ವಿದ್ಯಾರ್ಥಿಗಳ ಮಧ್ಯ ಜಾತಿ ತಾರತಮ್ಯ ಮಾಡಿದ ಶಿಕ್ಷಕರು.. ಪೋಷಕರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು.
ಪಾವಗಡ…. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ನಾಣ್ನುಡಿಯಂತೆ ಮಕ್ಕಳನ್ನು ತಿದ್ದಿ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕಾದ ಶಿಕ್ಷಕರೇ ಮಕ್ಕಳ ನಡುವೆ ಜಾತಿ ತಾರತಮ್ಯ ಮಾಡಿದ ಘಟನೆ ಇಂದು ತಾಲೂಕಿನ ಸಾಸಲಕುಂಟೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ. ಶಾಲೆಯ ಮುಖ್ಯೋಪಾಧ್ಯಾಯ ದೇವರಾಜ್ ಮತ್ತು ದೈಹಿಕ ಶಿಕ್ಷಕಿ ಶ್ರೀಲಕ್ಷ್ಮೀ ರವರು ಮಕ್ಕಳ ಮುಂದೆಯೆ ಅಸಭ್ಯವಾಗಿ ಮಾತನಾಡುವುದು, ಹಾಗೂ ಭಾನುವಾರ ವಿಶೇಷ ಶಾಲೆಯ ಹೆಸರಿನಲ್ಲಿ ಕಲಿಕೆಗೆ ಬದಲಾಗಿ ಕಾಲಹರಣ ಮಾಡುವರೆಂದು, ಶಾಲೆಯಲ್ಲಿ ಹಲವಾರು ರೀತಿಯಲ್ಲಿ ವಿದ್ಯಾರ್ಥಿಗಳ ನಡುವೆ ಜಾತಿ ತಾರತಮ್ಯ ಮಾಡುವರೆಂದು ಸಾಸಲಕುಂಟೆ ಗ್ರಾಮದ ಯುವಕರು ಮತ್ತು ಗ್ರಾಮಸ್ಥರು ದೂರಿದ್ದಾರೆ.
ಈ ಸಂಬಂಧ ಪೋಷಕರು ಹಾಗೂ ಊರಿನ ಯುವಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದರು. ಈ ಸಂಧರ್ಭದಲ್ಲಿ ಸಾಸಲಕುಂಟೆ ಗ್ರಾಮದ ಭರತ್, ಅಖಿಲ್, ಪಾಲಾಕ್ಷಿ, ಯಶ್ವಂತ್, ಗೋಪಾಲ, ಪ್ರಶಾಂತ್, ರಾಜ, ಆದರ್ಶ, ಸುದರ್ಶನ್ ಗಣೆಶ್, ನರಸಿಂಹ ಇತರರು ಹಾಜರಿದ್ದರು