ಗಣಿತ ವಿಷಯಕ್ಕೆ ಶ್ರೀನಿವಾಸ ರಾಮಾನುಜನ್ ರವರ ಕೊಡುಗೆ ಅಪಾರ.
ಪಾವಗಡ : ಶಾಲೆಯಲ್ಲಿ ಮಕ್ಕಳು ಗಣಿತ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಬೇಕು, ಗಣಿತ ವಿಷಯವು ವಿದ್ಯಾರ್ಥಿಗಳ ಪಾಲಿಗೆ ಕಬ್ಬಿಣದ ಕಡಲೆಯಾಗಬಾರದೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಿ ತಿಳಿಸಿದರು.
ತಾಲ್ಲೂಕಿನ ಪಳವಳ್ಳಿ ಗ್ರಾಮದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಏರ್ಪಡಿಸಿದ್ದ
ರಾಷ್ಟ್ರೀಯ ಗಣಿತ ದಿನಾಚರಣೆ ಮತ್ತು ಗಣಿತ ವಿಷಯದ ಕಾರ್ಯಾಗಾರ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಣಿತ ವಿಷಯವೆಂದರೆ ಕೆಲವು ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆ, ಇನ್ನು ಕೆಲವರಿಗೆ ಕಬ್ಬಿನ ಜಲ್ಲೆ ಯಾವುದೇ ವಿಷಯವನ್ನಾದರೂ ಸಹ ನಾವು ಆಸಕ್ತಿಯಿಂದ ಅಧ್ಯಯನ ಮಾಡಿದರೆ ಅದು ನಮಗೆ ಸುಲಭವಾಗಿ ಅರ್ಥವಾಗುತ್ತದೆ ಎಂದರು. ಗಣಿತವನ್ನು ಚೆನ್ನಾಗಿ ಕಲಿತರೆ ನಮ್ಮ ದೈನಂದಿನ ವ್ಯವಹಾರಗಳಿಗೆ ಹೆಚ್ಚು ಅನುಕೂಲವೆಂದರು.
ಕಾರ್ಯಕ್ರಮ ಉದ್ದೇಶಿಸಿ ಬಿ ಆರ್ ಸಿ ಜಿ ವೆಂಕಟೇಶ್ ಮಾತನಾಡಿ,
ಶ್ರೀನಿವಾಸ ರಾಮಾನುಜನ್ ಅವರ ಹುಟ್ಟುಹಬ್ಬದ ದಿನವನ್ನು ನೆನಪಿಸಿಕೊಳ್ಳುವುದಕ್ಕಾಗಿ ಹಾಗೂ
ನಮ್ಮೆಲ್ಲರ ಬದುಕಿನಲ್ಲಿ ಗಣಿತದ ಮಹತ್ವವನ್ನು ಸಾರುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.ಎಂದರು..
ಕಾರ್ಯಕ್ರಮದಲ್ಲಿ DIET ಉಪನ್ಯಾಸಕರಾದ ಶ್ರೀ ನವೀನ್ ಕುಮಾರ್, ಶ್ರೀ ಮಂಜುನಾಥ್ , ಶ್ರೀ ದಿನೇಶ್ , ಪ್ರೌಢಶಾಲಾ ಸಹಶಿಕ್ಷಕರ ಸಂಘ ಪಾವಗಡ ತಾಲ್ಲೂಕಿನ ಅಧ್ಯಕ್ಷರಾದ ಶ್ರೀ ಶ್ರೀಕೃಷ್ಣ , ಪಾವಗಡ ತಾಲೂಕು ಗಣಿತ ವಿಷಯ ಶಿಕ್ಷಕರ ವೇದಿಕೆಯ ಅಧ್ಯಕ್ಷರಾದ ಶ್ರೀ ರಘು , ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಯತಿ ಕುಮಾರ್.ಉಪಸ್ಥಿತಿ ವಹಿಸಿದ್ದರು.
ವರದಿ. ಶ್ರೀನಿವಾಸಲು A