IMG 20240415 WA0008

Karnataka : ಮೈಸೂರು – ಮೋದಿ ಕಿ ಗ್ಯಾರಂಟಿಯೇ ಬಿಜೆಪಿ ಸಂಕಲ್ಪಪತ್ರ….!

National - ಕನ್ನಡ POLATICAL STATE

ಮೋದಿ ಕಿ ಗ್ಯಾರಂಟಿಯೇ ಬಿಜೆಪಿ ಸಂಕಲ್ಪಪತ್ರ: ನರೇಂದ್ರ ಮೋದಿ

ಬೆಂಗಳೂರು: ಮೋದಿ ಕಿ ಗ್ಯಾರಂಟಿಯೇ ಬಿಜೆಪಿ ಸಂಕಲ್ಪಪತ್ರ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಕಟಿಸಿದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಮೈಸೂರಿನಲ್ಲಿ ‘ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ’ ಸಂಬಂಧಿತ ಬೃಹತ್ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಮೂಲಕ ಪ್ರಧಾನಿ ಮೋದಿಯವರು ಮೈಸೂರಿನಲ್ಲಿ ಸಂಜೆ ಮಹಾರಾಜ ಕಾಲೇಜು ಮೈದಾನದಲ್ಲಿ ಏರ್ಪಡಿಸಿರುವ ಬಹಿರಂಗ ಸಮಾವೇಶದಲ್ಲಿ ಎನ್‍ಡಿಎ ಕೂಟದ ಚುನಾವಣಾ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.

3 ಕೋಟಿ ಹೊಸ ಮನೆ ನಿರ್ಮಾಣ, ಬಡವರಿಗೆ 5 ವರ್ಷ ಉಚಿತ ಪಡಿತರ, 70 ವರ್ಷಕ್ಕಿಂತ ಹೆಚ್ಚಿನ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ, 3 ಕೋಟಿ ಮಹಿಳೆಯರನ್ನು ಲಕ್ಷಾಧಿಪತಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಭವಿಷ್ಯದ ಬದಲಾವಣೆಯನ್ನು ಸಂಕಲ್ಪಪತ್ರವು ಅನಾವರಣಗೊಳಿಸಿದೆ.

IMG 20240415 WA0009

ಭವಿಷ್ಯದ ಬದಲಾವಣೆಯನ್ನು ಸಂಕಲ್ಪಪತ್ರವು ಅನಾವರಣಗೊಳಿಸಿದೆ. ಎಕ್ಸ್‍ಪ್ರೆಸ್ ವೇ, ವಾಟರ್ ವೇ, ಏರ್ ವೇ ಮೂಲಕ ಭಾರತವು ವಿಶ್ವದ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ. ಭಾರತವು ಹಿಂದೆ ತಂತ್ರಜ್ಞಾನಕ್ಕಾಗಿ ಬೇರೆ ದೇಶದತ್ತ ನೋಡುತ್ತಿತ್ತು. ಈಗ ಚಂದ್ರಯಾನವೂ ನಮ್ಮಿಂದ ನಡೆದಿದೆ. ಕಡಿಮೆ ದರದಲ್ಲಿ ಔಷಧಿ, ಕಡಿಮೆ ದರದಲ್ಲಿ ವಾಹನ ಉತ್ಪಾದನೆ ಮಾಡಲಿದ್ದೇವೆ ಎಂದು ಭರವಸೆಯಿಂದ ನುಡಿದರು.
ಕನೀಡಿದರುಕವು ದೇಶದ ಐಟಿ, ತಂತ್ರಜ್ಞಾನದ ಹಬ್ ಆಗಿದೆ. ಇಲ್ಲಿನ ಯುವಕರಿಗೆ ಇದೆಲ್ಲದರ ಗರಿಷ್ಠ ಲಾಭ ಲಭಿಸಲಿದೆ ಎಂದು ಹೇಳಿದರು.

