ಎಸ್ ಎಂ ಗ್ಯಾಸ್ ಏಜೆನ್ಸಿ :ಕೋವಿಡ್ ಕೇಂದ್ರಕ್ಕೆ 5 ಬೆಡ್ ಗಳನ್ನು ದೇಣಿಗೆ
ಮಂಚ ಮತ್ತು ಹಾಸಿಗೆ ವಿತರಿಸಿದ ಉದ್ಯಮಿ
ವೈ.ಎನ್.ಹೊಸಕೋಟೆ : ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಇತ್ತೀಚೆಗೆ ಕೋವಿಡ್ ಆರೈಕೆ ಕೇಂದ್ರ ತೆರೆಯಲಾಗಿತ್ತು. ಇದನ್ನು ಮನಗಂಡ ಗ್ರಾಮದ ಉದ್ಯಮಿ ಹಾಗೂ ಸಮಾಜಸೇವಕ ಎನ್.ಆರ್.ಅಶ್ವಥ್ ಕುಮಾರ್ ರವರು ಒಂದು ಲಕ್ಷಕ್ಕೂ ಹೆಚ್ಚಿನ ಬೆಲೆಯ ಹತ್ತು ಹಾಸಿಗೆ ಮತ್ತು ಹತ್ತು ಮಂಚಗಳನ್ನು ಮಾನ್ಯ ಶಾಸಕರಾದ ವೆಂಕಟರವಣಪ್ಪನವರ ಸಮ್ಮುಖದಲ್ಲಿ ಆರೋಗ್ಯ ಕೇಂದ್ರಕ್ಕೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೆಂಕಟರವಣಪ್ಪ, ಗ್ರಾಮದ ಪ್ರಗತಿಯಲ್ಲಿ ಸ್ಥಳೀಯ ಮುಖಂಡರಾದ ಎನ್.ಆರ್.ಅಶ್ವಥ್ ಕುಮಾರ್ ರವರ ಸಹಕಾರ ಉತ್ತಮವಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ರೋಗಿಗಳಿಗೆ ಅಗತ್ಯವಾದ 10 ಹಾಸಿಗೆ ಮತ್ತು ಮಂಚವನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ. ಇವರಂತೆ ಮುಖಂಡರು ಮತ್ತು ದಾನಿಗಳು ಸಹಕರಿಸಿದರೆ ಗ್ರಾಮ ಎಲ್ಲಾರೀತಿಯಲ್ಲೂ ಅಭಿವೃದ್ಧಿ ಹೊಂದುತ್ತದೆ ಎಂದು ಉದ್ಯಮಿಯನ್ನು ಅಭಿನಂದಿಸಿದರು.
ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನಾಧ್ಯಂತ ಗ್ರಾಮಗಳಿಗೆ ಬೇಟಿ ನೀಡುತ್ತಿದ್ದು, ಎಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿ ವರ್ಗಕ್ಕೆ ಸೂಚಿಸಲಾಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎಸ್.ಎಂ.ಇಂಡೇನ್ ಗ್ಯಾಸ್ ಏಜೆನ್ಸಿಯ ಮುನ್ನಾ ರವರು ಕೋವಿಡ್ ಕೇಂದ್ರಕ್ಕೆ 5 ಬೆಡ್ ಗಳನ್ನು ದೇಣಿಗೆ ನೀಡಲಾಗುವುದು ಎಂದು ತಿಳಿದರು.
ಗ್ರಾಮಪಂಚಾಯಿತಿ ಅಧ್ಯಕ್ಷರಾದ ಪದ್ಮಕ್ಕ ಓಬಳೇಶ್, ತಹಶೀಲ್ದಾರ್ ಕೆ.ಆರ್.ನಾಗರಾಜು, ಎಂ.ಆರ್.ಶಿವಾನಂದಗುಪ್ತ, ಟಿ.ಆರ್.ವಿ.ಪ್ರಸಾದ್, ತಾ.ಪಂ ಸದಸ್ಯ ಪಿ.ಸಿ.ನಾಗರಾಜು, ಶ್ರೀನಿವಾಸ, ಎನ್.ಎಸ್.ಮಂಜು, ಕಂದಾಯಾಧಿಕಾರಿ ಕಿರಣ್‌ಕುಮಾರ್, ಗ್ರಾಮಲೆಕ್ಕಿಗೆ ರವಿಕುಮಾರ್, ಟಿಹೆಚ್‌ಓ ತಿರುಪತಯ್ಯ, ವೈದ್ಯಾಧಿಕಾರಿ ಡಾ.ಲಿಂಗರಾಜು, ಡಾ.ರಾಮಾಂಜಿನೇಯ, ಪಿಎಸ್‌ಐ ಬಿ.ರಾಮಯ್ಯ ಇದ್ದರು.
ವರದಿ: ಸತೀಶ್