IMG 20220625 WA0060

JD(S) :ಸೋಲಾರ್ ಸಿಎಸ್ಆರ್ ಅನುದಾನ ಬಳಸಿಕೊಳ್ಳುವಲ್ಲಿ ತಾಲೂಕು ಆಡಳಿತ ಸಂಪೂರ್ಣ ವಿಫಲ….!

DISTRICT NEWS ತುಮಕೂರು

ಸೋಲಾರ್ ಸಿಎಸ್ಆರ್ ಅನುದಾನ ಬಳಸಿಕೊಳ್ಳುವಲ್ಲಿ ತಾಲೂಕು ಆಡಳಿತ ಸಂಪೂರ್ಣ ವಿಫಲ ಮಾಜಿ ಶಾಸಕ ತಿಮ್ಮರಾಯಪ್ಪ.

ಪಾವಗಡ : ಬರದ ತಾಲೂಕು ಎಂಬ ಹಣೆಪಟ್ಟಿ ಹೂಂದಿದ್ದ ಪಾವಗಡ ತಾಲೂಕಿಗೆ ಸೋಲಾರ್ ಪಾರ್ಕ್ ಬಂದಿರುವುದು ಒಂದು ರೀತಿ ಅನುಕೂಲವಾದರೆ ಮತ್ತೊಂದೆಡೆ . ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಸಕರು ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ತಾಲೂಕು ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ .
ಇಂದು ಪಟ್ಟಣದ ಬನಶಂಕರಿ ಬಡಾವಣೆಯಲ್ಲಿರುವ ಜೆಡಿಎಸ್ ನ ಕಚೇರಿಯಲ್ಲಿ ಕರೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು. ಸರ್ಕಾರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನಾಂಗಗಳ ಉನ್ನತಿಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅನುದಾನ ಸಮರ್ಕವಾಗಿ ಬಳಸುವಲ್ಲಿ ಶಾಸಕರು ವಿಫಲರಾಗಿದ್ದಾರೆ. ಎಂದು ದೂರಿದರು. ಸೋಲಾರ್ ಪಾರ್ಕ್ ಸಿ ಎಸ್ ಆರ್ ಅನುದಾನವನ್ನು ಬಳಸಿಕೊಂಡು ಗ್ರಾಮಗಳ ಸಮಗ್ರ ಅಭಿವೃದ್ಧಿ ಮಾಡಬಹುದಿತ್ತು ಎಂದರು . ರೈತರು ಸೋಲಾರ್ ಪಾರ್ಕ್ ಗೆ ಜಮೀನು ನೀಡುವಾಗ ರೈತರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿ. ಇಂದಿಗೂ ಅದು ಭರವಸೆಯಾಗಿಯೇ ಉಳಿದೆ. ಪರಿಣಾಮ ಈ ಭಾಗದ ಜನರು ಕೆಲಸಕ್ಕಾಗಿ ನಗರ ಪ್ರದೇಶಗಳಿಗೆ ಗುಳೇ ಹೋಗುವ ಪರಿಸ್ಥಿತಿ ಉಂಟಾಗಿದೆ ಎಂದರು.
ಕರೋನಾ ಕಾರಣದಿಂದಾಗಿ ಎರಡು ವರ್ಷಗಳ ಕಾಲ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳಿಗೆ ಇಂದು ಬೋಧನೆ ಮಾಡಲು ತಾಲೂಕಿನಾದ್ಯಂತ ಶಿಕ್ಷಕರ ಕೊರತೆಯಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದರು. ಸರ್ಕಾರಿ ಶಾಲೆಗಳಿಗೆ ಶಿಕ್ಷಕರನ್ನು ನಿಯೋಜಿಸದೆ, 8 ತಿಂಗಳ ಹಿಂದೆ ಶಂಕುಸ್ಥಾಪನೆ ಮಾಡಿದ ಕಾಮಗಾರಿಗಳಿಗೆ ಚಾಲನೆ ನೀಡದ ಕಾರಣ ಇತ್ತೀಚೆಗೆ ತಿರುಮಣಿಯಲ್ಲಿ ಶಾಲಾ ಕಟ್ಟಡ ಕಾಮಗಾರಿ ಶಂಕುಸ್ಥಾಪನೆ ತಡೆದು ಸಾರ್ವಜನಿಕರು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿ ಎಸ್ ಆರ್ ಅನುದಾನದಲ್ಲಿಯೇ ಶಿಕ್ಷಕರನ್ನು ನಿಯೋಜಿಸಬಹುದು, ಆದರೆ ಶಾಸಕರು, ಅಧಿಕಾರಿಗಳ ಇಚ್ಚಾ ಶಕ್ತಿ ಕೊರತೆಯಿಂದ ಸಮಸ್ಯೆಗಳು ಪರಿಹಾರವಾಗುತ್ತಿಲ್ಲ ಎಂದರು.


IMG 20220625 WA0061

ಮನೆಗಳ ಬಿಲ್ ಆಗದೆ ಬಡ ಜನತೆ ಮನೆಗಳನ್ನು ಕಟ್ಟುವುದು ಅರ್ಧಕ್ಕೆ ನಿಲ್ಲಿಸಿ ಗುಡಿಸಲುಗಳಲ್ಲಿ ವಾಸಿಸುವಂತಾಗಿದೆ. ಮಾಸಾಶನಗಳು ಸರಿಯಾಗಿ ತಲುಪುತ್ತಿಲ್ಲ. ಕಂದಾಯ ಇಲಾಖೆಯಲ್ಲಿಯೂ ಸಾಕಷ್ಟು ಲೋಪಗಳಾಗುತ್ತಿವೆ. ಪುರಸಭೆ ಮುಖ್ಯಾಧಿಕಾರಿ ಸಹಿ ನಕಲು ಮಾಡಿರೋದು ಪಟ್ಟಣ ಪಂಚಾಯಿತಿಯಲ್ಲಿರುವ ಭ್ರಷ್ಟಾಚಾರಕ್ಕೆ ಸೂಕ್ತ ನಿದರ್ಶನ ವಾಗಿದೆ ಎಂದರು. ಈ ಬಗ್ಗೆ ಜಿಲ್ಲಾಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪ ಮಾಡಿದರು.

ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಮರೆಡ್ಡಿ, ಗೌರವಾಧ್ಯಕ್ಷ ರಾಜಶೇಖರ್, ಕಾರ್ಯಾಧ್ಯಕ್ಷ ಈರಣ್ಣ, ಮಾಜಿ ಪುರಸಭೆ ಸದಸ್ಯ ದಾದಲೂರಿ, ನಾಗೇಂದ್ರಪ್ಪ, ಮಣಿ, ಗೋಪಾಲ, ಕಾವಲಗೆರೆ ರಾಮಾಂಜಿ, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಯೂನುಸ್, ಲಕ್ಷ್ಮಿನಾರಾಯಣಪ್ಪ, ಗಂಗಾಧರನಾಯ್ಡು, ನಟರಾಜು, ಉಪಸ್ಥಿತರಿದ್ದರು.

ವರದಿ: ಶ್ರೀನಿವಾಸಲು ಎ