ಮಧುಗಿರಿ – ಉತ್ತಮವಾದ ಅರೋಗ್ಯವಂತ ಸಮಾಜ ನಿರ್ಮಾಣ ಯುವಕರ ಕೈಯಲ್ಲಿದೆ ಎಂದು ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು.
ತಾಲೂಕಿನ ಐ ಡಿ ಹಳ್ಳಿ ಹೋಬಳಿಯ ತಾಡಿ ಗ್ರಾಮದ ಶ್ರೀ ವೀರನಾಗಮ್ಮ ದೇವಾಲಯದ ಆವರಣದಲ್ಲಿ ತುಮಕೂರು ವಿಶ್ವ ವಿದ್ಯಾನಿಲಯ ಹಾಗೂ ಟಿ.ವಿ.ವೆಂಕಟಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟೀಯ ಸೇವಾ ಯೋಜನಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಹಾಗೂ ವಿಶೇಷ ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಕರಿಗೆ ಒಳ್ಳೆಯದು ಹಾಗೂ ಕೆಟ್ಟದನ್ನು ಗ್ರಹಿಸುವ ಶಕ್ತಿ ಇದ್ದು, ಜನಪ್ರತಿನಿದಿನಗಳನ್ನು ಆಯ್ಕೆ ಮಾಡುವಾಗ ಯಾರು ತಮ್ಮ ಕಷ್ಟಗಳಿಗೆ ಸ್ಪಂದಿಸುತ್ತಾರೋ ಅಂತವರನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.
ರಾಷ್ಟೀಯ ಸೇವಾ ಯೋಜನೆಯ ಮೂಲ ಉದ್ದೇಶ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದು. ಶಿಬಿರಾರ್ಥಿಗಳು ಮೊದಲು ತಮ್ಮ ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದನ್ನು ಕಲಿಯಬೇಕು. ಉತ್ತಮ ಪರಿಸರ ನಿರ್ಮಾಣದಿಂದ ಉತ್ತಮ ಆರೋಗ್ಯವಂತ ಸಮಾಜ ನಿರ್ಮಿಸಬಹುದು ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು ಮಾತನಾಡಿ, ಸಮೃದ್ಧ ಸಮಾಜ ನಿರ್ಮಾಣಕ್ಕೆ ಯುವಕರು ಕೈ ಜೋಡಿಸಬೇಕು, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತನ್ನು ಅಳವಡಿಸಿ ಕೊಂಡು ಗುರು ಹಿರಿಯರಿಗೆ ಗೌರವ ನೀಡಬೇಕು. ಶಿಬಿರಾರ್ಥಿಗಳು ಎನ್ ಎಸ್ ಎಸ್ ಶಿಬಿರಗಳಲ್ಲಿ ಆಸಕ್ತಿ ಇಂದ ಭಾಗವಹಿಸಿ ಪರಿಪೂರ್ಣ ವ್ಯಕ್ತಿ ಗಳಾಗಿ ಹೊರಹೊಮ್ಮಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಸಿ.ಕೃಷ್ಣಪ್ಪ, ಗ್ರಾಪಂ ಅಧ್ಯಕ್ಷ ನರಸಿಂಹ ರೆಡ್ಡಿ, ಉಪಾಧ್ಯಕ್ಷೆ ನಾಗರತ್ನಮ್ಮ, ಸದಸ್ಯರುಗಳಾದ ಚಂದ್ರಮೌಳಿ, ಸದಾಶಿವರೆಡ್ಡಿ, ನರಸಿಂಹ ಮೂರ್ತಿ, ಮಧುಗಿರಿ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ವಿ.ಶ್ರೀನಿವಾಸ್, ಸದಸ್ಯ ಶಂಕರನಾರಾಯಣ ಶೆಟ್ಟಿ ಸಾಹಿತಿ ಮ.ಲ.ನ ಮೂರ್ತಿ, ಮುಖಂಡರುಗಳಾದ ಪಿ.ಟಿ.ಗೋವಿಂದಪ್ಪ, ರಾಮಾಂಜಿ, ಬಿ.ವಿ.ನಾಗರಾಜಪ್ಪ, ಶನಿವಾರಂ ರೆಡ್ಡಿ, ನಾಗರಾಜು, ಕ್ಯಾತಪ್ಪ, ಶ್ರೀನಿವಾಸ್ ರೆಡ್ಡಿ, ವೇಣುಗೋಪಾಲರೆಡಿ.ರಂಗಾರೆಡ್ಡಿ, ಶ್ರೀಧರ್ ರೆಡ್ಡಿ, ಮೈಲಾರಪ್ಪ, ಸುಬ್ಬರಾಯಪ್ಪ, ಎನ್ ಎಸ್ ಎಸ್ ಅಧಿಕಾರಿಗಳಾದ ಟಿ.ವಿ.ವಿನುಕುಮಾರ್, ರಂಗಸ್ವಾಮಯ್ಯ, ಭೂತರಾಜು , ಪಲ್ಲವಿ ದೈಹಿಕ ಶಿಕ್ಷಕ ಎಂ.ಆರ್.ವೆಂಕಟೇಶ ಮೂರ್ತಿ ಹಾಗೂ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು
ವರದಿ. ಲಕ್ಷ್ಮಿಪತಿ ದೊಡ್ಡ ಎಲ್ಕೂರು