IMG 20220702 WA0023

ಪಾವಗಡ: ಸ್ವಾತಂತ್ರ್ಯ ಪೂರ್ವ ಸ್ಥಾಪನೆಯಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದು ಅವನತಿಯ ಹಾದಿ….

DISTRICT NEWS ತುಮಕೂರು

ಸ್ವಾತಂತ್ರ್ಯ ಪೂರ್ವ ಸ್ಥಾಪನೆಯಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದು ಅವನತಿಯ ಹಾದಿ….

ಎಸ್ ಎಸ್ ಕೆ ಖಾಸಗಿ ಟ್ರಸ್ಟ್ ಗೆ 65 ಲಕ್ಷಕ್ಕೆ ಮಾರಲು‌ ತಯಾರಿ ಮಾಡಿದ್ದ ತಾಲ್ಲೂಕು ಪಂಚಾಯತಿ

ಇತಿಹಾಸ ವಿರುವ ಸರ್ಕಾರಿ ಶಾಲೆಗೆ ತಾಲ್ಲೂಕು ಕಾಂಗ್ರೆಸ್ ನಾಯಕರ‌ ಕೊಡುಗೆ ಇದು…? ಶಾಸಕ ವೆಂಕಟರವಣಪ್ಪ ನವರ ಮೌನ…? ಇದು ವೇ ತಾಲ್ಲೂಕು‌ ಆಡಳಿತ ವ್ಯವಸ್ಥೆ…!

ಪಾವಗಡ…… ರಾಜ್ಯವನ್ನಾಳಿದ ಎಷ್ಟೋ ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ ಎಂದು ಹೇಳಿಕೊಂಡು ಬರುತ್ತಿದ್ದು ಇಂದಿನ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ದುಸ್ಥಿತಿ ನೋಡಿದರೆ. ಸರ್ಕಾರ ಸರ್ಕಾರಿ ಶಾಲೆಗಳ ಬಗ್ಗೆ ಯಾವ ರೀತಿ ಕಾಳಜಿ ಹೊಂದಿದೆ ಎಂಬುದನ್ನು ನಮಗೆ ಈ ಶಾಲೆ ನೋಡಿದರೆ ಅರಿವಾಗುತ್ತದೆ.

ಪಾವಗಡದ ಇತಿಹಾಸ ಓದಿದಾಗ ಈಗ ಶಾಲೆ ಇರುವ ಸ್ಥಳ ಹಿಂದೆ ಮುಸಾಫರ್ ಖಾನೆ ಎಂಬುದಾಗಿತೆಂದು ಮುಸಾಫರ್ ಖಾನೆ ಎಂದರೆ ಅನಾಥರು , ನಿರ್ಗತಿಕರಿಗೆ ತಂಗುಧಾಣವಾಗಿತೆಂದು ತದನಂತರ 1931 ರಲ್ಲಿ ಈ ಸ್ಥಳದಲ್ಲಿ ಉರ್ದು ಹಾಗೂ ಕಿರಿಯ ಪ್ರಾಥಮಿಕ ಪಾಠಶಾಲೆ ಪ್ರಾರಂಭವಾಯಿತೆಂದು.

ಪಾವಗಡ ತಾಲೂಕಿನಲ್ಲಿ ಮೊಟ್ಟಮೊದಲ ಬಾರಿಗೆ ಪ್ರಾರಂಭವಾದ ಶಾಲೆಯೆಂಬ ಹೆಗ್ಗಳಿಕೆ ಈ ಶಾಲೆಗಿದೆ. ಈ ಶಾಲೆಯ ಸ್ಥಳವು ತಾಲೂಕು ವಿಕೇಂದ್ರಿಕರಣವಾದಂತಹ ಸಂದರ್ಭದಲ್ಲಿ ಈ ಶಾಲೆಯ ಸ್ವತ್ತು ತಾಲೂಕು ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದೆ ಎಂದು. ದಾಖಲೆಗಳಿವೆ.

