IMG 20220313 111919 scaled

ವೈ.ಎನ್ ಹೊಸಕೋಟೆ: ಗುರವಂದನಾ ಕಾರ್ಯಕ್ರಮ…!

DISTRICT NEWS ತುಮಕೂರು

ಕೃತಜ್ಞತೆ ಸಲ್ಲಿಸುವುದು ದೊಡ್ಡಗುಣ

ವೈ.ಎನ್.ಹೊಸಕೋಟೆ : ತಾನು ಪಡೆದುದಕ್ಕೆ ಕೃತಜ್ಞತೆ ಸಲ್ಲಿಸುವುದು ದೊಡ್ಡಗುಣ ಎಂದು ನಿವೃತ್ತ ಶಿಕ್ಷಕ ಘ.ರಾಮಚಂದ್ರ ತಿಳಿಸಿದರು.

ಗ್ರಾಮದ ರಾಷ್ಟ್ರೀಯ ವಿದ್ಯಾಪೀಠ ಪ್ರೌಢಶಾಲೆಯ 1990 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಬಳಗ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಮನುಷ್ಯ ತಾನು ಪಡೆದ ಉಪಕಾರಕ್ಕೆ ಕೃತಜ್ಞತೆ ಸಲ್ಲಿಸಿದರೆ ಅದು ಅವನಲ್ಲಿರುವ ದೊಡ್ಡಗುಣವಾಗುತ್ತದೆ. ನಾವುಗಳು ಕೇವಲ ಮೂರು ವರ್ಷ ಪಾಠ ಹೇಳಿದ್ದೇವೆ. ಅದನ್ನು ಮರೆಯದೆ 32 ವರ್ಷಗಳ ಬಳಿಕ ನಮಗೆ ಗುರುವಂದನೆ ಸಲ್ಲಿಸುವ ಮೂಲಕ 1990 ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದ್ದೀರಿ. ಇದು ನಿಮ್ಮ ಹಿರಿತನಕ್ಕೆ ಸಾಕ್ಷಿಯಾಗಿದೆ ಎಂದರು.

IMG 20220313 162046

ನಿವೃತ್ತ ಪ್ರಾಂಶುಪಾಲರಾದ ಡಿ.ಎನ್.ಸುಬ್ಬಣ್ಣನವರು ಮಾತನಾಡಿ ಮಾತಾಪಿತೃಗಳನ್ನು ಮತ್ತು ಗುರುಗಳನ್ನು ಗೌರವಿಸುವುದು ಮತ್ತು ಪೂಜಿಸುವುದು ಈ ನೆಲದ ಸಂಸ್ಕೃತಿ. ಆ ಸಂಸ್ಕೃತಿಯನ್ನು ನಮ್ಮ ಈ ಶಾಲೆ ಕಲಿಸಿದೆ. ಗ್ರಾಮದ ಸ್ವಾತಂತ್ರ‍್ಯ ಹೋರಾಟಗಾರ ಕನಸಿನ ಕೂಸಾಗಿ 1952 ಆಗಸ್ಟ್ ೧೫ ರಂದು ಈ ಶಾಲೆ ಆರಂಭಗೊಂಡು 70 ವರ್ಷಗಳ ಸೇವೆ ಪೂರೈಸಿದೆ. ಸಾವಿರಾರು ವಿದ್ಯಾರ್ಥಿಗಳ ವಿದ್ಯಾರ್ಜನೆಯ ಕೇಂದ್ರವಾಗಿರುವ ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ವಿವಿಧ ಹುದ್ದೆಗಳನ್ನು ಸೇವೆ ಸಲ್ಲಿಸಿದ್ದಾರೆ. ಆದರೆ ಇಂದು ಹಲವು ಶಾಲೆಗಳ ಒತ್ತಡದ ಪರಿಣಾಮವಾಗಿ ತನ್ನ ಸುವರ್ಣ ಯುಗವನ್ನು ಕಳೆದು ಕೊಂಡಿದೆ. ಈ ಶಾಲೆಯಲ್ಲಿ ಓದಿರುವ ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ತವರು ಶಾಲೆಯ ಪ್ರಗತಿಗೆ ಶ್ರಮಿಸಬೇಕು ಎಂದು ತಿಳಿಸಿದರು.

