IMG 20211021 WA0050

ರಕ್ಷಣಾ ಉತ್ತನ್ನಗಳ ರಫ್ತಿಗೆ ಉತ್ತೇಜನ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್

NATIONAL National - ಕನ್ನಡ
ಕ್ಷಣಾ ಉತ್ತನ್ನಗಳ ರಫ್ತಿಗೆ ಉತ್ತೇಜನ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಬೆಂಗಳೂರು,  ಅಕ್ಟೋಬರ್ 21, 2021(ಕರ್ನಾಟಕ ವಾರ್ತೆ):
2025 ನೇ ಇಸವಿಯ ವೇಳೆಗೆ ದೇಶವು 35,000 ಕೋಟಿ ರೂಗಳ ರಕ್ಷಣಾ ಉತ್ಪನ್ನಗಳ ರಫ್ತು ಮಾಡುವ ಗುರಿಯನ್ನು ಹೊಂದಿದೆ ಎಂದು ಕೇಂದ್ರ ರಕ್ಷಣಾ ಸಚಿವರಾದ ರಾಜ್‍ನಾಥ್ ಸಿಂಗ್ ತಿಳಿಸಿದರು.
ಬೆಂಗಳೂರಿಗೆ ಎರಡು ದಿನಗಳ ಭೇಟಿಗಾಗಿ ಆಗಮಿಸಿರುವ ಅವರು ಇಂದು ಹೋಟೆಲ್ ತಾಜ್ ವೆಸ್ಟೆಂಡ್‍ನಲ್ಲಿ ಆಯೋಜಿಸಲಾಗಿದ್ದ ರಕ್ಷಣಾ ಇಲಾಖೆಯ ಪರಾಮರ್ಶನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಾ, ರಕ್ಷಣಾ ಇಲಾಖೆಯು ಮಾರುಕಟ್ಟೆ ವಿಸ್ತರಣೆ, ಉದ್ಯೋಗ ಸೃಷ್ಠಿ, ಜಾಗತಿಕ ವಾಣಿಜ್ಯ ಬೇಡಿಕೆಗಳ ಬಗ್ಗೆ ಗಮನ ಹರಿಸಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಗುಣಮಟ್ಟ ಕಾಯ್ದುಕೊಂಡು ಉತ್ಪನ್ನಗಳನ್ನು ದೇಶೀಯವಾಗಿ ಹಾಗೂ ಇತರ ದೇಶಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಮುಖವಾಗಿದೆ. ರಫ್ತು ಪರವಾನಗಿ ನೀಡಿಕೆ, ಆನ್‍ಲೈನ್ ಸಮಾಲೋಚನೆ, ತಂತ್ರಜ್ಞಾನದ ವಿನೂತನ ಬಳಕೆಯಿಂದ ಇಲಾಖೆಯು ರಕ್ಷಣಾ ವಸ್ತುಗಳ ಬೇಡಿಕೆಗೆ ಧಕ್ಕೆ ಬಾರದ ರೀತಿಯಲ್ಲಿ ಮುನ್ನಡೆಯುತ್ತಿದೆ ಎಂದರು.
ರಕ್ಷಣಾ ಉತ್ಪನ್ನಗಳನ್ನು ಜಾಗತಿಕ ಬೇಡಿಕೆಗೆ ಅನುಸಾರವಾಗಿ ವಿನ್ಯಾಸಗೊಳಿಸುವುದರ ಜೊತೆಗೆ ಖಾಸಗಿ ಹಾಗೂ ಸಾರ್ವಜನಿಕ ವಲಯಗಳಲ್ಲೂ ಇದನ್ನು ಹೆಚ್ಚು ಅಭಿವೃದ್ಧಿ ಪಡಿಸಲಾಗಿದೆ. ರಕ್ಷಣಾ ತೆರಿಗೆ ಪಾವತಿ (ಡಿಡಿಪಿ) ಗೆ ಸಹ ಇಲಾಖೆ ಒತ್ತು ನೀಡಿದ್ದು, ಈ ಬಗ್ಗೆ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು
ರಕ್ಷಣಾ ವಸ್ತುಗಳ ರಫ್ತಿನಲ್ಲಿ ಭಾರತ ವಿಶ್ವದ ಮೊದಲ 25 ದೇಶಗಳಲ್ಲಿ  ಸ್ಥಾನ  ಪಡೆದಿದೆ. ಅಮೇರಿಕ, ಇಸ್ರೇಲ್ sಸೇರಿದಂತೆ ಸುಮಾರು 84 ದೇಶಗಳಲ್ಲಿ ಭಾರತ ತನ್ನ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಬುಲೆಟ್ ಪ್ರೂಫ್ ಹೆಲ್ಮೆಟ್, ಎಲೆಕ್ಟ್ರಾನಿಕ್ ಉತ್ಪನ್ನ ಹಾಗೂ ಆಟೋಮೊಬೈಲ್ ಇತ್ಯಾದಿಗಳಿಗೆ ಬಹಳ ಬೇಡಿಕೆಯಿದೆ. ಮೇಕ್ ಇನ್ ಇಂಡಿಯಾ ಅಡಿಯಲ್ಲಿ 375 ಒಡಂಬಡಿಕೆ ಯೋಜನೆಗಳಿಗೆ ಸಹಿ ಹಾಕಲಾಗಿದೆ. ಪ್ರತಿ ವರ್ಷ ರಕ್ಷಣಾ ಎಕ್ಸ್‍ಪೋ ಹಾಗೂ ಏರೋ ಇಂಡಿಯಾ ಶೋ ಅನ್ನು ಇಲಾಖೆ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಭಾರತ್ ಎಲೆಕ್ಟ್ರಿಕಲ್ಸ್ ಲಿಮಿಟೆಡ್, ಡಿಆರ್‍ಡಿಓ ಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಈ ಕಂಪೆನಿಗಳು ಗುಣಮಟ್ಟಕ್ಕೆ ಸಹ ಹೆಸರು ಪಡೆದಿದೆ. ಹೊಸ ಸ್ಟಾರ್ಟ್ ಅಪ್ ಕಂಪೆನಿಗಳಿಗೆ ಸಹ ಇಲಾಖೆ ಪ್ರೋತ್ಸಾಹ ನೀಡುತ್ತಿದೆ ಎಂದರು
ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಸಾರ್ವಜನಿಕ ಉದ್ದಿಮೆಗಳನ್ನು ಉತ್ತೇಜಿಸಿ ಪ್ರೋತ್ಸಾಹಿಸುವುದು ಬಹಳ ಮುಖ್ಯ. ಇದರಿಂದ ರಫ್ತಿನ ಪ್ರಮಾಣ ಹೆಚ್ಚಳವಾಗಿ ದೇಶ ಮುನ್ನಡೆಯುತ್ತದೆ ಎಂದರು
ಸಭೆಯಲ್ಲಿ ಕೇಂದ್ರ ರಕ್ಷಣಾ ಕಾರ್ಯದರ್ಶಿಗಳಾದ ಅಜಯ್ ಕುಮಾರ್, ಅಪರ ಕಾರ್ಯದರ್ಶಿಗಳಾದ ಸಂಜಯ್ ಜಾಜು, ಇಲಾಖೆಯ ಹಣಕಾಸು ಸಲಹೆಗಾರರಾದ ಸಂಜೀವ್ ಮಿಟ್ಟಲ್ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.