ಇಷ್ಟೊಂದು ಇತಿಹಾಸವಿರುವ ಈ ಶಾಲೆಯ ಇಂದಿನ ಪರಿಸ್ಥಿತಿ ತುಂಬಾ ಶೋಚನೀಯವಾಗಿದೆ. 2021 ರಲ್ಲಿ ಸರ್ಕಾರ ಶಿಕ್ಷಣ ಇಲಾಖೆಗೆ ವರ್ಗಾವಣೆಗೊಳ್ಳದ ಸರ್ಕಾರಿ ಶಾಲೆಗಳ ಆಸ್ತಿಯನ್ನು ಶಿಕ್ಷಣ ಇಲಾಖೆಗೆ ವರ್ಗಾವಣೆಗೊಳಿಸಬೇಕು ಎಂಬ ಆದೇಶ ಮಾಡಿದರೂ ಸಹ ಜಿಲ್ಲಾ ಶಿಕ್ಷಣ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದಾಗಿ ಇಂದಿಗೂ ಈ ಶಾಲೆಯ ಆಸ್ತಿ ತಾಲೂಕು ಪಂಚಾಯತಿಯ ಕಾರ್ಯನಿರ್ವಹಣಾಧಿಕಾರಿಯ ಹೆಸರಿನಲ್ಲಿದೆ.

ತಾಲ್ಲೂಕು ಪಂಚಾಯತಿ‌ ಯ ನಿಕಟ ಪೂರ್ವ ಸದಸ್ಯರು 2019. ರಲ್ಲಿ ಈ ಶಾಲೆಯನ್ನು SSK ಎಂಬ ಖಾಸಗಿ ಟ್ರಸ್ಟ್ ಗೆ 65 ಲಕ್ಷ ಕ್ಕೆ ಮಾರಲು ಹೊರಟಿದ್ದರು. ಸದ್ಯ ತಾಲ್ಲೂಕು‌ಪಂಚಾಯತಿ ಯಲ್ಲಿ‌ ಸದಸ್ಯ ರು‌ ಇಲ್ಲದ ‌ಕಾರಣ ಇನ್ನು‌ ಶಾಲೆ‌ ಇದೆ….!

IMG 20220702 WA0020
ತಹಸಿಲ್ದಾರ್ ಅವರಿಗೆ ಮನವಿ ಸಲ್ಲಿಸಿದ ಹಳೇ ವಿಧ್ಯಾರ್ಥಿಗಳು

. ಈ ಶಾಲೆಯಲ್ಲಿ ಆರು ಕೊಠಡಿಗಳಿದ್ದು, 28 ವಿದ್ಯಾರ್ಥಿಗಳು ಒಂದರಿಂದ ಐದನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆರು ಕೊಠಡಿಗಳಲ್ಲಿ 5 ಕೊಠಡಿಗಳು ಸಂಪೂರ್ಣವಾಗಿ ಹಾಳಾಗಿದ್ದು ಬರಿ ಒಂದು ಕೊಠಡಿಯಲ್ಲಿ ಎಲ್ಲಾ ಮಕ್ಕಳಿಗೂ ಬೋಧನಾ ಕಾರ್ಯ ನಡೆಯುತ್ತಿದೆ. ಶಾಲೆಯ ಸಮಸ್ಯೆಯನ್ನು ಎಷ್ಟೋ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ವಾಗದ ಕಾರಣ. ಶಾಲೆಯನ್ನು ಉಳಿಸುವ ಸಲುವಾಗಿ ಈ ಶಾಲೆಯಲ್ಲಿ ಓದಿದ ಹಳೆ ಯ ವಿದ್ಯಾರ್ಥಿಗಳು ಹಾಗೂ ಪೋಷಕರು ಇಂದು ತಾಲೂಕ್ ಕಚೇರಿಗೆ ಭೇಟಿ ನೀಡಿ ಗ್ರೇಡ್ 2 ತಹಶೀಲ್ದಾರಾದ ಮೂರ್ತಿಯವರಿಗೆ ಕರ್ನಾಟಕ ಸೋಲಾರ್ ಅಭಿವೃದ್ಧಿ ನಿಗಮದ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯಿಂದ ಈ ಶಾಲೆಗೆ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಿಸಿ ಕೊಡುವಂತೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳಾದ. ಪ್ರಶಾಂತ್ ಪಿ ಜೆ. ಶ್ರೀನಿವಾಸಲು.ಎ. ವೆಂಕಿ. ಅಶ್ವಥ್ ನರೇಶ್. ಹನುಮೇಶ್. ನಾಗರಾಜ್. ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀಮತಿ ನಾಗಮಣಿ. ಪೋಷಕರಾದ ಗೋವಿಂದರಾಜು ಗೋವಿಂದಪ್ಪ ಇನ್ನು ಮುಂತಾದವರು ಹಾಜರಿದ್ದರು.

ವರದಿ: ಶ್ರೀನಿವಾಸಲು ಎ