ರಾಜ್ಯ ವಿಧಾನ ಸಭೆಯಿಂದ ವಿಧಾನ ಪರಿಷತ್ ಗೆ ಹೋಗಲು 7 ಮಂದಿ ರೆಡಿಯಾಗಿದ್ದಾರೆ. ಅವಿರೋಧ ವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ, ಇಲ್ಲವಾದಲ್ಲಿ ಇದೇ 29 ರಂದು ಚುನಾವಣೆ ನಡೆಯಲಿದೆ.
ಬೆಂಗಳೂರು :- ರಾಜ್ಯ ವಿಧಾನ ಸಭೆಯಿಂದ ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ಇದೇ ತಿಂಗಳ 29 ರಂದು ಚುನಾವಣೆ ಘೋಷಣೆಯಾಗಿತ್ತು, ನಾಮ ಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು ಆಡಳಿತ ರೂಡ ಬಿಜೆಪಿ, ಕಾಂಗ್ರೆಸ್, ಜೆಡಿ (ಎಸ್} ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ವಿಧಾನಸಭೆಯ ಪಕ್ಷಗಳ ಬಲಾ ಬಲದ ಪ್ರಕಾರ ಬಿಜೆಪಿ 4, ಕಾಂಗ್ರೇಸ್ 2 ಮತ್ತು ಜೆಡಿ ( ಎಸ್) 1 ಅಭ್ಯರ್ಥಿ ಗೆಲ್ಲಬಹುದಾಗಿದೆ.
ಆಡಳಿತಾರೂಢ ಬಿಜೆಪಿಯಿಂದ ಮಾಜಿ ಸಚಿವರಾದ ಎಂ ಟಿ ಬಿ ನಾಗರಾಜ್, ಆರ್ ಶಂಕರ್. ಸುನಿಲ್ ವಲ್ಯಾಪುರೆ, ಹಾಗೂ ಪ್ರತಾಪ್ ಸಿಂಹ ನಾಯಕ್ ವಿರೋಧ ಪಕ್ಷ ಕಾಂಗ್ರೇಸ್ ನಿಂದ ಬಿ, ಕೆ ಹರಿಪ್ರಸಾದ್ ಮತ್ತು ನಜೀರ್ ಅಹಮದ್, ಜೆಡಿ ಎಸ್ ನಿಂದ ಕೋಲಾರ ಜಿಲ್ಲೆಯ ಉದ್ಯಮಿ ಗೋವಿಂದರಾಜು ತಮ್ಮ ಪಕ್ಷದ ನಾಯಕರೊಂದಿಗೆ ಬಂದು ನಾಮ ಪತ್ರ ಸಲ್ಲಿಸಿದರು.ಪಕ್ಷೇತರ ಅಭ್ಯರ್ಥಿ ಯಾಗಿ ಯಡವನಹಳ್ಳಿ ಪಿ ಸಿ ಕೃಷ್ಣೇಗೌಡ ಉಮೇದು ವಾರಿಕೆ ಸಲ್ಲಿಸಿದರು.
ಅವಿರೋಧವಾಗಿ ಆಯ್ಕೆ ಯಾಗುವ ಸಾಧ್ಯತೆ ಇದೆ.
ಬಿ ಜೆ ಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ
ಕಾಂಗ್ರೇಸ್ ಅಭ್ಯರ್ಥಿ ಗಳ ನಾಮಪತ್ರ ಸಲ್ಲಿಕೆ
ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ಬಿ.ಕೆ.ಹರಿಪ್ರಸಾದ್ ಅವರು ಇಂದು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಮಾಜಿ ಸಚಿವರಾದ ರಾಮಲಿಂಗಾ ರೆಡ್ಡಿ ಹಾಗೂ ದಿನೇಶ್ ಗುಂಡುರಾವ್ ಅವರು ಉಪಸ್ಥಿತರಿದ್ದರು
ವಿಧಾನಪರಿಷತ್ ಚುನಾವಣೆಗೆ ಕಾಂಗ್ರೇಸ್ ಪಕ್ಷದ ಎರಡನೇ ಅಭ್ಯರ್ಥಿಯಾಗಿ ನಜೀರ್ ಅಹ್ಮದ್ ಅವರು ಇಂದು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಯು.ಟಿ.ಖಾದರ್, ಶಾಸಕರಾದ ಹ್ಯಾರೀಸ್ ಅವರು ಉಪಸ್ಥಿತರಿದ್ದರು.
ಜೆಡಿ ಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