ಶಿಕ್ಷಕರ ಮೇಲೆ ಹೆಜ್ಜೇನು ದಾಳಿ
ಮಧುಗಿರಿ : ರಾಜ್ಯದಾದ್ಯಂತ ಎಸ್ ಎಸ್ ಎಲ್ ಸಿ ಮೌಲ್ಯಮಾಪನ ಕಾರ್ಯ ಪ್ರಾರಂಭವಾಗಿದ್ದು .ಪಟ್ಟಣದ ಚೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ವಿಷಯದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಡೆಯುತ್ತಿದ್ದು.
ಈ ಪರೀಕ್ಷಾ ಕೇಂದ್ರದಲ್ಲಿ ಸುಮಾರು 180 ಕ್ಕೂ ಹೆಚ್ಚಿನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು.ಗು ರುವಾರ ಮಧ್ಯಾಹ್ನದ ವೇಳೆಯಲ್ಲಿ ಚೇತನ ಶಾಲೆಯ ಮೂರನೇ ಮಹಡಿಯಲ್ಲಿದ್ದ ಹೆಜ್ಜೇನು ನೊಣಗಳು ಶಿಕ್ಷಕರ ಮೇಲೆ ಒಮ್ಮೆಲೆ ದಿಢೀರ್ ದಾಳಿ ನಡೆಸಿವೆ.ಇದರಿಂದಾಗಿ ಕಂಗಾಲಾದ ಶಿಕ್ಷಕರು ದಿಕ್ಕಾಪಾಲಾಗಿ ಓಡಿದ್ದಾರೆ.ಹೆಜ್ಜೇನು ನೊಣಗಳು ಐದಾರು ಶಿಕ್ಷಕರ ಮೇಲೆ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ಪಾವಗಡದ ಮಂಜುನಾಥ್, ರಾಜ ಬಾಬು, ಮಾರುತೇಶ್ ಎಂಬ ಶಿಕ್ಷಕರು ಹೆಚ್ಚೇನು ನೊಣಗಳ ದಾಳಿಗೆ ಸಿಕ್ಕಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗುರುವಾರ ಸಂಜೆ ಇಬ್ಬರು ಶಿಕ್ಷಕರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು. ಹೆಜ್ಜೇನುಗಳಿಂದ ಗಂಭೀರವಾಗಿ ಕಡಿತಕ್ಕೆ ಒಳಗಾಗಿದ್ದ
ಶಿಕ್ಷಕ ಮಂಜುನಾಥ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಷಯ ತಿಳಿದ ನಂತರ ಉಪ ನಿರ್ದೇಶಕರಾದ ಮಂಜುನಾಥ್, ವಿಷಯ ಪರಿವೀಕ್ಷಕರಾದ ಮೋಹನ್ ಕುಮಾರ್, ಇ . ಓ ಶಾಂತಲಾ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಶಿಕ್ಷಕರ ಆರೋಗ್ಯ ವಿಚಾರಿಸಿದ್ದರು..
DDPI ನಿರ್ಲಕ್ಷ್ಯ :
ಮೌಲ್ಯಮಾಪನ ಕೇಂದ್ರಗಳಿಗೆ ಭೇಟಿ ನೀಡಿದ ಉಪನಿರ್ದೇಶಕರು. ಹಾಗೂ ಅಧಿಕಾರಿಗಳು ಪಟ್ಟಣದಲ್ಲಿ ವಿಷಯವಾರು ಆರು ಮೌಲ್ಯಮಾಪನ ಕೇಂದ್ರಗಳಿದ್ದು ಅಲ್ಲಿನ ಸ್ಥತಿ ಗತಿಗಳ ಬಗ್ಗೆ ಮೊದಲು ಪರಿಶೀಲಿಸಬೇಕಾದ ಉಪನಿರ್ದೇಶಕ ಮಂಜುನಾಥ್ ಅವರು ಎಲ್ಲಿ ಹೋಗಿದ್ದರು…? ಶಿಕ್ಷಕರ ಬಗ್ಗೆ ಇವರಿಗೆ ಕಾಳಜಿ ಇಲ್ಲವಾ…?
ಪ್ರತಿಯೊಂದು ಮೌಲ್ಯಮಾಪನ ಕೇಂದ್ರಕ್ಕೆ ಭೇಟಿ ನೀಡಿ. ಸ್ಥಳ ಪರಿಶೀಲನೆ ನಡೆಸಿ ಶಿಕ್ಷಕರಿಗೆ ಅನುಕೂಲ ಮಾಡಿಕೊಡಬೇಕಾದ ಜವಾಬ್ದಾರಿ ಶಿಕ್ಷಣ ಇಲಾಖೆಯ ಅಧಿಕಾರಿಗಳಾಗಿರುತ್ತದೆ.
ಅದೇ ರೀತಿ ಪರಿಶೀಲಿಸಿದ್ದರೆ ಇಂದು ಚೇತನ ಶಾಲೆಯಲ್ಲಿ ಸಮಸ್ಯೆ ಉಂಟಾಗುತ್ತಿರಲಿಲ್ಲ ಎಂಬುದು ಶಿಕ್ಷಕರ ವಲಯದಲ್ಲಿ ಚರ್ಚನೀಯ ಅಂಶವಾಗಿದೆ.
ಈಗಲಾದರೂ ಚೇತನ ಶಾಲೆಯಲ್ಲಿರುವ ಹೆಜ್ಜೇನು ನೊಣಗಳನ್ನು ತೆರವುಗೊಳಿಸಿ. ಮುಂದೆ ಆಗುವ ಅನಾಹುತಗಳನ್ನು ತಪ್ಪಿಸ ಬೇಕೆಂಬುದು ಶಿಕ್ಷಕರ ಅಳಲಾಗಿದೆ..