ಕನ್ನಡಕ್ಕೆ ಮಾನ್ಯತೆ ಲಭಿಸಲಿದೆ. ವಿಕಾಸದ ಗ್ಯಾರಂಟಿಯನ್ನೂ ನಾವು ಕೊಟ್ಟಿದ್ದೇವೆ. ಮೈಸೂರು, ಹಂಪಿ, ಬಾದಾಮಿ ಮತ್ತಿತರ ಪ್ರದೇಶಗಳಿಗೆ ಪ್ರವಾಸೋದ್ಯಮದ ಕೇಂದ್ರಗಳಾಗಿ ಅಭಿವೃದ್ಧಿ ಹೊಂದಲಿವೆ ಎಂದು ವಿವರಿಸಿದರು.

ಇದೆಲ್ಲವೂ ಆಗಲು ಬಿಜೆಪಿ- ಎನ್‍ಡಿಎ ಅನಿವಾರ್ಯ. ಎನ್‍ಡಿಎ ಹೇಳಿದ್ದನ್ನು ಮಾಡುತ್ತದೆ. 370ನೇ ವಿಧಿ ರದ್ದು, ತ್ರಿವಳಿ ತಲಾಖ್ ರದ್ದು, ಮಹಿಳಾ ಮೀಸಲಾತಿ, ರಾಮಮಂದಿರ ನಿರ್ಮಾಣ- ಇವನ್ನು ನಾವು ಹೇಳಿದ್ದಲ್ಲದೆ ಮಾಡಿ ತೋರಿಸಿದ್ದೇವೆ ಎಂದು ತಿಳಿಸಿದರು. ನಿಮ್ಮ ಒಂದು ಮತದಿಂದ ಮೋದಿಕಿ ಗ್ಯಾರಂಟಿ ಶಕ್ತಿ ವೃದ್ಧಿಸುತ್ತದೆ ಎಂದು ತಿಳಿಸಿದರು.

ದೇವೇಗೌಡರು, ಯಡಿಯೂರಪ್ಪಜೀ, ಕುಮಾರಸ್ವಾಮಿಯವರ ನಾಯಕತ್ವ ನಮ್ಮ ಜೊತೆಗಿದೆ ಎಂದರಲ್ಲದೆ, ಸುತ್ತೂರು ಮಠದ ಸೇವೆಗೆ, ಕವಿ ಕುವೆಂಪು, ಮಾರ್ಷಲ್ ಕಾರಿಯಪ್ಪ ಅವರನ್ನು ನೆನಪಿಸಿಕೊಂಡರು. ರಾಷ್ಟ್ರಸೇವೆಗಾಗಿ ತಮ್ಮ ಮಕ್ಕಳನ್ನು ಕಳಿಸುವ ಕನಸು ಕಾಣುವವರ ನೆಲವಿದು. ಆದರೆ, ಕಾಂಗ್ರೆಸ್ ಪಕ್ಷವು ತುಕ್ಡೇ ತುಕ್ಡೆ ಗ್ಯಾಂಗಿನ ಭಾಗವಾಗಿದೆ. ದೇಶದ ವಿಭಜನೆ ಮಾಡುವ ಪಕ್ಷವದು. ಭಾರತ ವಿರೋಧಿ ಮಾತನಾಡುವವರಿಗೆ ಕಾಂಗ್ರೆಸ್ ಟಿಕೆಟ್ ಕೊಡುತ್ತದೆ ಎಂದು ಟೀಕಿಸಿದರು.

