ಯಡಿಯೂರಪ್ಪ ಅವರ ಮಾರ್ಗದರ್ಶನ ಬಿಜೆಪಿಗೆ ಅತ್ಯಗತ್ಯ: ಸಚಿವ ಮುರುಗೇಶ್ ನಿರಾಣಿ
- ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಬಿ.ಎಸ್.ವೈ ಸಲಹೆ ಬೇಕು
ಬೆಂಗಳೂರು,ಜುಲೈ 22- ದಕ್ಷಿಣ ಭಾರತದಲ್ಲಿ ಬಜೆಪಿಯನ್ನ ಬೇರುಮಟ್ಟದಿಂದ ಸಂಘಟಸಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗದರ್ಶನ ಅಗತ್ಯ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಅಭಿಪ್ರಾಯಪಟ್ಟಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂದರೆ ಯಡಿಯೂರಪ್ಪ ಅವರ ಸಲಹೆ ಹಾಗೂ ಮಾರ್ಗದರ್ಶನ ಅತ್ಯಗತ್ಯ ಎಂದು ಪ್ರತಿಪಾದಿಸಿದರು.
ಯಡಿಯೂರಪ್ಪ ಅವರು ಮತ್ತೆ ನಾನು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. 2023 ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕೇಸರಿ ಬಾವುಟ ಹಾರಬೇಕಾದರೆ ನಮಗೆ ಅವರ ನಾಯಕತ್ವ ಬೇಕು ಎಂದು ಹೇಳಿದರು.
ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುವುದು, ನಿವೃತ್ತಿ ಘೋಷಣೆ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ.ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎಂದು ಯಾರಾದರೂ ಅಂದುಕೊಂಡರೆ ಅದು ತಪ್ಪು
ಎಂದರು.
ಯಡಿಯೂರಪ್ಪ ಅವರು ಈಗಲೂ 18 ರ ಯುವಕರು ನಾಚುವಂತೆ ಪಕ್ಷ ಸಂಘಟನೆ ಹಾಗೂ ಪ್ರವಾಸ ಮಾಡುತ್ತಾರೆ. ಅಡು ಮುಟ್ಟದ ಸೊಪ್ಪಿಲ್ಲ, ಬಿಎಸ್ ವೈ ಹೋಗದ ಸ್ಥಳ ಕರ್ನಾಟಕದಲ್ಲಿ ಇಲ್ಲ ಎಂದು ನಿರಾಣಿ ಅವರು ಪ್ರಶಂಸಿದರು.
ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಅವರ ಪಾತ್ರವನ್ನು ಯಾರೊಬ್ಬರೂ ಮರೆಯುವಂತಿಲ್ಲ.
ಬಿ.ಬಿ.ಶಿವಪ್ಪ,ದಿ.ಅನಂತ್ ಕುಮಾರ್, ಶಂಕರಮೂರ್ತಿ, ತಂಗಾ, ಬಸವರಾಜ್ ಪಾಟೀಲ್ ಸೇಡಂ, ಅವರ ಜೊತೆ ಹಳ್ಳಿ ಹಳ್ಳಿ ಸುತ್ತಿ ಪಕ್ಷವನ್ನು ಸಂಘಟಿಸಿದ್ದಾರೆ.ಅವರ ಈ ದಿಢೀರ್ ನಿರ್ಧಾರ ನಮಗೂ ಆಶ್ಚರ್ಯ ಎಂದರು.
ಸಕ್ರಿಯ ರಾಜಕಾರಣದಲ್ಲಿ ಅವರು ಇನ್ನು ಇರಬೇಕು ಎಂಬುದು ನನ್ನಂತಹ ಲಕ್ಷಾಂತರ ಕಾರ್ಯಕರ್ತರ ಒತ್ತಾಸೆಯಾಗಿದೆ. ಅವರು ಯಾವುದೇ ಒತ್ತಡಕ್ಕೆ ಮಣಿದು ಇಂತಹ ನಿರ್ಧಾರ ತೆಗೆದುಕೊಂಡಿಲ್ಲ.ನಮ್ಮ ಪಕ್ಷ ಯಾವುದೇ ಹಂತದಲೂ ಅವರನ್ನು ಕಡೆಗಣಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಶಿಕಾರಿಪುರ ಕ್ಷೇತ್ರದಿಂದ ಪುತ್ರ ವಿಜೇಯೇಂದ್ರ ಅವರಿಗೆ ಬಿಟ್ಡು ಕೊಡುವುದಾಗಿ ಹೇಳಿರುವುದು ಸ್ವಾಗತರ್ಹ ಬೆಳವಣಿಗೆ. ಇಡೀ ರಾಜ್ಯದಲ್ಲೇ ಅದೊಂದು ಮಾದರಿ ಕ್ಷೇತ್ರ ಎಂದು ನಿರಾಣಿ ಅವರು ಬಣ್ಣಿಸಿದರು.
EoM