IMG 20221026 WA0046

ಮಧುಗಿರಿ :ಮಲ್ಲಿಕಾರ್ಜುನ ಖರ್ಗೆಯವರ ಪದಗ್ರಹಣ- ಸಂಭ್ರಮ…!

DISTRICT NEWS ತುಮಕೂರು

ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಎಂ ಮಲ್ಲಿಕಾರ್ಜುನ ಖರ್ಗೆಯವರು ಪದಗ್ರಹಣ- ಸಂಭ್ರಮ

ಮಧುಗಿರಿ ತಾಲೂಕಿನ ಚಲವಾದಿ ಮಹಾಸಭಾ.ರಿ ಜನಾಂಗದ ಸಮುದಾಯದ ವತಿಯಿಂದ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ಎಂ ಮಲ್ಲಿಕಾರ್ಜುನ ಖರ್ಗೆಯವರಿಗೆ ಅಭಿನಂದನೆಗಳು.

ಮಧುಗಿರಿ ತಾಲೂಕಿನ ಚಲವಾದಿ ಮಹಾಸಭಾ ವತಿಯಿಂದ ಇಂದು ಪಟ್ಟಣದ ಡಾ” ಬಿ.ಆರ್ .ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಮಾಜಿ ಭೂ ಸೇನಾ ನಿಗಮದ ಉಪಾಧ್ಯಕ್ಷರಾದ ಏನ್ ಲಕ್ಷ್ಮೀ ನರಸಯ್ಯನವರು ಧೀಮಂತ ನಾಯಕ ಎಂ ಮಲ್ಲಿಕಾರ್ಜುನ ಖರ್ಗೆಯವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿರುವ ಈ ಸುಸಂದರ್ಭದಲ್ಲಿ ನಮಗೆ ಈ ಮೂರು ದಿನಗಳ ಕಾಲ ಸಂಭ್ರಮ ಆಚರಣೆ ಮಾಡಲಾಗುತ್ತಿದೆ ನಮಗೂ ಕೂಡ ಅದೇ ಸಂಭ್ರಮವಿದೆ ನಮ್ಮ ಜನಾಂಗದ ನಾಯಕ ಹಿರಿಯ ಅನುಭವಿ ರಾಜಕಾರಣಿ ನಮ್ಮ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಸಂಸ್ಥೆಯಿಂದ ಮತ್ತು ಡಾಕ್ಟರ್ ಬಿ ಆರ್. ಅಂಬೇಡ್ಕರ್ ಅವರ ಆಶೀರ್ವಾದದಿಂದ ಬೆಳೆದು ಬಂದಂತಹ ವ್ಯಕ್ತಿ ನಮ್ಮ ಭಾರತ ದೇಶದ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಪ್ರಮಾಣವಚನ ಸ್ವೀಕಾರ ಮಾಡಿರುವುದು ತುಂಬಾ ಸಂತೋಷವಾಗಿದೆ.

ಮಲ್ಲಿಕಾರ್ಜುನ ಖರ್ಗೆಯವರಿಗೆ ಪ್ರಪ್ರಥಮವಾಗಿ ದೇವರು ಒಳ್ಳೆಯದು ಮಾಡಲಿ ಅವರಿಂದ ಪಕ್ಷ ಅಭಿವೃದ್ಧಿ ಪಥದಿಂದ ಕೊಂಡೆಯಲಿ ನಮ್ಮ ಜನಾಂಗದ ಪರವಾಗಿ ಮತ್ತು ಸಮಾಜದ ಪರವಾಗಿ ಅವರು ಇನ್ನಷ್ಟು ಹೆಚ್ಚು ಕೆಲಸ ಮಾಡಲಿ ಎಂದು ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆಂದು ಹೇಳಿದರು.