ಕಾಂಗ್ರೆಸ್ ಚುನಾವಣಾ ರ್ಯಾಲಿಯಲ್ಲಿ ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿದ್ದನ್ನು ಆಕ್ಷೇಪಿಸಲಾಗಿತ್ತು. ಇಂಥ ಕಾಂಗ್ರೆಸ್ಸಿಗೆ ಮತ ಕೊಡುತ್ತೀರಾ ಎಂದು ಕೇಳಿದರು. ಕಾಂಗ್ರೆಸ್ ಪಕ್ಷ ವಂದೇ ಮಾತರಂ ವಿರೋಧಿ ಎಂದು ಅವರು ವಿವರಿಸಿದರು. ಕಾಂಗ್ರೆಸ್ ಪಕ್ಷವು ಆಡಳಿತಕ್ಕಾಗಿ ಬೆಂಕಿಯೊಡನೆ ಆಟವಾಡುತ್ತಿದೆ ಎಂದ ಅವರು, ಕಾಂಗ್ರೆಸ್ಸಿನ ನಾಯಕರು ವಿದೇಶಗಳಲ್ಲಿ ಭಾರತವನ್ನು ಟೀಕಿಸುತ್ತಾರೆ ಎಂದು ಆಕ್ಷೇಪಿಸಿದರು.

IMG 20240415 WA0004
ಸೇನೆಯ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಕ್ಕೆ ಸಾಕ್ಷಿ ಕೊಡಿ ಎಂದು ಕೇಳುವ ಮನಸ್ಥಿತಿ ಕಾಂಗ್ರೆಸ್ಸಿಗರದು. ಕರ್ನಾಟಕದಲ್ಲಿ ತುಷ್ಟೀಕರಣ ಮೇರೆಮೀರಿದೆ. ಇಂಥವರ ಕೈಯಲ್ಲಿ ದೇಶದ ಆಡಳಿತ ನೀಡಲು ಸಾಧ್ಯವೇ ಎಂದು ಕೇಳಿದರು. ಜನವರಿ 22ರಂದು ರಾಮಮಂದಿರ ಸಂಬಂಧಿತ 500 ವರ್ಷಗಳ ಕನಸು ನನಸಾಯಿತು. ಆದರೆ, ಕಾಂಗ್ರೆಸ್ಸಿನವರು, ಇಂಡಿ ಒಕ್ಕೂಟದವರು ರಾಮಮಂದಿರದ ಪ್ರಾಣಪ್ರತಿಷ್ಠೆಯನ್ನು ಕಡೆಗಣಿಸಿ ಬಹಿಷ್ಕರಿಸಿದರು. ನಮ್ಮೆಲ್ಲರ ಭಾವನೆಗೆ ಅವಮಾನ ಮಾಡಿದರು ಎಂದು ಟೀಕಿಸಿದರು.

ಮೋದಿ ಇರುವತನಕ, ಮೋದಿಗೆ ನಿಮ್ಮ ಆಶೀರ್ವಾದ ಇರುವತನಕ ಕಾಂಗ್ರೆಸ್ಸಿಗರ ದ್ವೇಷ ಭಾವನೆ ಸಫಲವಾಗುವುದಿಲ್ಲ ಎಂದು ವಿಶ್ವಾಸದಿಂದ ನುಡಿದರು. 2024ರ ಲೋಕಸಭಾ ಚುನಾವಣೆಯು 2047ರ ವಿಕಸಿತ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ. ಆದ್ದರಿಂದ, ದೇಶದ ವಿಕಾಸಕ್ಕಾಗಿ ನೀವೆಲ್ಲರೂ ಮತ ಕೊಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕದ ಮನಸ್ಸಿನಲ್ಲಿ ಮೋದಿ ಸರಕಾರ ಮತ್ತೊಮ್ಮೆ ಎಂಬ ಚಿಂತನೆ ಇದೆ ಎಂಬುದನ್ನು ಇಲ್ಲಿನ ಲಕ್ಷಾಂತರ ಜನರು ತಿಳಿಸಿದ್ದಾರೆ. ದೇವೇಗೌಡ ಅವರು ಭಾರತದ ಅತ್ಯಂತ ಹಿರಿಯ ರಾಜಕೀಯ ಮುಖಂಡ ಎಂದರಲ್ಲದೆ, ಅವರಿಗೆ ಧನ್ಯವಾದ ಸಮರ್ಪಿಸಿದರು. ನಿಮಗೆಲ್ಲ ನನ್ನ ನಮಸ್ಕಾರಗಳು ಎಂದು ಹೇಳಿ ಭಾಷಣ ಆರಂಭಿಸಿದರು. ತಾಯಿ ಚಾಮುಂಡೇಶ್ವರಿ, ತಾಯಿ ಭುವನೇಶ್ವರಿ, ತಾಯಿ ಕಾವೇರಿಯ ಆಶೀರ್ವಾದ ಪಡೆಯುವ ಅವಕಾಶ ನನಗೆ ಲಭಿಸಿದೆ. ಅವರಿಗೆ ಪ್ರಣಾಮಗಳು ಎಂದರು.

