IMG 20200817 201158

ಖ್ಯಾತ ಗಾಯಕ ಪಂಡಿತ್ ಜಸರಾಜ್ ವಿಧಿವಶ..

National - ಕನ್ನಡ

ಖ್ಯಾತ ಗಾಯಕ ಪದ್ಮವಿಭೂಷಣ,
ಪಂಡಿತ್  ಜಸರಾಜ್  ನಿಧನ.

ವಿಶ್ವವಿಖ್ಯಾತ ಭಾರತೀಯ ಶಾಸ್ತ್ರೀಯ ಸಂಗೀತ ಗಾಯಕ ಪಂಡಿತ್ ಜಸ್ ರಾಜ್ ಅಮೆರಿಕದ ನ್ಯೂ ಜರ್ಸಿ ಯಲ್ಲಿ ಇಂದು  ವಿಧಿವಶರಾದರು.ಈ ವರ್ಷದ ಜನವರಿಗೆ 90 ವರ್ಷ ತುಂಬಿತ್ತು.14 ನೇ ವಯಸ್ಸಿನಲ್ಲೇ ಗಾಯಕರಾಗಿ ತರಬೇತಿ ಆರಂಭಿಸಿದ್ದರು.

Pandit Jasraj at Govind Dev Ji Temple Jaipur 2011
SAMSUNG

ಇವರ ನಿಧನದಿಂದ  ಭಾರತೀಯ ಸಂಗೀತ ಲೋಕ ಬಡವಾಗಿದೆ. ತಮ್ಮ 80 ವರ್ಷಗಳ ಕಲಾಸೇವೆಯಲ್ಲಿ ಅಸಂಖ್ಯಾತ ಅಭಿಮಾನಿ ಬಳಗವನ್ನು ಗಳಿಸಿದ್ದ ಅವರು ಹಲವಾರು ಗಾಯಕರಿಗೆ ಮಾರ್ಗದರ್ಶಕರಾಗಿದ್ದರು.1280px Jasraj 001

ಪಂಡಿತ್ ಜಸ್ ರಾಜ್

ಪಂಡಿತ್ ಜಸ್ ರಾಜ್ ರವರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಪ್ರಮುಖ ಗಾಯಕರಲ್ಲಿ ಒಬ್ಬರು.ಮೇವಾಟಿ ಘರಾಣದ ಅದ್ವರ್ಯುವಾದ ಇವರು 1930  ರಲ್ಲಿ ಹರ್ಯಾಣ ರಾಜ್ಯದ ಹಿಸ್ಸಾರ್ ಎಂಬಲ್ಲಿ ಜನಿಸಿದರು

.ಪ್ರಾಥಮಿಕ ಸಂಗೀತ ಅಭ್ಯಾಸವನ್ನು ತನ್ನ ಸಹೋದರ ಪಂಡಿತ್ ಮಣಿರಾಮ್ ರವರಿಂದ ಪಡೆದರು.ಹಲವಾರು ಪ್ರಶಸ್ತಿಗಳನ್ನು ಪಡೆದ ಇವರು ಭಾರತದ ಉದ್ದಗಲ ಜನಪ್ರಿಯತೆಯನ್ನುಗಳಿಸಿ ಕೊಂಡಿದ್ದಾರೆ.IMG 20200817 201147

1997- 98ರಲ್ಲಿ ಕಾಳಿದಾಸ ಸಮ್ಮಾನ್ಪ್ರಶಸ್ತಿ, 2000ದಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ದೊರೆಯಿತು.ಇವರ ಶಿಷ್ಯರಲ್ಲಿ ಸಂಜೀವ ಅಭ್ಯಂಕರ್, ಹಿಂದಿ ಚಿತ್ರರಂಗದ ಸಾಧನಾ ಸರ್ ಗಮ್ ಮುಂತಾದವರು ಪ್ರಮುಖರು.

ಇವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶಾದ್ಯಂತ ಸಂಗೀತ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ರಿಂದ ಸಂತಾಪ