IMG 20211021 WA0052

ಪಾವಗಡ: ಕೋವಿಡ್ ಟೆಸ್ಟ್ ಗಾಗಿ ವಿಧ್ಯಾರ್ಥಿ ಗಳ ಪರದಾಟ….!

DISTRICT NEWS ತುಮಕೂರು

*ವಸತಿ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಮನ್ವಯತೆಯ ಕೊರತೆ

* ವಿಧ್ಯಾರ್ಥಿ ಗಳ ಪರದಾಟ

ಪಾವಗಡ. ಸರ್ಕಾರಿ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಲು ವಸತಿ ಶಾಲೆಯ ವಿದ್ಯಾರ್ಥಿಗಳ ಪರದಾಟ. ದಸರಾ ಹಬ್ಬದ ಎಂಟು ದಿನಗಳ ರಜಾ ಮುಗಿದ ನಂತರ ಅಕ್ಟೋಬರ್ 21ರಿಂದ ಶಾಲಾ-ಕಾಲೇಜುಗಳು ಪ್ರಾರಂಭವಾಗಿದ್ದು ಪುನಹ ವಸತಿ ಶಾಲೆಗಳಿಗೆ ಆಗಮಿಸಲು ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಿದ್ದರಿಂದಾಗಿ ಕಳೆದ ಎರಡು ದಿನಗಳಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಲು ವಿದ್ಯಾರ್ಥಿಗಳು ಸಾಲಾಗಿ ನಿಂತಿರುವ ದೃಶ್ಯಗಳು ಸಾಮಾನ್ಯವಾಗಿತ್ತು.

ತಾಲೂಕಿನ ಮುರಾರ್ಜಿ ದೇಸಾಯಿ ಕಿತ್ತೂರಾಣಿ ಚೆನ್ನಮ್ಮ ವಾಜಪೇಯಿ ಏಕಲವ್ಯ ಇಂದಿರಾಗಾಂಧಿ ಅಂಬೇಡ್ಕರ್ ವಸತಿ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಪೋಷಕರ ಮೊಬೈಲ್ ಗೆ ಕೋವಿಡ್ ಟೆಸ್ಟ್ ಕಡ್ಡಾಯವಾಗಿ ಮಾಡಿಸಿಕೊಂಡು ಶಾಲೆಗೆ ಆಗಮಿಸುವಂತೆ ಎಲ್ಲಾ ವಸತಿ ಶಾಲೆಗಳ ಪ್ರಾಂಶುಪಾಲರಿಂದ ಮಾಹಿತಿ ನೀಡಿದ್ದರಿಂದ ವಿದ್ಯಾರ್ಥಿಗಳು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಲು ಪರದಾಡುವಂತಾಯಿತು.

ಈ ವೇಳೆ ಸರ್ಕಾರಿ ಆಸ್ಪತ್ರೆಗೆ ಧಾವಿಸಿದ ಹೆಲ್ಪ್ ಸೊಸೈಟಿ ನಿರ್ದೇಶಕರಾದ ತರುಣ್ ಮತ್ತು ನರಸಿಂಹಮೂರ್ತಿ ವಿದ್ಯಾರ್ಥಿಗಳಿಗೆ ಈ ಸಮಸ್ಯೆಯನ್ನು ಗಮನಿಸಿ ತಕ್ಷಣ ತಹಸಿಲ್ದಾರ್ ಗಮನಕ್ಕೆ ತಂದಿದ್ದಾರೆ. ಈ ವೇಳೆ ಹೆಲ್ಪ್ ಸೊಸೈಟಿ ನಿರ್ದೇಶಕರಾದ ತರುಣ್ ಮಾತನಾಡಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಇಲ್ಲದ ಕಾನೂನು ಮುರಾರ್ಜಿ ಶಾಲೆಗಳ ವಿದ್ಯಾರ್ಥಿಗಳಿಗೆ ಮಾತ್ರ ಏಕೆ ಈ ಕಾನೂನು ಎಂದು ಪ್ರಶ್ನಿಸಿದರು

.ವಿದ್ಯಾರ್ಥಿಗಳು ನಲವತ್ತರಿಂದ ಐವತ್ತು ಕಿಲೋಮೀಟರ್ ದೂರದಿಂದ ಬಂದು ಟೆಸ್ಟ್ ಮಾಡಿಸಲು ಪರದಾಡಬೇಕಾಗಿದೆ. ಪಾವಗಡ ಕೇಂದ್ರಕ್ಕೆ ಎಲ್ಲಾ ವಿದ್ಯಾರ್ಥಿಗಳು ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾಗಿದೆ.ಪ್ರಾರ್ಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಟೆಸ್ಟ್ ಸೆಂಟರ್ ಇದ್ದರೆ ತೆರೆದಿದ್ದರೆ ಸಮಸ್ಯೆ ಉಲ್ಬಣಿಸುತ್ತಿರಲಿಲ್ಲಎಂದರು. ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಕೆಆರ್ ನಾಗರಾಜ್ ಗ್ರೇಡ್ ಟು ತಹಶೀಲ್ದಾರ್ ನರಸಿಂಹಮೂರ್ತಿ ತಾಲೂಕು ವೈದ್ಯಾಧಿಕಾರಿಗಳಾದ ತಿರುಪತಯ್ಯ ರವರ ಜೊತೆ ಚರ್ಚಿಸಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ . ಕೋವಿಡ್ ಟೆಸ್ಟ್ ಚುರುಕುಗೊಳಿಸಿದರು.

ತಹಸೀಲ್ದಾರ್ ಕೆಆರ್ ನಾಗರಾಜ್ ಮಾತನಾಡುತ್ತಾ ವಸತಿ ಶಾಲೆಗಳ ಪ್ರಾಂಶುಪಾಲರುಗಳು ದಸರಾ ರಜೆಯ ನಂತರ ವಸತಿ ಶಾಲೆಯವಿದ್ಯಾರ್ಥಿಗಳು ಶಾಲೆಗೆ ತೆರಳಲು ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಿರುವ ವಿಷಯ ತನ್ನ ಗಮನಕ್ಕೆ ಬಂದಿಲ್ಲವೆಂದು ಈ ಮೊದಲೇ ತಿಳಿಸಿದ್ದರೆ ಅಗತ್ಯ ಕ್ರಮ ಕೈಗೊಳ್ಳಬಹುದಿತ್ತು ಎಂದು ತಿಳಿಸಿದರು.

ಕೊನೆಗೆ ತಹಸೀಲ್ದಾರ್ ಕೆಆರ್ ನಾಗರಾಜು ತಾಲೂಕು ವೈದ್ಯಾಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಿದರು. ಏನೇ ಇರಲಿ ವಸತಿ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಮನ್ವಯತೆಯ ಕೊರತೆಯಿಂದ ಸಮಸ್ಯೆ ಅನುಭವಿಸಿದ್ದು ಮಾತ್ರ ವಿದ್ಯಾರ್ಥಿಗಳು ಮತ್ತು ಪೋಷಕರು.

ವರದಿ: ಎ. ಶ್ರೀನಿವಾಸುಲು