ಕೋವಿಡ್19 ಹಿನ್ನೆಲೆಯಲ್ಲಿ ಕ್ರಿಮಿನಾಶಕ ಸಿಂಪಡಣೆ
ಪಾವಗಡ : ಇಂದು ಪ್ರಸಿದ್ಧ ಶ್ರೀ ಶನಿಮಹಾತ್ಮ ದೇವಸ್ಥಾನ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ನೈರ್ಮಲ್ಯೀಕರಣ ಕಾರ್ಯವನ್ನು ನಡೆಸಲಾಯಿತು. ಶ್ರಾವಣ ಮಾಸದ ಅಂಗವಾಗಿ ಶನಿವಾರ ಮತ್ತು ಭಾನುವಾರ ವಿವಿಧ ಕಡೆಗಳಿಂದ ಸುಮಾರು 20000ಕ್ಕೂ ಮಿಗಿಲಾದ ಭಕ್ತರು ಭೇಟಿ ನೀಡಿದ್ದರು. ಈ ಕಾರಣಕ್ಕಾಗಿಯೇ ಶ್ರೀ ರಾಮಕೃಷ್ಣ ಸೇವಾಶ್ರಮ ಮತ್ತು ಇನ್ಫೋಸಿಸ್ ಫೌಂಡೇಷನ್ ಸಹಯೋಗದಲ್ಲ್ಲಿ ದೇವಸ್ಥಾನ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ನೈರ್ಮಲ್ಯೀಕರಣ ಕಾರ್ಯವನ್ನು ನಡೆಸಲಾಯಿತು.
ಶ್ರೀಮತ್ ಸ್ವಾಮಿ ಜಪಾನಂದಜಿ ರವರ ಮಾರ್ಗದರ್ಶನದಲ್ಲಿ ಈ ಕಾರ್ಯವು ನೆರವೇರಿತು. ಪುರಸಭಾ ಸದಸ್ಯರಾದ ಶ್ರೀ ಸುದೇಶ್ ಕುಮಾರ್ ರವರು ಈ ಕಾರ್ಯದಲ್ಲಿ ಕೈಜೋಡಿಸಿದರು. ಸ್ಥಳೀಯರಾದ ಶ್ರೀ ಟಪಾಲ್ ನಾಗರಾಜು, ಮತ್ತಿತರರು ಈ ಕಾರ್ಯದಲ್ಲಿ ಸಹಾಯ ಮಾಡಿದರು. ಇಂತಹ ಪ್ರಮುಖ ಮತ್ತು ಸಮಯೋಚಿತ ಕಾರ್ಯಕ್ರಮದಲ್ಲಿ ವಿವೇಕಾನಂದ ತಂಡದ ಸದಸ್ಯರು ಎಂದಿನಂತೆ ಭಾಗವಹಿಸಿದ್ದರು.
ಸ್ವಾಮಿ ವಿವೇಕಾನಂದ ತಂಡ ಈ ಕಾರ್ಯಕ್ರಮದಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡು ಶ್ರೀ ಶನಿಮಹಾತ್ಮ ಸರ್ಕಲ್ ಮತ್ತು ಸುತ್ತಮುತ್ತಲ ವ್ಯಾಪಾರ ಸ್ಥಳಗಳನ್ನು ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಮುಚ್ಚಯವನ್ನು ಕೂಡಿದಂತೆ ನೈರ್ಮಲ್ಯೀಕರಣದ ಕಾರ್ಯವನ್ನು ನಡೆಸಿದರು. ಈ ಸಮಯೋಚಿತ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.