ಕರ್ನಾಟಕದ 4 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರ ಸಿಗುತ್ತಿದೆ. 4.5 ಲಕ್ಷ ಮನೆಗಳೂ ಸಿಕ್ಕಿವೆ ಎಂದ ಅವರು, ಮೈಸೂರು- ಬೆಂಗಳೂರು ಎಕ್ಸ್ಪ್ರೆಸ್ ಹೆದ್ದಾರಿ ಕುರಿತು ಪ್ರಸ್ತಾಪಿಸಿದರು. ಜಲಜೀವನ್ ಮಿಷನ್, ವಂದೇ ಭಾರತ್ ಎಕ್ಸ್‍ಪ್ರೆಸ್ ಕುರಿತು ಮಾಹಿತಿ ನೀಡಿದರು.

ಕಾಂಗ್ರೆಸ್ ಮೋಸಗಾರರ ಪಕ್ಷ. ಸಮಸ್ಯೆ ಸೃಷ್ಟಿಸುವ ಪಕ್ಷ ಎಂದು ಟೀಕಿಸಿದರು. ಕರ್ನಾಟಕವು ಕಾಂಗ್ರೆಸ್‍ಗೆ ಎಟಿಎಂ ಆಗಿದೆ. ಲೂಟಿಯಿಂದ ಕರ್ನಾಟಕದಲ್ಲಿ ಖಜಾನೆ ಖಾಲಿ ಆಗುತ್ತಿದೆ. ರೈತರಿಗೆ ಪಂಪ್‍ಸೆಟ್‍ಗೆ ವಿದ್ಯುತ್ ಕೂಡ ಸಿಗುತ್ತಿಲ್ಲ. ಸ್ಕಾಲರ್‍ಶಿಪ್ ಕೊಡುತ್ತಿಲ್ಲ. ಕಿಸಾನ್ ಸಮ್ಮಾನ್‍ನ 4 ಸಾವಿರ ಕೊಡುತ್ತಿಲ್ಲ. ಬೆಂಗಳೂರಿನಲ್ಲಿ ನೀರಿನ ಘನಘೋರ ಪರಿಸ್ಥಿತಿ ಇದೆ ಎಂದು ವಿವರಿಸಿದರು. ಇದು ಕಾಂಗ್ರೆಸ್ ಪಕ್ಷದ ಸಾಧನೆ ಎಂದು ವಿವರ ನೀಡಿದರು. ಎನ್‍ಡಿಎ ಉಮೇದ್ವಾರರನ್ನು ಗೆಲ್ಲಿಸಲು ಮನವಿ ಮಾಡಿದರು.

