್ನು ತಿಳಿಸುತ್ತದೆ. ಎಂಡೋಸ್ಕೋಪಿ ಮಹಿಳೆಯರ ಆರೋಗ್ಯದಲ್ಲಿ ಒಂದು ಹೆಗ್ಗುರುತಾಗಿದೆ ಏಕೆಂದರೆ ಇದು ವೇಗವಾಗಿ ಚೇತರಿಸಿಕೊಳ್ಳಲು ಕಾರಣವಾಗುತ್ತದೆ, ಗಾಯದ ಗುರುತು ಮತ್ತು ಆಸ್ಪತ್ರೆಯಲ್ಲಿ ಉಳಿಯುವ ಅವಧಿಯೂ ಕಡಿಮೆಯಿದೆ. ಹೆಚ್ಚು ಕಾಲ ಕೆಲಸಕ್ಕೆ ಗೈರುಹಾಜರಾಗಲು ಸಾಧ್ಯವಾಗದ ಉದ್ಯೋಗಸ್ಥ ಮಹಿಳೆಯರಿಗೆ ಇದು ವರದಾನವಾಗಿದೆ. ಈವ್ ಎಂಡೋಸ್ಕೋಪಿ ಸಮ್ಮೇಳನವು ಮಹಿಳೆಯರ ಆರೋಗ್ಯಕ್ಕಾಗಿ ಹೊಸ ಎಂಡೋಸ್ಕೋಪಿಕ್ ತಂತ್ರಜ್ಞಾನಗಳನ್ನು ಮತ್ತು ಲಭ್ಯವಿರುವ ಇತ್ತೀಚಿನ ಸಾಧನಗಳನ್ನು ಪ್ರದರ್ಶಿಸುತ್ತಿದೆ’ ಎಂದೂ ಅವರು ಹೇಳಿದರು.

ಇದು ಈವ್ ಎಂಡೋಸ್ಕೋಪಿ ಸಮ್ಮೇಳನದ ಎರಡನೇ ಆವೃತ್ತಿಯಾಗಿದೆ. ಮೊದಲನೆಯದು ಕಳೆದ ವರ್ಷ ಚೆನ್ನೈನಲ್ಲಿ ನಡೆದಿತ್ತು. ಮಹಿಳಾ ಸ್ತ್ರೀರೋಗ ತಜ್ಞರಲ್ಲಿ ಎಂಡೋಸ್ಕೋಪಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ವಿಶ್ವದ ಮೊದಲ ಸಮಾವೇಶ ಇದಾಗಿದೆ.
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಸಂಪರ್ಕಿಸಿ: ಒeghಚಿ @+91 99864 70678