IMG 20220418 WA0008

ಪಾವಗಡ: ಮಹಿಳಾ ಸಬಲೀಕರಣ ದಿಂದ ಮಾತ್ರ ಮಹಿಳೆಯರ ಏಳಿಗೆ

DISTRICT NEWS ತುಮಕೂರು

ಮಹಿಳಾ ಸಬಲೀಕರಣ ದಿಂದ ಮಾತ್ರ ಮಹಿಳೆಯರ ಏಳಿಗೆ ಶಾಸಕ ವೆಂಕಟರಮಣಪ್ಪ.

ಪಾವಗಡ …ಇಂದು ಪಟ್ಟಣದ ಎಸ್.ಎಸ್. ಕೆ. ಬಯಲು ರಂಗಮಂದಿರದಲ್ಲಿ ಸಂಜೀವಿನಿ. ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ. ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ. ಸಂಜೀವಿನಿ ತಾಲ್ಲೂಕು ಅಭಿಯಾನ ನಿರ್ವಹಣಾ ಘಟಕ ಪಾವಗಡ. ಇವರ ವತಿಯಿಂದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಹಾಗೂ ಮಾಸಿಕ ಸಂತೆ. ಕೃಷಿ ಯಂತ್ರಧಾರೆ ಉದ್ಘಾಟನೆ. ಮತ್ತು ಸ್ವಚ್ಛ ವಾಹಿನಿ ವಾಹನಗಳ ಲೋಕರ್ಪಣೆ ಕಾರ್ಯಕ್ರಮವನ್ನು ಶಾಸಕ ವೆಂಕಟರಮಣಪ್ಪ ರವರು ಉದ್ಘಾಟಿಸಿ ಮಾತನಾಡುತ್ತಾ, ಮಹಿಳೆಯರನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲೀಕರಿಸುವ ಉದ್ದೇಶದಿಂದ ಸ್ಥಾಪನೆಗೊಂಡಿರುವ ಸಂಘಗಳೇ ಮಹಿಳಾ ಸ್ವ ಸಹಾಯ ಸಂಘಗಳು ಎಂದರು. ಮಹಿಳೆಯರು ಸ್ವಸಹಾಯ ಸಂಘಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಾವು ಆರ್ಥಿಕವಾಗಿ ಸದೃಢ ವಾಗುವುದೇ ಅಲ್ಲದೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕೆಂದು ತಿಳಿಸಿದರು

ಜಿಲ್ಲಾ ಯೋಜನಾ ನಿರ್ದೇಶಕರು ಶ್ರೀ ನರಸಿಂಹ ಮೂರ್ತಿ ರವರು ಮಾತನಾಡುತ್ತಾ, ಪಾವಗಡ ತಾಲೂಕಿನಲ್ಲಿ 1671 ಮಹಿಳಾ ಸಂಘಗಳಿದ್ದು ಇದರಲ್ಲಿ 17800 ಮಹಿಳಾ ಸದಸ್ಯರಿದ್ದಾರೆ ಈ ಸಂಘಗಳಿಗೆ ಸರ್ಕಾರದ ವತಿಯಿಂದ ಸಂಘದ ಚಟುವಟಿಕೆಗಳಿಗೆ 5 ಕೋಟಿ 83 ಲಕ್ಷ. ಹಣ ಬಿಡುಗಡೆ ಮಾಡಿದೆ ಎಂದರು. .

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿವರಾಜ್ ಮಾತನಾಡುತ್ತಾ, ಮಹಿಳಾ ಸಂಘಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು, ತಾಲೂಕು ಪಂಚಾಯಿತಿಯಿಂದ ಮಹಿಳಾ ಸಂಘಗಳಿಗೆ ಅಗತ್ಯವಾದ ಸಹಕಾರ ನೀಡುವುದಾಗಿ ತಿಳಿಸಿದರು. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಸ್ವಚ್ಛತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಮನೆ ಬಾಗಿಲಿಗೆ ಬರುವ ಕಸದ ವಾಹನಕ್ಕೆ ಕಸವನ್ನು ಹಸಿ ಕಸ ಒಣ ಕಸವನ್ನು ವಿಂಗಡಿಸಿ ಗ್ರಾಮ ಪಂಚಾಯಿತಿಯ ಸ್ವಚ್ಛತಾ ವಾಹಿನಿಯ ವಾಹನಗಳಿಗೆ ಮಹಿಳೆಯರು ತಪ್ಪದೇ ಹಾಕುವುದು ಸ್ವಚ್ಛತೆಯನ್ನು ಕಾಪಾಡಿ ಮಹಿಳೆಯರು ತಾಲೂಕಿಗೆ ಉತ್ತಮ ಹೆಸರನ್ನು ತರಬೇಕೆಂದು ತಿಳಿಸಿದರು

ಕಾರ್ಯಕ್ರಮದಲ್ಲಿ ತಹಸಿಲ್ದಾರ್ ವರದರಾಜ್. ತಾಲೂಕು ಪಂಚಾಯಿತಿ ಆಡಳಿತ ಅಧಿಕಾರಿ ಕೃಷ್ಣಮೂರ್ತಿ ತಾಲೂಕು ಪಂಚಾಯಿತಿ ಎ.ಡಿ .ರಂಗನಾಥ್, ಎಸ್.ಡಿ.ಎ ಲಕ್ಷ್ಮ ನಾಯಕ್ ಹಾಗೂ ಎಲ್ಲಾ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಸ್ವಸಹಾಯ ಸಂಘಗಳ ಅಧ್ಯಕ್ಷರು ಕಾರ್ಯದರ್ಶಿ ಸದಸ್ಯರುಗಳು ಭಾಗವಹಿಸಿದ್ದರು

ವರದಿ: ಶ್ರೀನಿವಾಸಲು