ಪ್ರಧಾನಿ ಮೋದಿ ಅವರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಂಸದ ಪ್ರತಾಪಸಿಂಹ, ಜೆಡಿಎಸ್ ಮುಖಂಡರಾದ ಎಚ್.ಡಿ.ರೇವಣ್ಣ, ನಿಖಿಲ್ ಕುಮಾರಸ್ವಾಮಿ ಸಹಿತ ಹಲವು ನಾಯಕರು ಪಾಲ್ಗೊಂಡಿದ್ದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮಾತನಾಡಿ, ಮೋದಿಯವರು ವಿಶ್ವದಲ್ಲಿ ಭಾರತಕ್ಕೆ ಗೌರವ ತಂದುಕೊಟ್ಟಿದ್ದಾರೆ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಬಿಡಿಎ, ನೀರಾವರಿ ಮೂಲಕ ಹಣ ಬಾಚಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡಕ್ಕೆ ಕಳಿಸಿದ್ದಾರೆ. ಈ ಮೂಲಕ ಬಿಜೆಪಿ ಸೋಲಿಸಲು ಮುಂದಾಗಿದ್ದರು ಎಂದು ಟೀಕಿಸಿದರು.

ರಾಜ್ಯವನ್ನು ಸೂರೆ ಮಾಡುವುದನ್ನು ತಪ್ಪಿಸಲು ಮೋದಿಯವರ ಜೊತೆ ಹೋಗೆಂದು ಕುಮಾರಸ್ವಾಮಿಗೆ ಅನುಮತಿ ಕೊಟ್ಟಿದ್ದೇನೆ ಎಂದು ತಿಳಿಸಿದರು. ಈಗ ರಾಜ್ಯವಾಳುವ ಇಬ್ಬರು ಪುಣ್ಯಾತ್ಮರಿಗೆ ನಮೋ ನಮಃ ಎಂದು ವ್ಯಂಗ್ಯವಾಡಿದರು. 6 ಕೋಟಿ ಜನತೆಯ ಮುಖ್ಯಮಂತ್ರಿ 150 ಕೋಟಿ ಜನರ ಪ್ರಧಾನಿ ಮೋದಿಯವರ ಬಗ್ಗೆ ಟೀಕಿಸಿದ್ದನ್ನು ಖಂಡಿಸಿದರು. 28 ಸೀಟಿನಲ್ಲೂ ಜೆಡಿಎಸ್ ಸ್ಪರ್ಧೆ ಮಾಡಿದಂತೆ ಕೆಲಸ ಮಾಡುತ್ತೇವೆ ಎಂದು ಹೇಳಿದರು. ಕನಿಷ್ಠ 24 ಸ್ಥಾನಗಳನ್ನು ಎನ್‍ಡಿಎ ಗೆದ್ದು, ನಿಮಗೆ ಸಮರ್ಪಿಸುತ್ತೇವೆ ಎಂದು ಮೋದಿಯವರಿಗೆ ಭರವಸೆ ನೀಡಿದರು. ಇಂಡಿ ಒಕ್ಕೂಟದವರು ತಪ್ಪು ತಿಳಿಯದಿರಿ. ಭಾರತ ಉಳಿಸಲು ನಾವು ಮೋದಿಯವರಿಗೆ 24 ಸ್ಥಾನ ಕೊಡಲಿದ್ದೇವೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾತನಾಡಿ, ಎಲ್ಲ 28 ಕ್ಷೇತ್ರಗಳನ್ನು ಗೆಲ್ಲಿಸಿ ಮೋದಿಜೀ ಅವರಿಗೆ ಸಮರ್ಪಿಸೋಣ ಎಂದರಲ್ಲದೆ, ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಅಡ್ರೆಸ್ ಇರೋದಿಲ್ಲ ಎಂದು ತಿಳಿಸಿದರು.

ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮಾತನಾಡಿ, ಸೌರಮಾನ ಯುಗಾದಿ ಸಂಭ್ರಮದಲ್ಲಿ ದೇಶವಿದೆ. ಜೊತೆಗೇ ಡಾ. ಅಂಬೇಡ್ಕರ್ ಅವರ ಜನ್ಮದಿನವೂ ಇಂದು ಇದೆ. ಭೀಮನ ಬಲ (ಭೀಮರಾವ್ ಅಂಬೇಡ್ಕರ್) ಭಾರತವನ್ನು ಸದಾಕಾಲ ಕಾಯಲಿದೆ. ಇದು ಜಾತಿ ಉಳಿಸುವ ಚುನಾವಣೆ ಅಲ್ಲ. ಇದು ದೇಶ ಉಳಿಸುವ ಚುನಾವಣೆ ಎಂದು ಅಭಿಪ್ರಾಯಪಟ್ಟರು.

