ಕೊಲೆ ಮಾಡಿ ಎರಡು ವರ್ಷಗಳಿಂದ ನಾಪತ್ತೆಯಾಗಿದ್ದ ಅಪರಾಧಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ತುಮಕೂರು ಜಿಲ್ಲಾ ಪೊಲೀಸರು…..
ಮಧುಗಿರಿ ತಾಲೂಕು ಐ.ಡಿ. ಹಳ್ಳಿ ಹೋಬಳಿ ಹೊಸ ಇಟಕಲೋಟಿ ಗ್ರಾಮದ ಆರೋಪಿ ನರಸಿಂಹಮೂರ್ತಿ ಬಿನ್ ನರಸಿಂಹಯ್ಯ 31 ವರ್ಷ 2020ರ ಸಾಲಿನಲ್ಲಿ ತನ್ನ ಅಕ್ಕನ ಮಗಳಾದ ಅಪ್ರಾಪ್ತ ವಯಸ್ಸಿನ 16 ವರ್ಷ ವಯಸ್ಸುಳ್ಳ ಗಾಯಿತ್ರಿ ಎಂಬುವರನ್ನು ಮದುವೆಯಾಗಿ ಆಕೆಯ ಮೇಲೆ ಅನುಮಾನ ಪಟ್ಟು. ತನ್ನ ತಮ್ಮನಾದ ಮಂಜುನಾಥ ಎಂಬುವನ ಜೊತೆ ಸೇರಿಕೊಂಡು ಕೊಲೆಮಾಡಿರುತ್ತಾರೆ .ಯಾರಿಗೂ ಗೊತ್ತಾಗಬಾರದೆಂದು ತನ್ನ ವಾಸದ ಮನೆಯಲ್ಲಿಯೇ ಮಣ್ಣಿನಲ್ಲಿ ಮುಚ್ಚಿ ಅದರ ಮೇಲೆ ಕಡಪ ಕಲ್ಲುಗಳನ್ನು ಹಾಕಿಮುಚ್ಚಿ ಅದರ ಮೇಲೆ ಮಂಚ ಹಾಕಿ ಮಂಚದ ಕೆಳಗೆ ದವಸ ಧಾನ್ಯಗಳನ್ನು ಹಾಗೂ ಹಳೆಯ ಸಾಮಾನುಗಳನ್ನು ಇಟ್ಟು ಕೊಲೆ ಮಾಡಿರುವುದನ್ನು ಮರೆಮಾಚಲು ಒಂದು ವಾರಗಳ ಕಾಲ ಅದೇ ಮನೆಯಲ್ಲಿ ವಾಸವಾಗಿದ್ದು ನಂತರ ಮೃತೆ ಗಾಯಿತ್ರಿಯ ಪೋಷಕರು ವಿಚಾರಿಸಲಾಗಿ ಬೆಂಗಳೂರಿನ ತನ್ನ ಅಕ್ಕನ ಮನೆಗೆ ಹೋಗಿರುವುದಾಗಿ ತಿಳಿಸಿ. ಆರೋಪಿತನು ಅಂದಿನಿಂದ ತಲೆಮರೆಸಿಕೊಂಡಿದ್ದಾನೆ.
ಸದರಿ ಪ್ರಕರಣದ ಆರೋಪಿಯನ್ನು ಪತ್ತೆಹಚ್ಚಲು ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಉದ್ದೇಶ ಟಿ.ಜೆ. ಕೆಎಸ್‌ಪಿಎಸ್ ಹಾಗೂ ಮಧುಗಿರಿ ಉಪ ವಿಭಾಗದ ಡಿವೈಎಸ್ಪಿ. ವೆಂಕಟೇಶ್ ನಾಯ್ಡು ಕೆ ಎಸ್ ಪಿ ಎಸ್. ರವರುಗಳ ಮಾರ್ಗದರ್ಶನದಲ್ಲಿ ಮಧುಗಿರಿ ವೃತ್ತದ ಸಿಪಿಐ.ಎಂ.ಎಸ್. ಸರ್ದಾರ್ ಅವರ ನೇತೃತ್ವದಲ್ಲಿ ಮಿಡಿಗೇಶಿ.ಪೊಲೀಸ್ ಠಾಣಾ ಏ. ಎಸ್ .ಐ .ಪ್ರಕಾಶ್ ಮತ್ತು ಕಳ್ಳಂಬೆಳ್ಳ ಪೊಲೀಸ್ ಠಾಣಾ ಸಿಬ್ಬಂದಿ ಪ್ರಕಾಶ್ ರವರುಗಳು ತಂಡವನ್ನು ರಚಿಸಿದ್ದು ಸದರಿ ತಂಡವು ಆರೋಪಿಯನ್ನು ಪತ್ತೆ ಮಾಡಲು ಶ್ರಮಿಸಿ, ಬೆಂಗಳೂರು ನಗರದ ಕಂಠೀರವ ಸ್ಟುಡಿಯೋ ಬಳಿ ಇರುವ ಮರಳು ಲಾರಿ ಸ್ಟ್ಯಾಂಡ್ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಸದರಿ ಪ್ರಕರಣದ ಆರೋಪಿಯನ್ನು ಬಂಧಿಸಲು ಶ್ರಮಿಸಿದ್ದ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ರಾಹುಲ್ ಕುಮಾರ್ ಶಹಪುರ್ ವಾಡ ರವರು ಅಭಿನಂದಿಸಿದ್ದಾರೆ.
ವರದಿ ಲಕ್ಷ್ಮಿಪತಿ ದೊಡ್ಡ ಯಲ್ಕೂರು