ಸುವರ್ಣಮಖಿ ವಿದ್ಯಾ ಸಂಸ್ಥೆಯಕಾರ್ಯದರ್ಶಿಯಾದ ಆರ್‌.ಕೆ ಧ್ರುವಕುಮಾರ್ ಮಾತನಾಡಿ ನಾನು ಸಹ ಜಿಲ್ಲಾ ಕಾಂಗ್ರೆಸ್ಸಿನ ಪರಿಶಿಷ್ಟ ಜಾತಿ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ ಎಂ . ಮಲ್ಲಿಕಾರ್ಜುನ ಖರ್ಗೆಯವರು ಸತತವಾಗಿ 50 ವರ್ಷಗಳ ಕಾಲ ಬಹುತೇಕ ಚುನಾವಣೆಗಳಲ್ಲಿ ಸ್ಪರ್ಧೆ ಮಾಡಿದ್ದಾರೆ ಬಹುಶ ಒಂದು ಚುನಾವಣೆಯಲ್ಲಿ ಮಾತ್ರ ಅವರು ಸೋತಿರಬಹುದು ಇನ್ನು ಎಲ್ಲಾ ಚುನಾವಣೆಗಳಲ್ಲಿ ಸಹ ಅವರು ಜಯಗಳಿಸಿದ್ದಾರೆ ಪಕ್ಷ ಸಂಕಷ್ಟದಲ್ಲೇ ಇರಲಿ, ಉನ್ನತ ಸ್ಥಿತಿಯಲ್ಲಿ ಇರಲಿ ಎಲ್ಲಾ ಸಂದರ್ಭಗಳಲ್ಲಿಯೂ ಸಹ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತು ಎಲ್ಲಾ ರೀತಿಯ ಸಹಕರಿಸಿ ಕೊಟ್ಟಿದ್ದಾರೆ ಪಕ್ಷಕ್ಕೆ ದ್ರೋಹ ಮಾಡದೆ ಪ್ರಾರಂಭದಿಂದಲೂ ಅವರು ಪಕ್ಷಕ್ಕೆ ದುಡಿದುಕೊಂಡು ಬಂದಿದ್ದಾರೆ ಇಂದು ಅವರನ್ನು ಪಕ್ಷ ನಿಷ್ಠೆ ಯನ್ನುಗುರುತಿಸಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಅವರನ್ನು ಗುರುತಿಸಿ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕೊಟ್ಟಿರುವುದು ನಮ್ಮ ಜನಾಂಗಕ್ಕೆ ತುಂಬಾ ಸಂತೋಷವಾಗಿದೆ ಅದೇ ರೀತಿ ನಮ್ಮ ಸಮುದಾಯದವರು ಅಲ್ಲ ದಲಿತ ಸಮುದಾಯಕ್ಕೂ ನಮ್ಮ ದೇಶದಲ್ಲಿ ಸಿಕ್ಕಿರುವಂತಹ ಕೊಡುಗೆ ಅದೇ ರೀತಿ ಎಂ ಮಲ್ಲಿಕಾರ್ಜುನ ಖರ್ಗೆಅವರು ಎಲ್ಲಾ ಸಮುದಾಯದವರನ್ನು ಒಟ್ಟಾಗಿ ಕರೆದುಕೊಂಡು ಹೋಗುವ ಅವಕಾಶ ಸಿಕ್ಕಿದೆ ಮುಂದೆಯೂ ಸಹ ಪ್ರಧಾನಿ ಪ್ರಧಾನಿಯಾಗುವ ಅವಕಾಶಗಳು ಹೆಚ್ಚಾಗಿವೆ ಆದ್ದರಿಂದ ಅಧ್ಯಕ್ಷರಾಗಿ ಆಯ್ಕೆಯಾಗಲು ಸಹಕರಿಸಿದ ಎಲ್ಲಾ ಕಾಂಗ್ರೆಸ್ ಮುಖಂಡರಿಗೂ ಸಂಸತ್ ಸದಸ್ಯರಿಗೂ ಹಾಗೂ ನಮ್ಮ ಜಿಲ್ಲೆಯ ಪ್ರಭಾವಿ ನಾಯಕರಾದ ಡಾ. ಜಿ ಪರಮೇಶ್ವರ್ ಅವರಿಗೆ ಕೆ.ಎನ.ರಾಜಣ್ಣನವರಿಗೂ ಅವರೆಲ್ಲರಿಗೂ ಕೂಡ ಒಳ್ಳೆಯದಾಗಲಿ ಎಂದು ಅಭಿನಂದಿಸುತ್ತೇನೆ ಎಂದರು.

ದಬ್ಬೇಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷಣಿಯಾದ ಭಾರ್ತಿ ಸಿದ್ದೇಶ್ ಮಾತನಾಡಿ ಎಂ ಮಲ್ಲಿಕಾರ್ಜುನ ಖರ್ಗೆಯವರು ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ ಅವರಿಗೆ ಇನ್ನೂ ಮುಂದಿನ ದಿನಗಳಲ್ಲಿ ಹೆಚ್ಚಿನ ಅಧಿಕಾರ ಸಿಗಲಿ ಎಂದು ಈ ಸಂದರ್ಭದಲ್ಲಿ ಶುಭ ಕೋರುತ್ತೇನೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಭೂಸೇನ ನಿಗಮದ ಉಪಾಧ್ಯಕ್ಷರಾದ ಎನ್ ಲಕ್ಷ್ಮಿ ನರಸಯ್ಯ ತಾಲ್ಲೂಕು ಚಲವಾದಿ ಮಹಾಸಭಾ ಅಧ್ಯಕ್ಷರಾದ ಕೆ.ವಿ ವೆಂಕಟೇಶ್ .ಆರ್ ಕೆ ಧ್ರುವ ಕುಮಾರ್. ರೋಟರಿ ಕ್ಲಬ್ ಮಾಜಿ ಅಧ್ಯಕ್ಷರಾದ ಶಿವಲಿಂಗಪ್ಪ. ಗ್ರಾಮ ಪಂಚಾಯತಿ ಅಧ್ಯಕ್ಷಣಿಯಾದ ಭಾರತಿ ಸಿದ್ದೇಶ್. ರಾಜಗೋಪಾಲ್ ಗ್ರಾಮ ಪಂಚಾಯತಿ ಸದಸ್ಯರು ಮಿಡಿಗೇಶಿ, ಕನ್ನಡಪ್ರಭ ವರದಿಗಾರರಾದ ವೈ ಸೋಮಶೇಖರ್ .ಪತ್ರಕರ್ತರಾದ ಲಕ್ಷ್ಮಿ ಪತಿ. ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ದೇವರಾಜು. ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಆಚೇನಹಳ್ಳಿ ಗೋಪಾಲ್. ಮಾರುತಿ ಬಿಜವಾರ.ಮುತ್ಯಾಲಪ್ಪ. ನಿವೃತ್ತ ನೌಕರರಾದ ಆರ್ ನರಸಿಂಹಯ್ಯ .ಲಿಂಗೇನಹಳ್ಳಿನಾರಾಯಣಪ್ಪ. ಹನುಮಂತರಾಯಪ್ಪ ಬೆನಕನಹಳ್ಳಿ ಜಡೆಗೊಂಡನಹಳ್ಳಿ ನರಸಿಂಹಯ್ಯ. ಇನ್ನೂ ಮುಂತಾದವರು ಹಾಜರಿದ್ದರು.

ವರದಿ ಲಕ್ಷ್ಮಿಪತಿ ದೊಡ್ಡ ಯಲ್ಕೂರು