IMG 20220313 161619

ಜಾತಿ ಮತ ವಯಸ್ಸು ಲಿಂಗಗಳನ್ನು ಮೀರಿ ಬೆಳೆದಿರುವುದು ಸ್ನೇಹ. ಶುದ್ಧ ಸ್ನೇಹಕ್ಕೆ ಸದಾ ಗೆಲುವು ಇರುತ್ತದೆ. ಇಂದಿನ ೧೯೯೦ ತಂಡ ಸ್ನೇಹ ಸಮ್ಮಿಲ ನಮ್ಮ ಹಳೆಯ ದಿನಗಳನ್ನು ನೆನಪಿಸುತ್ತದೆ. ಈ ತಂಡು ಕೇವಲ ಕಾರ್ಯಕ್ರಮಕ್ಕೆ ಸೀಮಿತವಾಗದೆ ಸಮಾಜ ಸೇವೆಯ ಚಿಂತನ ಮಾಡಬೇಕು ಎಂದು ಪಿ.ಎಸ್.ಐ.ಭಾರತಿ ತಿಳಿಸಿದರು.

ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಕ್ಕೆ ನಮ್ಮ ಬದುಕು ಸಾರ್ಥಕವೆನಿಸುತ್ತಿದ್ದೆ. ವಿದ್ಯಾರ್ಥಿಗಳು ಗುರುವಂದನೆ ಕಾರ್ಯಕ್ರಮದಡಿ ನಮಗೆ ನೀಡಿದ ಗೌರವಾದರಣಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ನಿವೃತ್ತ ಪ್ರಾಂಶುಪಾಲ ಮಹಮ್ಮದ್ ಹುಸೇನ್ ತಿಳಿಸಿದರು.

IMG 20220313 122853

ನಿವೃತ್ತ ಉಪಪ್ರಾಂಶುಪಾಲರಾದ ಎ.ಎನ್.ವೆಂಕಟರತ್ನಯ್ಯ, ಸಣ್ಣನಾಗಪ್ಪ, ಶೌಕತ್‌ಅಲಿ, ಶಿಕ್ಷಕರಾದ ಸಿ.ಟಿ.ನಾರಾಯಣ, ಎನ್.ಜಿ.ಸುಧಾಕರ್, ಶಿಕ್ಷಕ ಮೃತ್ಯುಂಜಯ ಮಾತನಾಡಿದರು.

IMG 20220312 171727


ಎರಡು ದಿನಗಳು ನಡೆದ ಪೂರ್ವ ವಿದ್ಯಾರ್ಥಿಗಳ ಅಪೂರ್ವ ಸಂಗಮ ಕಾರ್ಯಕ್ರಮದಲ್ಲಿ ಶನಿವಾರದಂದು ವಾದ್ಯ ಮೇಳಗಳೊಂದಿಗೆ ಗುರುವೃಂದವನ್ನು ಬೆಳ್ಳಿರಥದಲ್ಲಿ ಪುರಮೆರವಣಿಗೆ ನಡೆಸಲಾಯಿತು. ಹಳೆಯ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿ ಸಂತೋಷ ವ್ಯಕ್ತಪಡಿಸಿದರು.

IMG 20220312 171708
ಬಿಳ್ಳಿ ರಥ ದಲ್ಲಿ ಗುರುಗಳ ಮೆರವಣಿಗೆ

ರಾತ್ರಿ ರಸಸಂಜೆ ಕಾರ್ಯಕ್ರಮ ನೆರವೇರಿತು. ಭಾನುವಾರದಂದು ವೇದಿಕೆ ಕಾರ್ಯಕ್ರಮದಲ್ಲಿ ಎಲ್ಲಾ ಗುರುಗಳನ್ನು ವಿದ್ಯಾರ್ಥಿಗಳನ್ನು ಮತ್ತು ನಿಲಯಪಾಲಕರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಇ.ವಿ.ಶ್ರೀಧರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎನ್.ಆರ್.ಅಶ್ವಥ್ ಕುಮಾರ್, ನಿಲಯ ಪಾಲಕ ಶ್ರೀನಿವಾಸ, ಉಮಾಸುಬ್ಬಣ್ಣ ಇದ್ದರು.

ವರದಿ: ಸತೀಶ್