ನೀರಾವರಿ ಇಲಾಖೆಯಿಂದ ಅಗಸರ ಕುಂಟೆ ತಡೆಗೋಡೆಗೆ ಕಾಮಗಾರಿಗೆ 40 ಲಕ್ಷ ಮಂಜೂರು………
ಪಾವಗಡ. ಇಂದು ಪಟ್ಟಣದ ಅಗಸರ ಕುಂಟೆಗೆ ತಡೆಗೋಡೆ ನಿರ್ಮಾಣಕ್ಕೆ ಶಾಸಕ ವೆಂಕಟರಮಣಪ್ಪ ಗುದ್ದಲಿಪೂಜೆ ನೆರವೇರಿಸಿದರು. ನಂತರ ಅವರು ಮಾತನಾಡುತ್ತಾ , ಕಳೆದ ವರ್ಷ ಹೆಚ್ಚಿನ ಮಳೆಯಿಂದಾಗಿ ಅಗಸರ ಕುಂಟೆ ಕೋಡಿ ಹೊಡೆದು ರಸ್ತೆಗೆಲ್ಲಾ, ನೀರು ಹರಿದಿರುವುದನ್ನು ದೃಷ್ಟಿಯಲ್ಲಿಟ್ಟುಕೊಂಡು, ಅಗಸರು ಕುಂಟೆ ಅಭಿವೃದ್ಧಿಪಡಿಸುವ ಉದ್ದೇಶದಿಂದ ಇಂದು ತಡೆಗೋಡೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಲಾಗಿದೆ ಎಂದು, ಮಳೆ ನೀರು ಸರಾಗವಾಗಿ ಕುಂಟೆಗೆ ಬರುವಂತೆ 15 ಲಕ್ಷ ವೆಚ್ಚದ ಫೀಡರ್ ಚಾನಲ್ ಮಂಜೂರಾಗಿದೆ ಎಂದು, ತುಮಕೂರು ರಸ್ತೆಯಲ್ಲಿರುವ ಸಾಲುಮರದ ತಿಮ್ಮಕ್ಕ ಉದ್ಯಾನವನ ದಂತೆ , ಅಗಸರ ಕುಂಟೆಯನ್ನು ಮನರಂಜನಾ ಸ್ಥಳವನ್ನಾಗಿ ಮಾಡುವ ಉದ್ದೇಶದಿಂದ. ಬೋಟಿಂಗ್ ವ್ಯವಸ್ಥೆಯನ್ನು ಮಾಡಿ ವಾರಾಂತ್ಯದಲ್ಲಿ ಜನರು ಮನೋರಂಜನೆ ಪಡೆದುಕೊಳ್ಳಲು ಸಹಾಯಕವಾಗುವುದು ಎಂದರು
ಕುಂಟೆ ತುಂಬಾ ನೀರು ಸಂಗ್ರಹ ವಾಗುವುದರಿಂದ, ಕುಂಟೆ ಸುತ್ತಲೂ ಬೋರ್ ವೆಲ್ ಗಳ ಅಂತರ್ಜಲದ ಮಟ್ಟ ಹೆಚ್ಚಾಗಿದೆ ಎಂದು, ಬೇಸಿಗೆಯಲ್ಲಿ ಟ್ಯಾಂಕರ್ ಗಳ ಮೂಲಕ ಮನೆಗಳಿಗೆ ನೀರು ಒದಗಿಸುವ ಕೆಲಸ ಕಡಿಮೆಯಾಯಿತೆಂದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷೆ ಜಾಹ್ನವಿ ವಿಶ್ವನಾಥ್, ಮುಖ್ಯಾಧಿಕಾರಿ ಅರ್ಚನಾ, ಸದಸ್ಯ ಸುದೇಶ್ ಬಾಬು, ರಾಜೇಶ್, ರವಿ, ವೇಲು, ವೆಂಕಟರವಣಪ್ಪ, ಗೀತಾ ಹನುಮಂತರಾಯ, ಸುಧಾಲಕ್ಷ್ಮಿ, ಮುಖಂಡ ಹನುಮಂತರಾಯಪ್ಪ, ಪ್ರಮೋದ್ ಕುಮಾರ್, ಎಂ.ಎಸ್.ವಿಶ್ವನಾಥ್, ಅವಿನಾಶ್, ಪರಮೇಶ್ವರ್, ಮೈಲಪ್ಪ ಉಪಸ್ಥಿತರಿದ್ದರು.
ವರದಿ: ಶ್ರೀನಿವಾಸುಲು ಎ