ಒಕ್ಕಲಿಗರು ಒಡೆಯರ್ ಅವರ ಜೊತೆ ಸದಾ ನಿಂತವರು. ಕನ್ನಡವಿರೋಧಿ ಟಿಪ್ಪು ಜೊತೆ ಅವರು ನಿಂತವರಲ್ಲ ಎಂದು ಸಿದ್ದರಾಮಯ್ಯನವರಿಗೆ ತಿಳಿಸಿದರು. ಶ್ರೀನಿವಾಸ ಪ್ರಸಾದ್ ಅವರು ಕಂದಾಯ ಸಚಿವರಾಗಿದ್ದಾಗ ಹೈಕಮಾಂಡಿಗೆ ಕಪ್ಪ ಕೊಡಲಿಲ್ಲ ಎಂದು ಸಚಿವ ಸ್ಥಾನದಿಂದ ವಜಾ ಮಾಡಿದ್ದನ್ನು ನೆನಪಿಸಿದರು.

IMG 20240415 WA0003
ಮೈತ್ರಿ ಅಭ್ಯರ್ಥಿಗಳ ಪೈಕಿ ಮೈಸೂರು-ಕೊಡಗು ಕ್ಷೇತ್ರದ ಯದುವೀರ್ ಒಡೆಯರ್ ಅವರು ಮಾತನಾಡಿ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಿಮ್ಮೆಲ್ಲರ ಮನೆ ಮಗನಾಗಿ ಕೆಲಸ ಮಾಡುವೆ ಎಂದು ತಿಳಿಸಿದರು. ಕಾರ್ಯಕರ್ತರ ಜೊತೆ ಕಾರ್ಯಕರ್ತನಾಗಿರುವೆ ಎಂದು ಹೇಳಿದರು.

ಪ್ರಧಾನಿಯವರ ಜೊತೆ ಭಾರತಮಾತೆಯ ತೇರನ್ನು ಎಳೆಯಲು ಅವಕಾಶ ಕೊಡಿ ಎಂದು ಮನವಿ ಮಾಡಿದರು. ಬಿಜೆಪಿ- ಜೆಡಿಎಸ್ ಕನ್ನಡ ಪರಂಪರೆಯನ್ನು ಎತ್ತಿ ಹಿಡಿದ ಪಕ್ಷಗಳು ಎಂದು ನುಡಿದರು.
ಶಾಸಕ ಜಿ.ಟಿ.ದೇವೇಗೌಡ ಅವರು ಮಾತನಾಡಿ, ಮೋದಿಯವರ ಅಲೆ ಬಿರುಗಾಳಿಯಿಂತೆ ಬೀಸುತ್ತಿದೆ. ಎರಡೂ ಪಕ್ಷದವರು ನಿರಂತರ ಶ್ರಮಿಸಿ ಈ ಅಲೆಯನ್ನು ಮತವಾಗಿ ಪರಿವರ್ತಿಸಬೇಕು ಎಂದು ಮನವಿ ಮಾಡಿದರು. ಕಾಂಗ್ರೆಸ್ ಪಕ್ಷವು ಆಡಳಿತದ ದುರುಪಯೋಗ ಮಾಡುತ್ತಿದೆ. ನಾವೆಲ್ಲರೂ ಎಚ್ಚರದಿಂದ ಇರಬೇಕು ಎಂದೂ ತಿಳಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಏರುವುದೇ ತಿರುಕನ ಕನಸು. ಕಾಂಗ್ರೆಸ್ ಈ ಬಾರಿ ದೂಳೀಪಟ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಎಂದರೆ ಭಯೋತ್ಪಾದಕರ ಉತ್ಪಾದನೆಯ ಗ್ಯಾರಂಟಿ ಕೂಡ ಎಂದು ತಿಳಿಸಿದರು. 28ಕ್ಕೆ 28 ಕ್ಷೇತ್ರ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು

.
ಮಾಜಿ ಸಂಸದರಾದ ಸುಮಲತಾ ಅಂಬರೀóಷ್ ಅವರು ಮಾತನಾಡಿ, ಬಿಜೆಪಿ- ಮೋದಿಜೀ- ಎನ್‍ಡಿಎ ಪರವಾಗಿ ಆಶೀರ್ವಾದ ಬಯಸುತ್ತಿದ್ದೇನೆ. ಇದೊಂದು ಹೆಮ್ಮೆಯ ವಿಷಯ ಎಂದರು. ಭಾರತವನ್ನು ವಿಶ್ವಮಾನ್ಯವಾಗಿ ಪ್ರಗತಿಯ ಹಾದಿಯಲ್ಲಿ ನಿಲ್ಲಿಸಲು ಪ್ರಧಾನಿ ಮೋದಿಜೀ ಅವರು ಶ್ರಮಿಸುತ್ತಿದ್ದಾರೆ. ಪಿಕ್ಚರ್ ಅಭೀ ಬಾಕಿ ಹೈ ಎಂದು ಮೋದಿಜೀ ಹೇಳಿದ್ದಾರೆ. ದೇಶವನ್ನು 2047ರ ವೇಳೆಗೆ ವಿಕಸಿತ ಭಾರತ ಮಾಡಲು ಮತ್ತು ನಂಬರ್ 1 ದೇಶವಾಗಿ ಪರಿವರ್ತಿಸುವ ಕನಸಿಗೆ ನಾವೆಲ್ಲರೂ ಆಶೀರ್ವಾದ ಮಾಡೋಣ ಎಂದು ವಿನಂತಿಸಿದರು.

ಹಾಸನದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಚಾಮರಾಜನಗರದ ಅಭ್ಯರ್ಥಿ ಬಾಲರಾಜ್ ಅವರೂ ಭಾಗವಹಿಸಿದ್ದರು. ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆ ಸಿದ್ಧ ಪಡಿಸÀಲಾಗಿತ್ತು. ನಾಲ್ಕು ಕ್ಷೇತ್ರಗಳಿಂದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಲಕ್ಷಾಂತರ ಕಾರ್ಯಕರ್ತರು ಭಾಗವಹಿಸಿದ್ದರು.

ಮೈಸೂರು-ಕೊಡಗು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಕ್ಷೇತ್ರಗಳನ್ನು ಒಳಗೊಂಡ ಬಹಿರಂಗ ಸಮಾವೇಶ ಇದಾಗಿತ್ತು. ರಾಮನ ವಿಗ್ರಹ ನೀಡುವ ಮೂಲಕ ಪ್ರಧಾನಿಯವರನ್ನು ಸ್ವಾಗತಿಸಲಾಯಿತು. ಮೈಸೂರು ಪೇಟ – ಶಲ್ಯ ತೊಡಿಸಿ ಆತ್ಮೀಯ ಸ್ವಾಗತ ಕೋರಲಾಯಿತು. ಲೋಕಸಭಾ ಅಭ್ಯರ್ಥಿಗಳು ಡಾ.ಅಂಬೇಡ್ಕರ್ ಅವರ ಭಾವಚಿತ್ರವನ್ನು ಪ್ರಧಾನಿಯವರಿಗೆ ಉಡುಗೊರೆಯಾಗಿ ನೀಡಿದ

ಮೈಸೂರು
ಮೈಸೂರು ಬಹಿರಂಗ ಸಭೆ